'ಚೌಕ' ಚಿತ್ರವಿಮರ್ಶೆ: ಕಾಡುವ ನಾಲ್ಕು ಕತೆಗಳ ನಾಲ್ಕು ಮುಖಗಳು

By suvarna Web DeskFirst Published Feb 4, 2017, 10:01 AM IST
Highlights

ನಾಲ್ಕು ಕಾಲಘಟ್ಟಗಳು. ನಾಲ್ಕು ಕತೆಗಳು. ನಾಲ್ಕು ಜೋಡಿಗಳು. ಮೊದಲನೆಯದು ಜಯರಾಜ್‌ ಹಾಗೂ ಕೊತ್ವಾಲ್‌ ರಾಮಚಂದ್ರ ಕಾಲದ ಬೆಂಗಳೂರು. ಎರಡನೆಯದು ‘ರಂಗೀಲಾ' ಹಾಗೂ ಮಲಯಾಳಂನ ಶಕೀಲಾ ಸಿನಿಮಾಗಳ ಹವಾ ಇದ್ದ ಮೈಸೂರು, ಮೂರನೆಯದು ಪಬ್ಬು, ಕ್ಲಬ್ಬು ಹಾಗೂ ಹೈಫೈ ಶ್ರೀಮಂತ ಹುಡುಗರ ಪ್ರೇಮ ಸಲ್ಲಾಪದ ದಿನಗಳ ಮಂಗಳೂರು. ಮೂರನೆಯದು ಧರ್ಮಗಳ ಆಚೆಗೆ ಪ್ರೀತಿ ಹುಡುಕುತ್ತಿರುವ ಮನಸ್ಸುಗಳನ್ನು ಕಟ್ಟಿಕೊಂಡಿರುವ ಬಿಜಾಪುರ. ಈ ನಾಲ್ಕರಲ್ಲೂ ಸಾಮಾನ್ಯ ಸಂಗತಿ ಒಂದೇ, ಪ್ರೀತಿ ಮತ್ತು ಮಾಡದ ತಪ್ಪಿಗೆ ಜೈಲು ವಾಸ. ಆದರೆ, ಈ ನಾಲ್ಕರ ಪಾತ್ರಗಳಿಗೆ ಒಬ್ಬನೇ ತಿರುವು. ಆತನೇ ಚಿಕ್ಕಣ್ಣ. ನಾಲ್ಕೂ ಮಂದಿಯ ಕಾಮನ್‌ ಫ್ರೆಂಡ್‌. ಈ ಗೆಳೆಯನ ನೆನಪುಗಳಲ್ಲಿ ತೆರೆದುಕೊಳ್ಳುವ ಕತೆ 1986ರಲ್ಲಿ ಶುರುವಾಗಿ 1995ಕ್ಕೆ ಬಂದು, 2000ಕ್ಕೆ ಜಿಗಿದು, 2007ರ ಕತೆ ಹೇಳುವ ಹೊತ್ತಿಗೆ ಚಿತ್ರಕ್ಕೊಂದು ದೊಡ್ಡ ಟ್ವಿಸ್ಟ್‌ ಸಿಗುತ್ತದೆ. ಆ ತಿರುವು 2016ಕ್ಕೆ ಕಾಲಿಡುತ್ತದೆ. ಅಲ್ಲಿಗೆ ಬೆಂಗಳೂರು, ಮೈಸೂರು, ಬಿಜಾಪುರ, ಮಂಗಳೂರು ಒಟ್ಟಿಗೆ ಸೇರಿಕೊಂಡು 2016ರ ದಿನಗಳನ್ನು ತೆರೆದಿಡುವುದರೊಂದಿಗೆ ‘ಚೌಕ' ಚಿತ್ರ ಮುಕ್ತಾಯವಾಗುತ್ತದೆ.

