
ಬೆಂಗಳೂರು(ಅ.4): ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯಿಸಿರುವ ಜಾಗ್ವಾರ್ ಚಿತ್ರ ಕನ್ನಡ ಮತ್ತು ತೆಲುಗುವಿನಲ್ಲಿ ಇನ್ನಷ್ಟೇ ಬಿಡುಗಡೆಯಾಗಬೇಕು. ಹಾಲಿವುಡ್ ತಂತ್ರಜ್ಞಾನ, ನುರಿತ ತಂತ್ರಜ್ಞರು ಅದ್ದೂರಿ ತಾರಾ ಬಳಗ ಹೊಂದಿರುವ ಜಾಗ್ವಾರ್ ಅ.6 ರಂದು 2 ರಾಜ್ಯಗಳಲ್ಲಿ ಬಿಡುಗಡೆಯಾಗಲಿದೆ.
ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ನಿಖಿಲ್ ಕುಮಾರಸ್ವಾಮಿ ಅಭಿನಯಿಸುತ್ತಿರುವ ಎರಡನೇ ಸಿನಿಮಾ ತೆಲುಗು ಮತ್ತು ಕನ್ನಡದಲ್ಲಿ ರೆಡಿಯಾಗಲಿದೆ. ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವವರು ತೆಲುಗಿನ ಸ್ಟಾರ್ ಡೈರಕ್ಟರ್.
ಕಿಕ್,ರೇಸ್ ಗುರ್ರಂ 'ನಂಥ ಸೂಪರ್ ಡೂಪರ್ ತೆಲುಗು ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಸುರೇಂದ್ರ ರೆಡ್ಡಿ ನಿಖಿಲ್ 2ನೇ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ತಂದೆ ಕುಮಾರಸ್ವಾಮಿ ಹುಟ್ಟು ಹಬ್ಬಕ್ಕೆ ವಿಶೇಷವಾಗಿ ಡಿಸೆಂಬರ್ 16 ರಂದು ಚಿತ್ರದ ಮೂಹೂರ್ತ ನೆರವೇರಲಿದೆ. ಮತ್ತೆ ಭರ್ಜರಿ ತಯಾರಿ ಮಾಡಿದ ನಂತರ ನಿಖಿಲ್ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಇನ್ನಷ್ಟೇ ಸಿನಿಮಾದ ಪೈನಲ್ ಟೀಂ ರೆಡಿಯಾಗಬೇಕಿದೆ. ಪಕ್ಕಾ ಆಕ್ಷನ್ ಒರಿಯೆಂಟೆಡ್ ಸಿನಿಮಾ ಇದಾಗಿರುತ್ತಂತೆ. ಈ ಮೂಲಕ ನಿಖಿಲ್ ಮತ್ತೆ ಎರಡೂ ಭಾಷೆಗಳಲ್ಲಿ ದರ್ಬಾರ್ ಮಾಡೋಕೆ ರೆಡಿಯಾಗಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.