
ನವದೆಹಲಿ(ಜ.31): ಬಿಗ್ ಬಾಸ್ ಸೀಜನ್ 10ರಲ್ಲಿ ಜಯಶಾಲಿಯಾಗಿ ದೇಶದ ಯುವಕರು ಹಾಗೂ ಸಾಮಾನ್ಯ ಜನರ ಮನಗೆದ್ದು ಹೀರೋ ಆದ ಮನ್ವೀರ್ ಗುರ್ಜರ್'ನ ಅಸಲಿಯತ್ತು ಬಯಲಾಗಿದೆ. ಭಾರತೀಯರ ವಿಶ್ವಾಸ ಗಳಿಸಿ, ಮನಗೆದ್ದು ಬಿಗ್'ಬಾಸ್ ಗದ್ದುಗೆ ಏರಿದ್ದ ಈ ಸಾಮಾನ್ಯ ಯುವಕ ಮನ್ವೀರ್ ಇಡೀ ದೇಶದ ಜನರಿಂದ ಸತ್ಯವೊಂದನ್ನು ಮುಚ್ಚಿಟ್ಟಿದ್ದಾನೆ. ದೇಶದ ಜನರಿಂದ ಮುಚ್ಚಿಟ್ಟ ಸತ್ಯ ಇದೀಗ ಸಾಮಾಜಕ ಜಾಲಾತಾಣಗಳಲ್ಲಿ ವೈರಲ್ ಆದ ವಿಡಿಯೋ ಮೂಲಕ ಬಹಿರಂಗಗೊಂಡಿದೆ. ದೇಶದ ಜನರಿಂದ ಆತ ಮುಚ್ಚಿಟ್ಟ ಆ ಸತ್ಯ ಏನು ಅಂತೀರಾ? ಇಲ್ಲಿದೆ ವಿವರ
ಮನ್ವೀರ್ ತನ್ನ ಜೀವನದ ಬಹುದೊಡ್ಡ ವಿಚಾರವನ್ನು ಮುಚ್ಚಿಡುವ ಮೂಲಕ ಇಡೀ ದೇಶದ ಜನರು, ತನ್ನ ಸಹ ಸ್ಪರ್ಧಿಗಳು ಅದರಲ್ಲೂ ಮುಖ್ಯವಾಗಿ ನಿತಿಭಾ ಕೌಲ್'ಗೆ ಮೋಸ ಮಾಡಿದ್ದಾನೆ. ಇನ್ನು ನೀವು ಹಿಂದಿ ಬಿಗ್ ಬಾಸ್ ವೀಕ್ಷಕರು ಹಾಗೂ ಮನ್ವೀರ್ ಗುರ್ಜರ್ ಅಭಿಮಾನಿಗಳಾಗಿದ್ದಲ್ಲಿ ನಿಮಗೂ ಶಾಕ್ ತಗುಲುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ ತಾನು ಸಿಂಗಲ್ ಎಂದು ಹೇಳಿ ತನ್ನನ್ನು ಪರಿಚಯಿಸಿಕೊಂಡಿದ್ದ ಮನ್ವೀರ್ ವಿವಾಹಿತನೆಂಬ ವಿಚಾರ ಬಯಲಾಗಿದೆ. ಮನ್ವೀರ್ ಕಳೆದ 5-6 ವರ್ಷಗಳ ಹಿಂದೆ ಮದುವೆಯಾಗಿದ್ದು, ಅವರ ಸಂಪ್ರದಾಯದಂತೆ ಮದುಮಗನ ಉಡುಪಿನಲ್ಲಿ ಕುದುರೆ ಏರಿರುವ ಹಾಗೂ ಮದುಮಗಳೊಂದಿಗಿರುವ ಫೋಟೋಗಳು ಈಗ ಲೀಕ್ ಆಗಿವೆ. ಮಾಧ್ಯಮಗಳು ಬಿತ್ತರಿಸಿದ ಸುದ್ದಿಯನ್ವಯ ಈ ವಿಡಿಯೋ ಹಾಗೂ ಫೋಟೋಗಳು ಅವರ ಪರಿಚಯಸ್ಥನಾಗಿರುವ ಮನೀಷ್ ಭಾಟಿಯಾ ಎಂಬಾತ ಲೀಕ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಆತ ಮನ್ವೀರ್'ನನ್ನು ಮೋಸಗಾರ ಎಂದು ಬಣ್ಣಿಸಿದ್ದಾನೆ.
ಇಷ್ಟೇ ಅಲ್ಲದೆ ಮನ್ವೀರ್'ಗೆ 4 ವರ್ಷದ ಮಗಳೂ ಇದ್ದಾಳೆ ಎಂಬ ವಿಚಾರ ತಿಳಿದು ಬಂದಿದೆ. ಗಮನಿಸಬೇಕಾದ ವಿಚಾರವೆಂದರೆ ಬಿಗ್ ಬಾಸ್ ಸೀಜನ್'ನಲ್ಲಿ ಮನ್ವೀರ್ ಕೇವಲ ತನಗೆ ಲಾಭ ತರಿಸಿಕೊಳ್ಳುವ ವಿಚಾರಗಳನ್ನಷ್ಟೇ ಹಂಚಿಕೊಂಡರು. ಆದರೆ ತನ್ನ ಮದುವೆಯ ಗುಟ್ಟನ್ನು ಮಾತ್ರ ಎಲ್ಲೂ ಬಿಚ್ಚಿಡಲಿಲ್ಲ. ಇವರ ತಂದೆ, ತಾಯಿ, ಅಣ್ಣ, ಅತ್ತಿಗೆಯ ಸಂದರ್ಶನವನ್ನೂ ಹಲವಾರು ಮಾಧ್ಯಮಗಳು ಮಾಡಿದ್ದು, ಇವರೂ ಈ ವಿಚಾರವನ್ನು ಎಲ್ಲೂ ಬಹಿರಂಗಪಡಿಸಿಲ್ಲ.
ಈ ಶಾಕಿಂಗ್ ಸುದ್ದಿಯನ್ನು ಪ್ರಸಾರ ಮಾಡಿರುವ ಟ್ರಾಯ್ಸಿಟಿ ಹೆಸರಿನ ವೆಬ್'ಸೈಟ್ ಮನ್ವೀರ್ ಪತ್ನಿಯ ಹೆಸರು ಪ್ರೀತಿ ಎಂದು ತಿಳಿಸಿದೆ. ಅಲ್ಲದೆ ಈಕೆ ಮನ್ವೀರ್ ಮನೆಯಲ್ಲೇ ಇದ್ದಾಳೆ ಎಂದು ತಿಳಿಸಿದೆ. ಮನ್ವೀರ್ ಈ ವಿಚಾರವನ್ನು ಬಿಗ್ ಮನೆಯಲ್ಲಿ ಗೆಳತಿಯಾಗಿದ್ದ ನಿತಿಭಾ ಕೌಲ್'ನಿಂದಲೂ ಮುಚ್ಚಿಟ್ಟಿದ್ದಾನೆ.
ಸೂಚನೆ: ಈ ಸುದ್ದಿ ಡೈಲಿ ಭಾಸ್ಕರ್'ನಲ್ಲಿ ಪ್ರಸಾರವಾಗಿದ್ದು, ಇದರ ಸತ್ಯಾಸತ್ಯಗೆ ನಮ್ಮ ವೆಬ್'ಸೈಟ್ ಜವಾಬ್ದಾರವಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.