ಭಾಷೆ: ಕನ್ನಡ, ತಾರಾಗಣ: ಕಾಶಿನಾಥ್‌, ಪ್ರೇಮ್‌, ಐದ್ರಿತಾ ರೇ, ದಿಗಂತ್‌, ಪ್ರಿಯಾಮಣಿ, ವಿಜಯ್‌ ರಾಘವೇಂದ್ರ, ಭಾವನಾ, ಪ್ರಜ್ವಲ್‌ ದೇವರಾಜ್‌, ದೀಪಾ ಸನ್ನಿಧಿ, ಚಿಕ್ಕಣ್ಣ, ನಿಹಾಲ್‌ ರಜಪೂತ್‌, ಶರತ್‌ ಲೋಹಿತಾಶ್ವ, ಮೈಕೋ ನಾಗರಾಜ್‌, ಸೌಮ್ಯ, ಶ್ರುತಿ ನಾಯ್ಡು, ತಬಲಾ ನಾಣಿ, ರವಿ ಚೇತನ್‌

ನಿರ್ದೇಶನ: ತರುಣ್‌ ಸುಧೀರ್‌

ನಿರ್ಮಾಣ: ಯೋಗೀಶ್‌ ದ್ವಾರಕೀಶ್‌

ಸಂಗೀತ: ಹರಿಕೃಷ್ಣ

ಛಾಯಾಗ್ರಾಹಣ: ಶೇಖರ್‌ ಚಂದ್ರು

ನಾಲ್ಕು ಕಾಲಘಟ್ಟಗಳು. ನಾಲ್ಕು ಕತೆಗಳು. ನಾಲ್ಕು ಜೋಡಿಗಳು. ಮೊದಲನೆಯದು ಜಯರಾಜ್‌ ಹಾಗೂ ಕೊತ್ವಾಲ್‌ ರಾಮಚಂದ್ರ ಕಾಲದ ಬೆಂಗಳೂರು. ಎರಡನೆಯದು ‘ರಂಗೀಲಾ' ಹಾಗೂ ಮಲಯಾಳಂನ ಶಕೀಲಾ ಸಿನಿಮಾಗಳ ಹವಾ ಇದ್ದ ಮೈಸೂರು, ಮೂರನೆಯದು ಪಬ್ಬು, ಕ್ಲಬ್ಬು ಹಾಗೂ ಹೈಫೈ ಶ್ರೀಮಂತ ಹುಡುಗರ ಪ್ರೇಮ ಸಲ್ಲಾಪದ ದಿನಗಳ ಮಂಗಳೂರು. ಮೂರನೆಯದು ಧರ್ಮಗಳ ಆಚೆಗೆ ಪ್ರೀತಿ ಹುಡುಕುತ್ತಿರುವ ಮನಸ್ಸುಗಳನ್ನು ಕಟ್ಟಿಕೊಂಡಿರುವ ಬಿಜಾಪುರ. ಈ ನಾಲ್ಕರಲ್ಲೂ ಸಾಮಾನ್ಯ ಸಂಗತಿ ಒಂದೇ, ಪ್ರೀತಿ ಮತ್ತು ಮಾಡದ ತಪ್ಪಿಗೆ ಜೈಲು ವಾಸ. ಆದರೆ, ಈ ನಾಲ್ಕರ ಪಾತ್ರಗಳಿಗೆ ಒಬ್ಬನೇ ತಿರುವು. ಆತನೇ ಚಿಕ್ಕಣ್ಣ. ನಾಲ್ಕೂ ಮಂದಿಯ ಕಾಮನ್‌ ಫ್ರೆಂಡ್‌. ಈ ಗೆಳೆಯನ ನೆನಪುಗಳಲ್ಲಿ ತೆರೆದುಕೊಳ್ಳುವ ಕತೆ 1986ರಲ್ಲಿ ಶುರುವಾಗಿ 1995ಕ್ಕೆ ಬಂದು, 2000ಕ್ಕೆ ಜಿಗಿದು, 2007ರ ಕತೆ ಹೇಳುವ ಹೊತ್ತಿಗೆ ಚಿತ್ರಕ್ಕೊಂದು ದೊಡ್ಡ ಟ್ವಿಸ್ಟ್‌ ಸಿಗುತ್ತದೆ. ಆ ತಿರುವು 2016ಕ್ಕೆ ಕಾಲಿಡುತ್ತದೆ. ಅಲ್ಲಿಗೆ ಬೆಂಗಳೂರು, ಮೈಸೂರು, ಬಿಜಾಪುರ, ಮಂಗಳೂರು ಒಟ್ಟಿಗೆ ಸೇರಿಕೊಂಡು 2016ರ ದಿನಗಳನ್ನು ತೆರೆದಿಡುವುದರೊಂದಿಗೆ ‘ಚೌಕ' ಚಿತ್ರ ಮುಕ್ತಾಯವಾಗುತ್ತದೆ.

