
ಮುಂಬೈ(ಜ.9): ಬಾಲಿವುಡ್ ಹಿರಿಯ ನಟ ಓಂಪುರಿ ಸಾವು ಅಸಹಜ ಅನ್ನೋ ಆಘಾತಕಾರಿ ಅಂಶ ಹೊರಬಿದ್ದಿದೆ. ಕಳೆದ ಶುಕ್ರವಾರ ಓಂಪುರಿ, ತೀವ್ರ ಹೃದಯಾಘಾತದಿಂದ ನಿಧನರಾಗಿದ್ರು. ಆದರೆ 66 ವರ್ಷದ ಓಂಪುರಿ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಅನ್ನೋ ವಿಷಯವನ್ನು ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ.
ಅಲ್ಲದೇ, ಓಂಪುರಿ ಸಾವು ಸಹಜವಾದ್ದುದ್ದಲ್ಲ ಅಂತ ಮರಣೋತ್ತರ ಪರೀಕ್ಷೆಯ ವರದಿ ಹೇಳಿದೆ.ಕೊನೆಯದಾಗಿ ಓಂಪುರಿ ಜತೆಗಿದ್ದ ಅವರ ಕಾರಿನ ಡ್ರೈವರ್ ಮತ್ತು ನಿರ್ಮಾಪಕರ ಖಾಲಿದ್ ಕಿದ್ವಾಯಿ ಸಹ ಹಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಓಂಪುರಿ ಸಾಯುವ ಹಿಂದಿನ ರಾತ್ರಿ ಮದ್ಯಪಾನ ಸೇವಿಸಿದ್ದರು ಮತ್ತು ತಮ್ಮ ಮಗ ಇಶಾನ್ನನ್ನು ಭೇಟಿಯಾಗಬೇಕೆಂದು ಹಪಹಪಿಸುತ್ತಿದ್ದರು. ಆದರೆ, ಮಗನನ್ನು ಭೇಟಿಯಾಗಬೇಕೆಂಬ ಅವರ ಆಸೆ ಈಡೇರಲಿಲ್ಲ ಅಂತ ಕಿದ್ವಾಯಿ ವಿವರಿಸಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ಹಿರಿಯ ನಟನ ಸಾವಿನ ಸುತ್ತ ಅನುಮಾನದ ಹುತ್ತಗಳು ಹುಟ್ಟಿಕೊಂಡಿದ್ದು, ತನಿಖೆಯಿಂದ ಸತ್ಯ ಹೊರಬೀಳಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.