Neha Dhupia: 'ಈ ಚಾಳಿ ಬಿಡಿ': 'ಬ್ಯಾಕ್ ಶಾಟ್' ತೆಗೆದ ಫೋಟೋಗ್ರಾಫರ್‌ಗಳ ಮೇಲೆ ನಟಿ ನೇಹಾ ಗರಂ!

Published : Jul 01, 2026, 09:26 PM IST
Neha Dhupia

ಸಾರಾಂಶ

ಮುಂಬೈ ಕಾರ್ಯಕ್ರಮವೊಂದರಲ್ಲಿ ನಟಿ ನೇಹಾ ಧೂಪಿಯಾ, ತಮ್ಮ 'ಬ್ಯಾಕ್ ಶಾಟ್' ಫೋಟೋಗಳನ್ನು ಕ್ಲಿಕ್ಕಿಸಿದ ಪಾಪರಾಜಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಇದು ಅಗೌರವದ ವರ್ತನೆ' ಎಂದು ಹೇಳಿದ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುಂಬೈ ಕಾರ್ಯಕ್ರಮವೊಂದರಲ್ಲಿ ನಟಿ ನೇಹಾ ಧೂಪಿಯಾ, ತಮ್ಮ 'ಬ್ಯಾಕ್ ಶಾಟ್' ತೆಗೆದ ಫೋಟೋಗ್ರಾಫರ್‌ಗಳ ವಿರುದ್ಧ ಗರಂ ಆಗಿದ್ದಾರೆ. ಇದು ಅಗೌರವದ ವರ್ತನೆ ಎಂದು ಹೇಳಿ, ಇಂತಹ ಫೋಟೋಗಳನ್ನು ಕ್ಲಿಕ್ಕಿಸುವುದನ್ನು ನಿಲ್ಲಿಸುವಂತೆ ನೇರವಾಗಿ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ಮಂಗಳವಾರ ಸಂಜೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ನೇಹಾ ಧೂಪಿಯಾ ಫೋಟೋಗ್ರಾಫರ್‌ಗಳ ಮೇಲೆ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಕೆಲವರು ತಮ್ಮ ಹಿಂದಿನಿಂದ ಫೋಟೋ (ಬ್ಯಾಕ್ ಶಾಟ್) ತೆಗೆಯುತ್ತಿದ್ದುದನ್ನು ಗಮನಿಸಿದ ನೇಹಾ, ಇದು 'ಅಗೌರವದ ವರ್ತನೆ' ಎಂದು ಹೇಳಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ಫೋಟೋಗಳನ್ನು ತೆಗೆಯುವುದನ್ನು ನಿಲ್ಲಿಸಬೇಕೆಂದು ನಟ-ನಟಿಯರು ಪದೇ ಪದೇ ಹೇಳುತ್ತಿದ್ದರೂ ಈ ಚಾಳಿ ಮುಂದುವರಿದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಘಟನೆಯ ವಿಡಿಯೋ ಈಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಅದರಲ್ಲಿ ನೇಹಾ, ಪಾಪರಾಜಿಗಳನ್ನುದ್ದೇಶಿಸಿ, ನಿಮ್ಮಲ್ಲಿ ಯಾರು ಈ ರೀತಿ ಅಸಭ್ಯವಾಗಿ ಬ್ಯಾಕ್ ಶಾಟ್ ತೆಗೆಯೋದು? ಯಾರು? ನಿಲ್ಲಿಸಿ ಎಂದು ನೇರವಾಗಿ ಗದರಿದ್ದಾರೆ. ನನ್ನ ಫೋಟೋ ಮಾತ್ರ ಅಲ್ಲ, ಯಾರ ಫೋಟೋನೂ ಈ ರೀತಿ ಹಿಂದಿನಿಂದ ತೆಗೆಯಬೇಡಿ. ಹೇಳಿ ಹೇಳಿ ಸಾಕಾಗಿದೆ. ಬ್ಯಾಗ್, ಬುಕ್ ಹಿಡಿದು, ಹಿಂದಕ್ಕೆ ನಡೆದುಕೊಂಡು ಹೋಗೋದೆಲ್ಲಾ ಇನ್ಮುಂದೆ ನಡೆಯಲ್ಲ. ಇದೆಲ್ಲಾ ನಿಲ್ಲಿಸಿ. ನಾವು ನಿಮ್ಮ ಜೊತೆ ಗೌರವದಿಂದ ಮಾತಾಡ್ತೀವಿ, ನೀವೂ ಹಾಗೇ ಇರಿ ಎಂದು ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಟ-ನಟಿಯರು ಮತ್ತು ಪಾಪರಾಜಿ ಸಂಸ್ಕೃತಿ

ಪಾಪರಾಜಿಗಳ ವರ್ತನೆ ವಿರುದ್ಧ ನಟ-ನಟಿಯರು ಧ್ವನಿ ಎತ್ತುತ್ತಿರುವುದು ಇದೇ ಮೊದಲೇನಲ್ಲ. ಈ ವರ್ಷದ ಆರಂಭದಲ್ಲಿ, ಮೇ ತಿಂಗಳಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದಾಗ ನಟ ಸಲ್ಮಾನ್ ಖಾನ್ ಕೂಡ ಫೋಟೋಗ್ರಾಫರ್‌ಗಳ ಮೇಲೆ ಅಸಮಾಧಾನಗೊಂಡಿದ್ದರು. ನಂತರ ಮಾಧ್ಯಮದವರು ನಟನ ಬಳಿ ಕ್ಷಮೆಯಾಚಿಸಿದ್ದರು.

ಆ ಘಟನೆಯ ನಂತರ, ಸಲ್ಮಾನ್ ಖಾನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ತಾನು ಯಾವಾಗಲೂ ಮಾಧ್ಯಮವನ್ನು ಬೆಂಬಲಿಸಿದ್ದೇನೆ, ಆದರೆ ಒಬ್ಬರ ನೋವನ್ನು ಬಳಸಿಕೊಂಡು ಕಂಟೆಂಟ್ ಮಾಡಲು ಫೋಟೋಗ್ರಾಫರ್‌ಗಳು ಪ್ರಯತ್ನಿಸಿದ್ದು ಬೇಸರ ತರಿಸಿದೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅವನ ಜೊತೆ ಸಮುದ್ರ ಪಕ್ಕದಲ್ಲೇ ಮನೆ ಮಾಡುವ ಆಸೆ ನಮ್ರತಾ ಗೌಡಗೆ?
ಪಳಾರ್‌ ಸಿನಿಮಾ: ಗಿಲ್ಲಿಗೆ ಕಾವ್ಯಾ ಶೈವನೇ ನಾಯಕಿ? ಸಕತ್‌ ಸದ್ದು ಮಾಡ್ತಿದೆ ಚಿತ್ರದ ಈ ಪೋಸ್ಟರ್‌