'ಬಿಗ್ ಬಾಸ್' ಅಬ್ಬರದ ನಡುವೆಯೂ 'ನ್ಯಾಷನಲ್ ಹವಾ' ಸೃಷ್ಟಿಸುತ್ತಿರುವ ರಶ್ಮಿಕಾ ಮಂದಣ್ಣ!

Published : Sep 28, 2025, 10:10 PM IST
Rashmika Mandanna

ಸಾರಾಂಶ

ರಶ್ಮಿಕಾ ಮಂದಣ್ಣ ಈಗ ತೆಲುಗು, ತಮಿಳು ಹಾಗೂ ಬಾಲಿವುಡ್‌ನ ಬಲು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಒಂದರ ಹಿಂದೆ ಒಂದರಂತೆ ಸತತವಾಗಿ ಮೂರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ‘ಪುಷ್ಪ 2’, ‘ಅನಿಮಲ್’ ಮತ್ತು ‘ಛಾವಾ’ ಸಿನಿಮಾಗಳು ಭಾರೀ ಹಣವನ್ನು ಗಳಿಸಿವೆ.

ರಶ್ಮಿಕಾ ಮಂದಣ್ಣ ಗುಣಗಾನ ಮಾಡಲೇಬೇಕು!

ಕನ್ನಡತಿ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಬಗ್ಗೆ ಈಗ ಯಾರಿಗೂ ಹೇಳೋದೇ ಬೇಡ. ಅಷ್ಟರಮಟ್ಟಗೆ ಅವರು ಇಡೀ ಇಂಡಿಯಾದ ಜನರಿಗೆ ಚಿರಪರಿಚಿತರು. ಕನ್ನಡ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ನಟಿ ರಶ್ಮಿಕಾ ಮಂದಣ್ಣ ಅವರು ಬಳಿಕ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಮಿಂಚಿ 'ನ್ಯಾಷನಲ್ ಕ್ರಶ್' ಆಗಿ ಬೆಳೆದಿದ್ದಾರೆ. ಸದ್ಯ ಅವರು ಹೆಚ್ಚಾಗಿ ಬಾಲಿವುಡ್ ಸಿನಿಮಾಗಳ ಅವಕಾಶಗಳನ್ನೇ ಪಡೆಯುತ್ತಿದ್ದು ಆ ಸಾಲಿಗೆ ಸೇರಿದೆ ಇತ್ತೀಚಿನ 'ಥಮ'.

ಹೌದು, ರಶ್ಮಿಕಾ ಮಂದಣ್ಣ ನಟನೆಯ ಥಮ (Thamma) ಚಿತ್ರವು ಹಾರರ್ ಝೋನರ್ ಆಗಿದ್ದು 2 ದಿನದ ಹಿಂದಷ್ಟೇ ನಟಿ ರಶ್ಮಿಕಾ ಮಂದಣ್ಣ ನಟನೆಯ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಸಖತ್ ರೆಸ್ಪಾನ್ಸ್ ಪಡೆಯುತ್ತಿದೆ. ಜೊತೆಗೆ ಥಮ ಚಿತ್ರದ ಟೀಸರ್ ಸಹ ಬಿಡುಗಡೆ ಆಗಿದ್ದು ಅದರಲ್ಲಿ 'ತುಮ್ ಮೇರೆ ನ ಹುಯೇ' ಸಾಲಿನ ಫಸ್ಟ್ ಸಾಂಗ್ ಕೂಡ ಬಿಡುಗಡೆ ಮಾಡಲಾಗಿದೆ. ಈ ಹಾಡು ಹಾಗೂ ಟೀಸರ್ ಇದೀಗ ಟ್ರೈಲರ್ ಜೊತೆಜೊತೆಗೇ ಸಖತ್ ರೆಸ್ಪಾನ್ಸ್ ಪಡೆಡಯುತ್ತಿದೆ.

ರಶ್ಮಿಕಾ ಮಂದಣ್ಣ ಈಗ ತೆಲುಗು, ತಮಿಳು ಹಾಗೂ ಬಾಲಿವುಡ್‌ನ ಬಲು ಬೇಡಿಕೆಯ ನಟಿ!

