
ನವದೆಹಲಿ: ಎಎಲ್‌ಎಸ್ ಎಂಬ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಕೆಲ ವರ್ಷಗಳ ಹಿಂದಷ್ಟೇ ಐಸ್ ಬಕೆಟ್ ಚಾಲೆಂಜ್ ಎಂಬ ಆಂದೋಲನ ಜಗತ್ತಿನಾದ್ಯಂತ ಸದ್ದು ಮಾಡಿತ್ತು. ಇದೀಗ ಸ್ಯಾನಿಟರಿ ನ್ಯಾಪ್‌ಕೀನ್ ಬಳಕೆಯ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ಯಾಡ್ ಮನ್ ಚಾಲೆಂಜ್ ಎಂಬ ಆಂದೋಲನವೊಂದನ್ನು ನಟ ಅಕ್ಷಯ್ ಕುಮಾರ್ ಮತ್ತು ಅವರ ಪತ್ನಿ ಟ್ವಿಂಕಲ್ ಖನ್ನಾ ಆರಂಭಿಸಿದ್ದಾರೆ.
ಮುಟ್ಟಿನ ದಿನಗಳಲ್ಲಿ ಮಹಿಳೆಯರು ಬಳಸುವ ಸ್ಯಾನಿಟರಿ ನ್ಯಾಪ್‌ಕೀನ್ ಕುರಿತ ನೈಜ ಘಟನೆಯೊಂದನ್ನು ಆಧರಿಸಿ ‘ಪ್ಯಾಡ್‌ಮ್ಯಾನ್’ ಎಂಬ ಚಿತ್ರವೊಂದು ಇದೀಗ ನಿರ್ಮಾಣಗೊಂಡಿದೆ. ಟ್ವಿಂಕಲ್ ನಿರ್ಮಿಸಿರುವ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಹೀರೋ. ಈ ಹಿನ್ನೆಲೆಯಲ್ಲಿ ನ್ಯಾಪ್‌ಕೀನ್ ಬಗ್ಗೆ ಅರಿವು ಮೂಡಿಸಲು ಟ್ವಿಂಕಲ್ ಖನ್ನಾ ಪ್ಯಾಡ್‌ಮ್ಯಾನ್ ಆಂದೋಲನ ಆರಂಭಿಸಿದ್ದಾರೆ.
ಇದರ ಅನ್ವಯ ಅವರು ಅಮೀರ್ ಖಾನ್‌ಗೆ ಚಾಲೆಂಜ್ ಮಾಡಿದ್ದಾರೆ. ಚಾಲೆಂಜ್ ಸ್ವೀಕರಿಸಿರುವ ಅಮೀರ್ ತಾವು ಪ್ಯಾಡ್ ಹಿಡಿದುಕೊಂಡಿರುವ ಚಿತ್ರವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿದ್ದಾರೆ. ಇದರ ಬೆನ್ನಲ್ಲೇ ಅಮಿರ್ ಖಾನ್ ತಮ್ಮ ಸವಾಲನ್ನು ಸ್ವೀಕರಿಸುವಂತೆ ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಆಹ್ವಾನಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.