ಈ ನಡುವೆ ಬೆಂಗಳೂರಿಗೆ ರೌಡಿಯಾಗಬೇಕೆನ್ನುವ ಹಕ್ಕಿ ಗೋಪಾಲನ ಹುಚ್ಚುತನ, ವಿವಾಹಿತೆಯನ್ನು ಮೋಹಿಸುವ ಕೃಷ್ಣನ ಹದಿಹರೆಯದ ಚಂಚಲ ಮನಸ್ಸು, ಆವೇಷದಲ್ಲಿ ಒಂದು ಕೊಲೆಗೆ ಕಾರಣವಾಗುವ ಸೂರ್ಯ, ಯಾರೋ ಮಾಡಿದ ತಪ್ಪಿಗೆ ಭಯೋತ್ಪಾದಕನೆಂಬ ಮುದ್ರೆ ಹಾಕಿಸಿಕೊಳ್ಳುವ ದೇಶ ಪ್ರೇಮಿ ಅನ್ವರ್‌ನ ಚಿತ್ರಣಗಳು ಬಂದು ಹೋಗುತ್ತವೆ. ಇಲ್ಲಿ ಪ್ರತಿ ಕತೆಗೂ ಒಂದೊಂದು ಹಿನ್ನೆಲೆ ಇದೆ. ಮೊದಲರ್ಧ ಇವರ ಹುಡುಗಾಟಿಕೆಯಲ್ಲೇ ಮುಗಿದು ದ್ವಿತೀಯಾರ್ಧ ಕತೆಗೆ ಗಂಭೀರತೆ ಬರುತ್ತದೆ. ಇಲ್ಲಿ ನಿಜಕ್ಕೂ ಪ್ರೇಕ್ಷಕನನ್ನು ಕಾಡುವುದು ಕಾಶಿನಾಥ್‌ ಅವರ ವಿಶ್ವನಾಥ್‌ ಪಾತ್ರ. ವೃತ್ತಿಯಲ್ಲಿ ಶಿಕ್ಷಕನಾಗಿರುವ ಈತ, ಮಗಳನ್ನೇ ಅತ್ಯಾಚಾರ ಮಾಡಿದ ಕಾಮುಕನೆಂಬ ಅರೋಪ ಹೊತ್ತು ಜೈಲು ಸೇರುವ ವಿಶ್ವನಾಥ್‌, ತಾನು ನಿರಪರಾಧಿ ಎನ್ನುವುದನ್ನು ಜಗತ್ತಿಗೆ ಹೇಳಬೇಕೆಂಬ ಆತನ ಒದ್ದಾಟವೇ ಇಡೀ ಚಿತ್ರದ ಸೋಲ್‌ ಪಾಯಿಂಟ್‌. ಅಲ್ಲಿಂದ ಅಪ್ಪ-ಮಗಳ ಕತೆ ತೆರೆದುಕೊಂಡು ನೋಡುಗನಿಗೆ ಮತ್ತಷ್ಟು‘ಚೌಕ' ಸಹನಿವಾಗುತ್ತದೆ. ಇಲ್ಲಿಂದ ಕಾಶಿನಾಥ್‌ರ ‘ಅನುಭವ' ಚಿತ್ರದ ವೇಗಕ್ಕೆ ಸಾಥ್‌ ನೀಡುತ್ತದೆ.