ರಶ್ಮಿಕಾ ಮಂದಣ್ಣ ಈಗ ತೆಲುಗು, ತಮಿಳು ಹಾಗೂ ಬಾಲಿವುಡ್‌ನ ಬಲು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಒಂದರ ಹಿಂದೆ ಒಂದರಂತೆ ಸತತವಾಗಿ ಮೂರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ‘ಪುಷ್ಪ 2’, ‘ಅನಿಮಲ್’ ಮತ್ತು ‘ಛಾವಾ’ ಸಿನಿಮಾಗಳು ಒಂದರ ಬಳಿಕ ಒಂದು ಬಿಡುಗಡೆಯಾಗಿ ಬರೋಬ್ಬರಿ 1000 ಕೋಟಿಗೂ ಹೆಚ್ಚು ಹಣವನ್ನು ಗಳಿಸಿವೆ. ಆ ಬಳಿಕ ರಶ್ಮಿಕಾ ನಟಿಸಿರುವ ಧನುಷ್ ನಟನೆಯ ‘ಕುಬೇರ’ ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಮಾಲ್ ಮಾಡಿ ಸಿಕ್ಕಾಪಟ್ಟೆ ಗಳಿಕೆ ಕಂಡಿದೆ. ಈ ಎಲ್ಲಾ ಕಾರಣಕ್ಕೆ ರಶ್ಮಿಕಾ ಈಗ ಬಲು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ನಟನೆಯ ಮತ್ತೊಂದು ಹಿಂದಿ ಸಿನಿಮಾ "ಥಮ'ದ ಟ್ರೈಲರ್, ಟೀಸರ್ ಇದೀಗ ಬಿಡುಗಡೆ ಆಗಿದ್ದು, ಸಿನಿಮಾದ ಬಿಡುಗಡೆ ದಿನಾಂಕ ಸಹ ಘೋಷಣೆ ಆಗಿದೆ. ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಹಾರರ್ ಸಿನಿಮಾ ಒಂದರಲ್ಲಿ ನಟಿಸಿದ್ದಾರೆ. ಆಯುಷ್ಮಾನ್ ಖುರಾನಾ ನಾಯಕನಾಗಿ ನಟಿಸಿರುವ ಈ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಖ್ಯಾತ ನಟ ನವಾಜುದ್ಧೀನ್ ಸಿದ್ಧಿಖಿ ವಿಲನ್ ಆಗಿ ಅಬ್ಬರಿಸಿದ್ದಾರೆ.

ಈ ಸಿನಿಮಾನಲ್ಲಿ ಆಕ್ಷನ್, ಹಾರರ್ ಜೊತೆಗೆ ಸೂಪರ್ ಕಾಮಿಡಿ ಕೂಡ ಇದೆ!

ಥಮ ಸಿನಿಮಾದ ಟ್ರೈಲರ್ ನಿನ್ನೆಯಷ್ಟೇ ರಿಲೀಸ್ ಆಗಿದೆ. ಸಿನಿಮಾ ಹಾರರ್-ಕಾಮಿಡಿ ಆಗಿದ್ದು, ಈ ಸಿನಿಮಾನಲ್ಲಿ ಆಕ್ಷನ್, ಹಾರರ್ ಜೊತೆಗೆ ಸೂಪರ್ ಕಾಮಿಡಿ ಕೂಡ ಇರುವುದು ಟ್ರೈಲರ್​ಮೂಲಕ ಗೊತ್ತಾಗುತ್ತಿದೆ. ಅಷ್ಟೇ ಅಲ್ಲ, ನಟಿ ರಶ್ಮಿಕಾ ಮಂದಣ್ಣ, ‘ಥಮ’ ಸಿನಿಮಾನಲ್ಲಿ ಸ್ವಲ್ಪ ಹೆಚ್ಚಾಗಿಯೇ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಯುಷ್ಮಾನ್ ಖುರಾನಾ ಜೊತೆಗೆ ಲಿಪ್ ಲಾಕ್ ದೃಶ್ಯಗಳಲ್ಲಿಯೂ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಗ್ಲಾಮರಸ್ ಉಡುಗೆಗಳನ್ನು ಧರಿಸಿದ್ದಾರೆ.

ಸಿನಿಮಾನಲ್ಲಿ ಮಲೈಕಾ ಅರೋರಾ ಹಾಗೂ ನೋರಾ ಫತೇಹಿಯ ಹಾಟ್ ಹಾಡುಗಳೂ ಇವೆ. ಸಿನಿಮಾವನ್ನು ಆದಿತ್ಯ ಸರ್ಪೋಟ್ದಾರ್ ನಿರ್ದೇಶನ ಮಾಡಿದ್ದು, ಹೆಚ್ಚಾಗಿ ಹಾರರ್ ಸಿನಿಮಾಗಳನ್ನೇ ನಿರ್ಮಿಸುತ್ತಾ ಬಂದಿರುವ ಮ್ಯಾಡಾಕ್ ಸಂಸ್ಥೆ "ಥಮ' ಸಿನಿಮಾವನ್ನು ನಿರ್ಮಿಸಿದೆ. ಅಂದಹಾಗೆ, ಈ ಸಿನಿಮಾ ಅಕ್ಟೋಬರ್ 21ರಂದು ಬಿಡುಗಡೆ ಆಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?