'ಸರಿಗಮಪ' ಸ್ಪರ್ಧಿಗೆ ಸಿಕ್ತು ಉಚಿತ ವಿದ್ಯಾಭ್ಯಾಸ, 25 ಸಾವಿರ ರೂ ಕೆಲಸ!

Published : Jul 18, 2019, 11:17 AM ISTUpdated : Jul 18, 2019, 11:21 AM IST
'ಸರಿಗಮಪ' ಸ್ಪರ್ಧಿಗೆ ಸಿಕ್ತು ಉಚಿತ ವಿದ್ಯಾಭ್ಯಾಸ, 25 ಸಾವಿರ ರೂ ಕೆಲಸ!

ಸಾರಾಂಶ

ಕನಸು ಹೊತ್ತು ಬಂದವರಿಗೆ ಮನೆಯಾಗಿ ಆಶ್ರಯ ನೀಡುವ ಆಶಾಕಿರಣ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು. ಅದರಲ್ಲೂ ಸರಿಗಮಪ ಕಾರ್ಯಕ್ರಮ ಎಷ್ಟೋ ಮಂದಿಗೆ ಆಶಾಕಿರಣವಾಗಿ ನಿಂತಿದೆ ಎನ್ನುವುದಕ್ಕೆ ಇದೇ ಸಾಕ್ಷಿ.

 

ವಯಸ್ಸಿನ ಮಿತಿಯಿಲ್ಲದೇ ಪ್ರತೀ ಸೀಸನ್‌ಗೂ ಒಬ್ಬೊಬ್ಬ ಪ್ರತಿಭಾವಂತರನ್ನು ಗಾಯನ ಲೋಕಕ್ಕೆ ಪರಿಚಯಿಸುತ್ತಿರುವುದು ಸರಿಗಮಪ ರಿಯಾಲಿಟಿ ಶೋ.

ಹಾಡಲು ಇಷ್ಟವಿದ್ದು ಯಾವುದೇ ರೀತಿಯ ತರಬೇತಿ ಪಡೆಯದೇ ವೇದಿಕೆಯಲ್ಲಿ ಒಳ್ಳೆಯ ಪರ್ಫಾಮೆನ್ಸ್ ನೀಡಿದ ಸ್ಪರ್ಧಿ ಲಕ್ಷ್ಮೀ. ಸೀಸನ್- 14 ನಲ್ಲಿ ಸ್ಪರ್ಧಿಸಿದ ಲಕ್ಷ್ಮೀ ಫಿನಾಲೆ ತಲುಪದಿದ್ದರೂ ಸಾಕಷ್ಟು ಜನರ ಮನಸ್ಸು ಗೆದ್ದು 250 ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ.

ತಮಿಳು ‘ಸರಿಗಮಪಗೆ’ ಕನ್ನಡದ ಗಾಯಕಿ ಆಯ್ಕೆ

ಈ ಬಾರಿ ಸರಗಮಪ ಸಂಚಿಕೆಯಲ್ಲಿ ಹಳೆಯ ಸ್ಪರ್ಧಿ ಹಾಗೂ ಈಗಿನ ಸ್ಪರ್ಧಿ ಜೊತೆಯಾಗಿ ಜುಗಲ್ ಬಂದಿ ಇದ್ದು ಮೋನಮ್ಮ ಹಾಗೂ ಲಕ್ಷ್ಮಿ ಜೋಡಿಯಾಗಿದ್ದರು.

ಸಂಗೀತದಲ್ಲಿ ಅಪಾರ ಆಸಕ್ತಿಯಿರುವ ಲಕ್ಷ್ಮಿಗೆ ಉಚಿತ ಸಂಗೀತಾಭ್ಯಾಸ ನೀಡುವುದಾಗಿ ಹಂಸಲೇಖ ಹೇಳಿಕೊಂಡಿದ್ದಾರೆ. ಹಾಗೂ ಆಕೆಗೆ ಬ್ಯಾಚುಲರ್ ಆಫ್ ಮ್ಯೂಸಿಕ್‌ ಮತ್ತು ಮಾಸ್ಟರ್ ಆಫ್ ಮ್ಯೂಸಿಕ್ ಕೋರ್ಸ್‌ ಉಚಿತವಾಗಿ ಹೇಳಿಕೊಡುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ವಿದ್ಯಾಭ್ಯಾಸದ ನಂತರ 25 ಸಾವಿರ ಸಂಬಳವಿರುವ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಕುರಿಗಾಹಿಯನ್ನು ನಾಯಕ ಮಾಡೋಕೆ ಬಂದ ಇಸ್ರೇಲ್ ನಿರ್ಮಾಪಕ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಬಂದವ್ರಿಗೆ ದಾರಿಕೊಡಿ, ಹೋಗೋರಿಗೆ ದಾರಿಬಿಡಿ..'ಜೀ ಕನ್ನಡ ವೇದಿಕೆಯಲ್ಲಿ ಹೇಳಿದ್ದ ಮಾತನ್ನೇ ಬಿಗ್‌ಬಾಸ್‌ನಲ್ಲಿ ಮರೆತ್ರಾ ಗಿಲ್ಲಿ ನಟ!
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?