
ಪವನ್ ಕಲ್ಯಾಣ್ ಸದ್ಯ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಇದರ ನಡುವೆಯೂ ಅವರು ಸಿನಿಮಾ ಮಾಡುತ್ತಿದ್ದಾರೆ. 'ಓಜಿ' ಸಿನಿಮಾ ಸೂಪರ್ ಹಿಟ್ ಆದ ಹಿನ್ನೆಲೆಯಲ್ಲಿ, ಇದೀಗ 'ಓಜಿ 2' ಅನ್ನು ಪೂರ್ಣಗೊಳಿಸುವ ಬಗ್ಗೆ ಪವನ್ ಗಮನ ಹರಿಸಿದ್ದಾರೆ.
ಈಗಾಗಲೇ 'ಓಜಿ 2' ಬಗ್ಗೆ ಘೋಷಣೆ ಹೊರಬಿದ್ದಿದೆ. ನಿರ್ದೇಶಕ ಸುಜೀತ್ ಜೊತೆ ಕಥೆಯ ಚರ್ಚೆಗಳು ಶುರುವಾಗಿವೆ. 'ಓಜಿ 2'ಗಾಗಿ ತಾನು ಏನು ಬೇಕಾದರೂ ಮಾಡಲು ಸಿದ್ಧ ಎಂದು ಪವನ್, ಸುಜೀತ್‌ಗೆ ಭರವಸೆ ನೀಡಿದ್ದಾರೆ. ಅಭಿಮಾನಿಗಳು ಇದೀಗ ಚಿತ್ರದ ಲಾಂಚ್‌ಗಾಗಿ ಕಾಯುತ್ತಿದ್ದಾರೆ.
ಇದೀಗ 'ಓಜಿ 2' ಕಥೆಯ ಬಗ್ಗೆ ಒಂದು ವಿಚಾರ ವೈರಲ್ ಆಗುತ್ತಿದೆ, ಅದೇ ಸುಭಾಷ್ ಚಂದ್ರ ಬೋಸ್ ಅವರ ಎಳೆ. ಜಪಾನ್‌ನಿಂದ ಓಜಿಯನ್ನು ಹುಡುಕಿಕೊಂಡು ಬರುವ ವಿಲನ್‌ಗೂ, ಗಂಭೀರಾಗೂ ನಡೆಯುವ ಯುದ್ಧವೇ ಈ ಚಿತ್ರದ ಕಥೆ ಎನ್ನಲಾಗುತ್ತಿದೆ. ಈ ಚಿತ್ರದ ಕಥೆಯು 1940, 1973, 1993ರ ಕಾಲಘಟ್ಟದಲ್ಲಿ ನಡೆಯಲಿದೆ.
1940ರ ಕಾಲಘಟ್ಟದಲ್ಲಿ ಬರುವ ದೃಶ್ಯಗಳಲ್ಲಿ ಸುಭಾಷ್ ಚಂದ್ರ ಬೋಸ್ ಅವರ ವಿಚಾರವೂ ಇರಲಿದೆ ಎನ್ನಲಾಗುತ್ತಿದೆ. ಕಥೆಯ ಪ್ರಮುಖ ಟ್ವಿಸ್ಟ್ ಕೂಡ ಇಲ್ಲೇ ಇರಲಿದೆ ಎಂಬುದು ಸದ್ಯದ ಮಾತು. ಸ್ವಾತಂತ್ರ್ಯ ಹೋರಾಟಗಾರರಾಗಿ ಸುಭಾಷ್ ಚಂದ್ರ ಬೋಸ್ ಅವರಿಗಿರುವ ಗೌರವದ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ.
ಈ ದೃಶ್ಯಗಳನ್ನು ನಿರ್ದೇಶಕ ಸುಜೀತ್ ಕಥೆಯಲ್ಲಿ ಸರಿಯಾಗಿ ಸೇರಿಸಿದರೆ 'ಓಜಿ 2' ದಾಖಲೆಗಳನ್ನು ಮುರಿಯಲಿದೆ ಎಂದು ಅಭಿಮಾನಿಗಳು ಈಗಿನಿಂದಲೇ ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಚಿತ್ರವನ್ನು ಪವನ್ ಕಲ್ಯಾಣ್ ತಮ್ಮದೇ ಪವನ್ ಕಲ್ಯಾಣ್ ಕ್ರಿಯೇಟಿವ್ ವರ್ಕ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.