
ನವದೆಹಲಿ(ಮಾ.12): ವಿವಾದದ ತಾರೆ ಎಂದು ಹೆಸರಾಗಿರುವ ಪಾಕಿಸ್ತಾನದ ನಟಿ ವೀಣಾ ಮಲ್ಲಿಕ್'ಳ ದಾಂಪತ್ಯ ಮುರಿದು ಬಿದ್ದಿದೆ.
ಪತಿ ಅಸಾದ್ ಖಟ್ಟಾಕ್' ಗೆ ನಟಿ ವೀಣಾ ಮಲ್ಲಿಕ್ ವಿಚ್ಚೇದನ ನೀಡಿದ್ದಾರೆ. ಮೂರು ವರ್ಷದ ಹಿಂದೆ ಅಸಾದ್ ಅವರನ್ನು ಮದುವೆಯಾಗಿದ್ದ ತಾರೆ ವಿಚ್ಚೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿರುವ ಕಾರಣ ಒಟ್ಟಿಗೆ ಬಾಳಲು ಸಾಧ್ಯವಾಗುತ್ತಿಲ್ಲ ಎಂದು ಲಾಹೋರ್ ಕೌಟಿಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಸಮನ್ಸ್'ಗೆ ಆಸದ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಕಾರಣದಿಂದ ಕೋರ್ಟ್ ವಿಚ್ಚೇದನ ನೀಡಿದೆ. ವೀಣಾ ತನ್ನ ಗಂಡನಿಗೆ ವರದಕ್ಷಿಣಿಯ ಶೇ.25 ರಷ್ಟು ಹಣ ನೀಡಬೇಕಾಗುತ್ತದೆ. ಭಾರತದಲ್ಲಿ ನಡೆದ ಬಿಗ್ ಬಾಸ್ ಸ್ಪರ್ಧೆಯ ಸೀಸನ್ 4ರಲ್ಲಿ ವೀಣಾ ಮಲ್ಲಿಕ್ ಭಾಗವಹಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.