ಗರ್ಭಿಣಿಯಾಗಿದ್ದನ್ನು 6 ತಿಂಗಳು ನೇಹಾ ಮುಚ್ಚಿಟ್ಟಿದ್ದೇಕೆ?

Published : Sep 21, 2018, 03:56 PM ISTUpdated : Sep 21, 2018, 04:05 PM IST
ಗರ್ಭಿಣಿಯಾಗಿದ್ದನ್ನು 6 ತಿಂಗಳು ನೇಹಾ ಮುಚ್ಚಿಟ್ಟಿದ್ದೇಕೆ?

ಸಾರಾಂಶ

ಅಂತೂ ಇಂತೂ ಬಾಲಿವುಡ್ ನಟಿ ನೇಹಾ ಧೂಪಿಯಾ ತಾವು ಗರ್ಭಿಣಿ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ತಾವು ಗರ್ಭವತಿಯಾಗಿರುವುದನ್ನು ಬರೋಬ್ಬರಿ ಆರು ತಿಂಗಳ ನಂತರ ಹೇಳಿದ್ದು ನೇಹಾ ಹೀಗೆ ಯಾಕೆ ಮಾಡಿದರು? ಎನ್ನುವುದಕ್ಕೆ ಉತ್ತರ ಇಲ್ಲಿದೆ.

ಮುಂಬೈ(ಸೆ.21) ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಈ ವರ್ಷ ಮೇ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆ ವೇಳೆಗೆ ನೇಹಾ ಗರ್ಭಿಣಿ ಎಂಬ ವದಂತಿಗಳು ಹರಿದಾಡುತ್ತಿದ್ದವು. ನೇಹಾ ಸಾರ್ವಜನಿಕವಾಗಿ ಕಾಣಿಸಿಕೊಂಡಾಗಲೆಲ್ಲ ಕ್ಯಾಮರಾಗಳು ನೇಹಾರಲ್ಲಿ ತಾಯ್ತನ ಹುಡುಕುತ್ತಿದ್ದವು. ಆದರೆ ಉತ್ತರ ಸಿಕ್ಕಿರಲಿಲ್ಲ.

ನೇಹಾ ತಂದೆ ಸಹ ಆಕೆ ಗರ್ಭಿಣಿ ಅಲ್ಲ ಎಂದು ವಾದಿಸಿದ್ದರು. ಆದರೆ ಈ ಎಲ್ಲ ಪ್ರಶ್ನೆ-ಸಂಶಯಗಳಿಗೆ ನೇಹಾ ಧೂಪಿಯಾನೆ ಈಗ ಉತ್ತರ ನೀಡಿದ್ದಾರೆ. ತಮ್ಮ ತಾಯ್ತನ ಸಾರುವ ಫೋಟೋ ವನ್ನು ಸೋಶಿಯಲ್ ಮೀಡಯಾಕ್ಕೆ ಅಪ್ ಲೋಡ್ ಮಾಡಿದ್ದಾರೆ.

ಮದುವೆಗೂ ಮುನ್ನವೇ ಗರ್ಭಿಣಿಯಾದ ನಟಿಯರಿವರು

ಇದೊಂದು ಹೊಸ ಹುಟ್ಟಿನ ಆರಂಭ ಎಂದು ನೇಹಾ ಬರೆದುಕೊಂಡಿದ್ದಾರೆ. ಆಕೆಯೊಂದಿಗೆ ಪತಿ ಕೂಡಾ ಫೋಟೋದಲ್ಲಿ ಇದ್ದಾರೆ. ಇದೆಲ್ಲದರ ನಡುವೆ ನೇಹಾ ಫ್ಯಾಷನ್ ಶೋ ಒಂದರಲ್ಲಿ ಹೆಜ್ಜೆ ಹಾಕಿದ್ದು ಸದ್ದು ಮಾಡಿತ್ತು.


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!
ಸಂಭ್ರಮದಿಂದ ಕ್ರಿಸ್ಮಸ್ ಆಚರಿಸುತ್ತಿದ್ದಾರೆ Niveditha Gowda… ಶೋಕಿ ಎಂದ ಜನ