
ನವದೆಹಲಿ (ಜ.31): ‘ಪದ್ಮಾವತಿ’ಗೆ ಸಂಬಂಧಿಸಿದಂತೆ ಸಂಜಯ್ ಲೀಲಾ ಬನ್ಸಾಲಿ ರಾಜಪೂತ್ ಸಭಾ ಹಾಗೂ ಕರ್ಣಿ ಸಭಾದೊಂದಿಗೆ ಲಿಖಿತ ಒಪ್ಪಂದಕ್ಕೆ ಮುಂದಾಗಿದ್ದಾರೆ.
ರಾಣಿ ಪದ್ಮಾವತಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ನಡುವಿನ ರೋಮ್ಯಾಂಟಿಕ್ ಸೀನ್ ಅಥವಾ ಹಾಡಿನ ದೃಶ್ಯ ಚಿತ್ರದಲ್ಲಿ ಇದೆ ಎನ್ನಲಾಗಿದೆ. ಇದನ್ನು ಖಂಡಿಸಿ ಜೈಪುರದಲ್ಲಿ ಫಿಲ್ಮ್ ಸೆಟ್ಟನ್ನು ಕರ್ಣಿ ಸೇನಾದವರು ಧ್ವಂಸ ಮಾಡಿ ಬನ್ಸಾಲಿ ಮೇಲೆ ಹಲ್ಲೆ ಮಾಡಿದ್ದರು.
ಪದ್ಮಾವತಿ ಚಿತ್ರದಲ್ಲಿ ರಾಣಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ನಡುವೆ ಯಾವುದೇ ರೀತಿಯ ಪ್ರೇಮ ಸಲ್ಲಾಪಗಳನ್ನು ತೋರಿಸಲಾಗಿಲ್ಲ. ಈ ವಿಷಯದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ಚಿತ್ರ ತಯಾರಿಸಲಾಗಿದೆ. ಕತೆಯನ್ನು ತಪ್ಪಾಗಿ ಬಿಂಬಿಸಿ ಯಾರೊಬ್ಬರ ಭಾವನೆಗೂ ಧಕ್ಕೆ ತರುವುದು ನಮ್ಮ ಉದ್ದೇಶವಲ್ಲ. ಕರ್ಣಿ ಸೇನಾ ಅಥವಾ ರಜಪೂತ್ ಸಭಾಗೆ ಏನಾದರೂ ಸಂದೇಹ, ಡಿಮ್ಯಾಂಡ್ ಗಳಿದ್ದರೆ ನಮ್ಮ ಮುಂದೆ ಇಡಲಿ ಎಂದು ಬನ್ಸಾಲಿ ಸ್ಪಷ್ಟಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.