30 ನಿಮಿಷ ಕಣ್ಣು ಮಿಟುಕಿಸದಂತೆ ಮಾಡಲಿದೆಯಂತೆ: ರಾಜಮೌಳಿಯ ‘ವಾರಣಾಸಿ’ಯ ಆ ವಾರ್ ಸೀಕ್ವೆನ್ಸ್ ಏನು?

Published : Sep 27, 2026, 03:53 PM IST
Mahesh Babu Varanasi

ಸಾರಾಂಶ

ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಮಹೇಶ್ ಬಾಬು ಅಭಿನಯದ ‘ವಾರಣಾಸಿ’ ಸಿನಿಮಾದಲ್ಲಿ ಸುಮಾರು 30 ನಿಮಿಷಗಳ ಭರ್ಜರಿ ಯುದ್ಧದ ಸನ್ನಿವೇಶ ಇರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಶ್ರೀರಾಮನ ಉಲ್ಲೇಖ ಹಿನ್ನೆಲೆಗಳ ಬಗ್ಗೆ ಕುತೂಹಲ ಹೆಚ್ಚಿದೆ.

ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಗ್ಲೋಬಲ್ ಪ್ರಾಜೆಕ್ಟ್ ‘ವಾರಣಾಸಿ’ ಸದ್ಯ ಭಾರತೀಯ ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿರುವ ಸಿನಿಮಾ. ಸೂಪರ್‌ಸ್ಟಾರ್ ಮಹೇಶ್ ಬಾಬು ಈ ಚಿತ್ರಕ್ಕಾಗಿ ಈಗಾಗಲೇ ಭರ್ಜರಿ ತಯಾರಿ ಮಾಡಿಕೊಂಡಿದ್ದು, ಇತ್ತೀಚೆಗೆ ತಮ್ಮ ಶೂಟಿಂಗ್‌ನ್ನೂ ಪೂರ್ಣಗೊಳಿಸಿದ್ದಾರೆ ಎನ್ನಲಾಗಿದೆ. ಶೂಟಿಂಗ್ ಮುಗಿದ ಬಳಿಕ ಗಡ್ಡ ತೆಗೆದ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಮಹೇಶ್ ಬಾಬು ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಇದರ ನಡುವೆ ‘ವಾರಣಾಸಿ’ ಸಿನಿಮಾಗೆ ಸಂಬಂಧಿಸಿದ ಮತ್ತೊಂದು ಇಂಟರೆಸ್ಟಿಂಗ್ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು ‘ರುದ್ರ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ರಾಜಮೌಳಿ ಶೈಲಿಯ ಆ್ಯಕ್ಷನ್ ಮತ್ತು ಅಡ್ವೆಂಚರ್ ಅಂಶಗಳೊಂದಿಗೆ ಸಿನಿಮಾ ಮೂಡಿಬರುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ ಸಿನಿಮಾದಲ್ಲಿ ಬರೋಬ್ಬರಿ 30 ನಿಮಿಷಗಳ ಕಾಲ ಸಾಗುವ ಭರ್ಜರಿ ಯುದ್ಧದ ಸನ್ನಿವೇಶ ಇರಲಿದೆ ಎಂಬ ಸುದ್ದಿ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.

ಈ ವಾರ್ ಸೀಕ್ವೆನ್ಸ್ ಸಿನಿಮಾದಲ್ಲೇ ಪ್ರಮುಖ ಘಟ್ಟವಾಗಿರಲಿದೆ ಎನ್ನಲಾಗುತ್ತಿದ್ದು, ಈ ಸನ್ನಿವೇಶದಲ್ಲಿ ಶ್ರೀರಾಮನ ಉಲ್ಲೇಖವೂ ಇರಲಿದೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸುಮಾರು 30 ನಿಮಿಷಗಳ ಕಾಲ ನಡೆಯುವ ಈ ಯುದ್ಧದ ದೃಶ್ಯವನ್ನು ರಾಜಮೌಳಿ ಯಾವ ಮಟ್ಟಿಗೆ ಅದ್ಧೂರಿಯಾಗಿ ಕಟ್ಟಿಕೊಡಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಭಾರತದಿಂದ ಅಂಟಾರ್ಕ್ಟಿಕಾ, ಆಫ್ರಿಕಾ, ಪ್ರಾಚೀನ ರೋಮ್‌ವರೆಗೆ!

‘ವಾರಣಾಸಿ’ಯ ಕಥೆ ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ ಎಂಬ ಮತ್ತೊಂದು ಸುದ್ದಿ ಕೂಡ ಕೇಳಿಬರುತ್ತಿದೆ. ಕಥೆಯ ಭಾಗವಾಗಿ ಭಾರತದ ವಾರಣಾಸಿ ಮಾತ್ರವಲ್ಲದೆ, ಅಂಟಾರ್ಕ್ಟಿಕಾ, ಆಫ್ರಿಕಾ ಮತ್ತು ಪ್ರಾಚೀನ ರೋಮ್ ಸೇರಿದಂತೆ ಹಲವು ವಿಭಿನ್ನ ಸ್ಥಳಗಳು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿವೆ ಎನ್ನಲಾಗಿದೆ. ಬೇರೆ ಬೇರೆ ಭೌಗೋಳಿಕ ಹಿನ್ನೆಲೆಗಳಲ್ಲಿ ಕಥೆಯನ್ನು ಮುಂದುವರಿಸುವುದರ ಜೊತೆಗೆ, ಭರ್ಜರಿ ಆ್ಯಕ್ಷನ್ ಮತ್ತು ಅಡ್ವೆಂಚರ್ ಅಂಶಗಳನ್ನು ಸಿನಿಮಾದಲ್ಲಿ ಸೇರಿಸಲಾಗುತ್ತಿದೆ ಎಂಬ ಟಾಕ್ ಇದೆ. ಹೀಗಾಗಿ ‘ವಾರಣಾಸಿ’ಯ ಕಥಾ ಜಗತ್ತು ಎಷ್ಟು ವಿಶಾಲವಾಗಿರಲಿದೆ ಎಂಬ ಕುತೂಹಲ ಈಗಲೇ ಶುರುವಾಗಿದೆ.

