ಮಗಳ ಮೊದಲ ವಿಡಿಯೋ ಶೇರ್ ಮಾಡಿದ ಶೃತಿಹರಿಹರನ್

Published : Oct 02, 2019, 05:13 PM ISTUpdated : Oct 02, 2019, 05:23 PM IST
ಮಗಳ ಮೊದಲ ವಿಡಿಯೋ ಶೇರ್ ಮಾಡಿದ ಶೃತಿಹರಿಹರನ್

ಸಾರಾಂಶ

ಮುದ್ದು ಮಗಳ ಮೊದಲ ವಿಡಿಯೋ ಶೇರ್ ಮಾಡಿದ ‘ನಾತಿಚರಾಮಿ’ ನಟಿ | ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018 ರಲ್ಲಿ ನಾತಿಚರಾಮಿ ಚಿತ್ರಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿ ಪಡೆದಿದ್ದರು | ಸಿನಿಮಾಗಳಿಂದ ಸದ್ಯ ದೂರವಾಗಿದ್ದಾರೆ 

ನಾತಿ ಚರಾಮಿ ಖ್ಯಾತಿಯ ಶೃತಿ ಹರಹರನ್  ಕೆಲ ದಿನಗಳ ಹಿಂದೆ ಹೆಣ್ಣು ಮಗಳಿಗೆ ಜನ್ಮ ನೀಡಿದ್ದಾರೆ. ಇದುವರೆಗೂ ಮುದ್ದು ಮಗಳ ಫೋಟೋವನ್ನು ಎಲ್ಲಿಯೂ ರಿವೀಲ್ ಮಾಡಿರದ ಶೃತಿ ಹರಿಹರನ್ ಮೊದಲ ಬಾರಿಗೆ ಪಾಪುವಿನ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. 

 

ವಿಡಿಯೋದಲ್ಲಿ ಪಾಪುವಿನ ಕಾಲು ಮಾತ್ರ ಕಾಣುತ್ತವೆ. ‘ಎರಡು ತಿಂಗಳು ಹೇಗೆ ಕಳೆದವೋ ಗೊತ್ತೇ ಆಗುತ್ತಿಲ್ಲ’ ಎಂದು ಹೇಳಿಕೊಂಡಿದ್ದಾರೆ. 

ಬ್ಯೂಟಿಫುಲ್ ಮನಸಿನ ಹುಡುಗಿ’ ಯ ಬ್ಯೂಟಿಫುಲ್ ಸೀರೆ ಫೋಟೋಗಳು!

ಶೃತಿ ಹರಿಹರನ್ ಸದ್ಯ ಸಿನಿಮಾಗಳಿಂದ ದೂರವಿದ್ದು ಮಗಳ ಲಾಲನೆ, ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ಪ್ರಕಟವಾದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018 ರಲ್ಲಿ ನಾತಿಚರಾಮಿ ಚಿತ್ರಕ್ಕಾಗಿ ವಿಶೇಷ ತೀರ್ಪುಗಾರರ ಪ್ರಶಸ್ತಿ ಪಡೆದಿದ್ದರು. ಜೊತೆಗೆ ನಾತಿಚರಾಮಿ ಚಿತ್ರಕ್ಕೂ ಉತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. 

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಯಾರ್ಯಾರಿಗೆ ಪ್ರಶಸ್ತಿ ಗರಿ? ಇಲ್ಲಿದೆ ನೋಡ!

ಶೃತಿ ಹರಿಹರನ್, ಅರ್ಜುನ್ ಸರ್ಜಾ ಮೇಲೆ ಮಾಡಿರುವ Me Too ಆರೋಪ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸಂಚಲನವನ್ನು ಮೂಡಿಸಿತ್ತು. ಶೃತಿ ಹರಿಹರನ್, ಅರ್ಜುನ್ ಸರ್ಜಾ ಜೊತೆ ಸೇರಿ ‘ವಿಸ್ಮಯ’ ಸಿನಿಮಾ ಮಾಡಿದ್ದರು. ಈ ಸಿನಿಮಾದಲ್ಲಿ ರೊಮ್ಯಾಂಟಿಕ್ ಸೀನ್ ಗಳಿದ್ದು  ಆ ಸೀನ್ ಗಳಲ್ಲಿ ನಟಿಸುವಾಗ ಅರ್ಜುನ್ ಸರ್ಜಾ ಅನುಚಿತವಾಗಿ ವರ್ತಿಸಿದ್ದರು ಎಂದು ಶೃತಿ ಆರೋಪಿಸಿದ್ದರು. ಇದು ಸಂಚಲನವನ್ನೇ ಹುಟ್ಟು ಹಾಕಿತ್ತು. ಮೀ ಟೂ ವಿವಾದದ ನಂತರ ಶೃತಿ ಹರಿಹರನ್ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿರಲಿಲ್ಲ. ಆ ನಂತರ ಪ್ರಗ್ನೆನ್ಸಿ, ಈಗ ಮಗುವಿನ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Dhurandhar Review: ಹಿಂದೂಗಳಿಗೆ ಪ್ರಥಮ ಶತ್ರು ಹಿಂದೂ-ಮೊಬೈಲ್‌ ಕೂಡ ನೋಡದಂತೆ ಮಾಡೋ Ranveer Singh ಸಿನಿಮಾ!
ನೀನೇ ನನ್ನ ಚಾಟ್‌ಜಿಪಿಟಿ, ಬಾಡಿಗಾರ್ಡ್:‌ Rocking Star Yash ಬಗ್ಗೆ ಹೀಗಂದಿದ್ದೇಕೆ ರಾಧಿಕಾ?