ಪ್ರೇಮ್‌- ಐದ್ರಿತಾ ರೇ, ದಿಗಂತ್‌- ಪ್ರಿಯಾಮಣಿ, ವಿಜಯ್‌ ರಾಘವೇಂದ್ರ- ಭಾವನಾ, ಪ್ರಜ್ವಲ್‌ ದೇವರಾಜ್‌- ದೀಪಾ ಸನ್ನಿಧಿ ಅವರೇ ಚಿತ್ರದ ನಾಲ್ಕು ಕಾಲಘಟ್ಟದ ನಾಲ್ಕು ಜೋಡಿಗಳು. ‘ಇದು ನನ್‌ ಹೊಸ ಕ್ಯಾರೆಕ್ಟರ್‌' ಎನ್ನುವ ಪ್ರೇಮ್‌ ಡೈಲಾಗ್‌ನಲ್ಲೇ ಅವರ ಪಾತ್ರದ ಭಿನ್ನತೆ ಇದೆ. ಇಲ್ಲಿ ಪ್ರಜ್ವಲ್‌ ದೇವರಾಜ್‌ ಪಾತ್ರದಲ್ಲಿ ಪೋರ್ಸ್‌ ಇದ್ದರೆ, ಪ್ರೇಮ್‌ ಪಾತ್ರದೊಳಗೆ ಕ್ಲಾಸಿಕ್‌ ನೆರಳಿನ ಜತೆಗೆ ಹೊಸ ಗೆಟಪ್‌ ಇದೆ. ಹಾಗೆ ವಿಜಯ್‌ ರಾಘವೇಂದ್ರ ಪಾತ್ರದಲ್ಲಿ ಸ್ಟಾಫ್ಟ್‌ ನೆಸ್‌ ಇದ್ದರೂ ಶಾಪ್‌ರ್‍ ಇದೆ. ಹಾಗೆ ಹದಿಹರೆಯದ ಯೋಚನೆಗಳಿಂದ ದಾರಿ ತಪ್ಪುವ ಹುಡುಗರ ಪ್ರತಿನಿಧಿಯಾಗಿ ದಿಗಂತ್‌ ಇಷ್ಟವಾಗುತ್ತಾರೆ. ಇಲ್ಲಿ ನಾಲ್ಕು ಪಾತ್ರಗಳು ಆಯಾ ಕಾಲಕ್ಕೆ ತಕ್ಕಂತೆ ಮಸಾಮಾನ್ಯವಾಗಿ ಇಂಥ ಚಿತ್ರಗಳಲ್ಲಿ ಕಂಟಿನ್ಯೂಟಿ, ಪಾತ್ರಗಳ ಸಂಯೋಜನೆಯಲ್ಲಿ ಗೊಂದಲವಾಗುತ್ತದೆ. ಹಾಗಾಗದಂತೆ ತರುಣ್‌ ಸುಧೀರ್‌ ಎಚ್ಚರ ವಹಿಸಿದ್ದಾರೆ.

ಇಡೀ ಚಿತ್ರದಲ್ಲಿ ಕ್ಯಾಮೆರಾ, ಸಂಗೀತ ಹಾಗೂ ಸಂಕಲನ ವಿಭಾಗದಲ್ಲಿ ಕೆಲಸ ಮಾಡಿದ ತಂತ್ರಜ್ಞರ ಶ್ರಮ ಎದ್ದು ಕಾಣುತ್ತದೆ. ಎಲ್ಲಕ್ಕಿಂತ ಮುಖ್ಯ ಅತಿಥಿ ಪಾತ್ರದಲ್ಲಿ ಎಂಟ್ರಿಯಾಗುವ ದರ್ಶನ್‌, ‘ಚೌಕ'ಗೆ ಮಾಸ್‌ ಇಮೇಜ್‌ ನೀಡುತ್ತಾರೆ. ಮೂರು ಹಾಡುಗಳ ಪೈಕಿ ಅಪ್ಪ-ಮಗಳ ಹಾಡು ಆಪ್ತವಾಗಿ ಕೇಳಿಸಿದರೆ, ಅಲ್ಲಾಡ್ಸು ಅಲ್ಲಾಡ್ಸು ಹಾಡು ಜೋಶ್‌ ನೀಡುತ್ತದೆ. ಜತೆಗೆ ಕಾಶಿನಾಥ್‌ ಪಾತ್ರದ ಸಂಭಾಷೆಗಳು ಕೊಡುವ ಕಿಕ್‌, ಬೇರೆ ಪಾತ್ರಧಾರಿಗಳ ಸಂಭಾಷಣೆಗಳು ಕೊಡಲ್ಲ. ಈ ಎಲ್ಲದರ ನಡುವೆಯೂ ‘ಚೌಕ' ನೋಡುವಂತಹ ಸಿನಿಮಾ ಎನ್ನುವುದರಲ್ಲಿ ಅನುಮಾನವಿಲ್ಲ.

-ಆರ್ ‌ ಕೇಶವಮೂರ್ತಿ

click me!