ಎರಡು ಭಾಗಗಳಲ್ಲ... ಒಂದೇ ಸಿನಿಮಾದಲ್ಲೇ ಕಥೆ?

ಭಾರೀ ಕಥೆ ಮತ್ತು ವಿಶಾಲ ಕಥಾ ಜಗತ್ತು ಹೊಂದಿರುವ ಸಿನಿಮಾಗಳನ್ನು ಇತ್ತೀಚಿನ ದಿನಗಳಲ್ಲಿ ಎರಡು ಭಾಗಗಳಾಗಿ ನಿರ್ಮಿಸುವುದು ಸಾಮಾನ್ಯವಾಗಿದೆ. ಆದರೆ ‘ವಾರಣಾಸಿ’ ವಿಚಾರದಲ್ಲಿ ಮತ್ತೊಂದು ಕುತೂಹಲಕಾರಿ ಸುದ್ದಿ ಕೇಳಿಬರುತ್ತಿದೆ. ಇಷ್ಟೊಂದು ದೊಡ್ಡ ಕಥೆಯನ್ನು ಎರಡು ಭಾಗಗಳಾಗಿ ಮಾಡದೆ ಒಂದೇ ಸಿನಿಮಾದಲ್ಲೇ ಪ್ರೇಕ್ಷಕರ ಮುಂದೆ ತರಲು ರಾಜಮೌಳಿ ಪ್ಲಾನ್ ಮಾಡಿದ್ದಾರಂತೆ. ಹಾಗಾದರೆ ಇಷ್ಟೊಂದು ವಿಶಾಲವಾದ ಕಥೆಯನ್ನು ಒಂದೇ ಸಿನಿಮಾದಲ್ಲಿ ಹೇಗೆ ಹೇಳಲಿದ್ದಾರೆ? ಕಥೆಯ ನಿರೂಪಣೆ ಯಾವ ಮಟ್ಟಿಗೆ ಇರಲಿದೆ? ಆ್ಯಕ್ಷನ್, ಅಡ್ವೆಂಚರ್ ಜೊತೆಗೆ ಪೌರಾಣಿಕ ಅಂಶಗಳನ್ನು ರಾಜಮೌಳಿ ಯಾವ ರೀತಿಯಲ್ಲಿ ಬೆರೆಸಲಿದ್ದಾರೆ? ಎಂಬ ಪ್ರಶ್ನೆಗಳು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸುತ್ತಿವೆ.

ಮಹೇಶ್-ರಾಜಮೌಳಿ ಕಾಂಬಿನೇಷನ್ ಮೇಲೆ ಭಾರೀ ನಿರೀಕ್ಷೆ ಮಹೇಶ್ ಬಾಬು ಮತ್ತು ಎಸ್‌.ಎಸ್‌. ರಾಜಮೌಳಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಮೊದಲ ಸಿನಿಮಾ ‘ವಾರಣಾಸಿ’ ಆಗಿರುವುದರಿಂದ ಸಹಜವಾಗಿಯೇ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ. ಇದೀಗ 30 ನಿಮಿಷಗಳ ಭರ್ಜರಿ ಯುದ್ಧದ ಸನ್ನಿವೇಶ, ವಿಭಿನ್ನ ದೇಶಗಳು ಮತ್ತು ಕಾಲಘಟ್ಟಗಳ ಹಿನ್ನೆಲೆ, ಪೌರಾಣಿಕ ಅಂಶಗಳು ಸೇರಿದಂತೆ ಸಿನಿಮಾಗೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಸುದ್ದಿಗಳು ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿವೆ. ಇನ್ನು ಎಲ್ಲಕ್ಕಿಂತ ಮುಖ್ಯವಾಗಿ, ‘ವಾರಣಾಸಿ’ ಸಿನಿಮಾ 2027ರ ಏಪ್ರಿಲ್ 7ರಂದು ತೆರೆಗೆ ಬರಲಿದೆ ಎಂಬ ನಿರೀಕ್ಷೆಯೊಂದಿಗೆ ಚಿತ್ರದ ಬಿಡುಗಡೆ ದಿನಾಂಕದತ್ತ ಎಲ್ಲರ ಕಣ್ಣು ನೆಟ್ಟಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಹಿಳೆ, ಕೆಲಸದಲ್ಲಿ 'ಮದರ್​ ಇಂಡಿಯಾ', ನೋಡಲು 'ಮಿಸ್​ ಇಂಡಿಯಾ' ಆಗಿರಬೇಕು ಅಂತಾರೆ! ನಟಿ ಟ್ವಿಂಕಲ್​ ಖನ್ನಾ
'ಕೆಲವು ಗಂಡಸರು ನನ್ನನ್ನು ಹಿಂಬಾಲಿಸುತ್ತಿದ್ದಾರೆ': ನಟಿ ಕೃತಿ ಸನೋನ್ ಪೋಸ್ಟ್ ವೈರಲ್