
ಬೆಂಗಳೂರು (ಅ. 04): ಸೀರಿಯಲ್ ಲೋಕದಲ್ಲಿ ಪೌರಾಣಿಕ ಧಾರಾವಾಹಿಗಳ ಅಬ್ಬರ ಹೆಚ್ಚಾಗಿದೆ. ಎಲ್ಲಾ ವಾಹಿನಿಗಳಲ್ಲೂ ಹೊಸ ಹೊಸ ಧಾರಾವಾಹಿಗಳು ಶುರುವಾಗುತ್ತಿದೆ.
ಕಲರ್ಸ್ ಕನ್ನಡದಲ್ಲಿ ಶನಿವಾರ, ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಪ್ರತಿದಿನ ರಾತ್ರಿ 8. 30 ಕ್ಕೆ ಶನಿ ಧಾರಾವಾಹಿ ಪ್ರಸಾರವಾಗುತ್ತದೆ. ಇದು ಎಲ್ಲರ ಮನಸ್ಸನ್ನು ಗೆದ್ದಿದೆ. ಜೀ ಕನ್ನಡ ವಾಹಿನಿಯಲ್ಲಿ ಶನಿವಾರ ಹಾಗೂ ಭಾನುವಾರ ಸಂಜೆ 6.30 -7. 30 ರವರೆಗೆ ಪ್ರಸಾರವಾಗಲಿದೆ.
ಅದೇ ರೀತಿ ಅಕ್ಟೋಬರ್ 8 ರಿಂದ ಪ್ರತಿ ದಿನ ರಾತ್ರಿ 7.30 ಕ್ಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿರುವ ಈ ಧಾರಾವಾಹಿಯ ಹೆಸರು ‘ಜೈ ಹನುಮಾನ್’. ಈ ಧಾರಾವಾಹಿಯಲ್ಲಿ ಪ್ರದ್ಯುಮ್ನ, ಪ್ರಿಯಾಂಕಾ ಚಿಂಚೋಳಿ, ಪ್ರಸನ್ನ, ಮಧು, ವಿನಯ್‌ಗೌಡ, ರಂಜಿತಾ ಸೂರ್ಯವಂಶಿ, ನಾಗಶ್ರೀ ನಟಿಸುತ್ತಿದ್ದಾರೆ.
ಮುಂಬೈ ಮೂಲದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಕಾಂಟಿಲೋ ಈ ಧಾರಾವಾಹಿಯನ್ನು ನಿರ್ಮಿಸುತ್ತಿದೆ. ಬುಕ್ಕಾಪಟ್ಟಣ ವಾಸು ಈ ಧಾರಾವಾಹಿ ನಿರ್ದೇಶಕರು. ಬಲ ಸುರೇಶ್ ಜೈ ಹನುಮಾನ್‌ಗೆ ಸಂಭಾಷಣೆ ಬರೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.