
ಸರಿಯಾಗಿ ನೋಡು... ನಮ್ಮೆದುರು ನಿಂತಿರುವ ಶತ್ರುವಿನ ಅಹಂಕಾರ... ಅವನ ಕಣ್ಣು ಕಿತ್ತು ಬರುವಂತೆ ಬಾಣ ಬಿಡಬೇಕು... ಗುರಿ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ... ಈ ಫೋಟೋ ನೋಡಿದರೆ ಇಂಥ ಸಾಲುಗಳು ನೆನಪಾಗದಿರಲು ಸಾಧ್ಯವೆ? ಹೌದು, ಇದು ನಿರ್ದೇಶಕ ಎಸ್ ಎಸ್ ರಾಜಮೌಳಿಯ ಮ್ಯಾಜಿಕಲ್ ಹಿಟ್ ‘ಬಾಹುಬಲಿ' ಚಿತ್ರದ ಪಾರ್ಟ್-2ನ ಎರಡನೇ ಹೊಸ ಪೋಸ್ಟರ್. ಮೊದಲ ಭಾಗದಲ್ಲಿ ಕ್ಲೈಮ್ಯಾಕ್ಸ್ ವರೆಗೂ ಹೆಚ್ಚು ಕಮ್ಮಿ ಮುಖವನ್ನೇ ತೋರಿಸದ ಅಭಿನಯಿಸಿದ ದೇವಸೇನಾ ಪಾತ್ರ ಹೇಗಿರಬಹುದು? ಎನ್ನುವ ಕುತೂಹಲವನ್ನೂ ಸಹ ತಣಿಸುವ ಪೋಸ್ಟರ್ ಇದು. ಬಾಹುಬಲಿಯ ತಂದೆ ಅಮರೇಂದ್ರ ಬಾಹುಬಲಿ ಹಾಗೂ ದೇವಸೇನಾ ಅವರ ಯುದ್ಧ ಅಭ್ಯಾಸದಂತೆ ಕಾಣುವ ಈ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದ್ದಾರೆ ನಿರ್ದೇಶಕ ರಾಜಮೌಳಿ.
ಶಸ್ತ್ರಭ್ಯಾಸಕ್ಕೂ ಶೃಂಗಾರದ ನೆರಳು ಸೋಕಬಹುದೇ? ಹಾಗೊಂದು ಅನುಮಾನ ಮೂಡಿಸುವಂತಿರುವ ಅನುಷ್ಕಾ ಶೆಟ್ಟಿಹಾಗೂ ಪ್ರಭಾಸ್ ಅವರ ಎಕ್ಸ್‌ಪ್ರೆಷನ್‌ಗೂ ಈ ಪೋಸ್ಟರ್ ಸಾಕ್ಷಿ. ಆದರೆ, ಮೊದಲ ಭಾಗದಲ್ಲಿ ತುಂಬಾ ಡಿ-ಗ್ಲಾಮರ್ ಆಗಿ ಕಾಣಿಸಿಕೊಂಡ ಅನುಷ್ಕಾ ಶೆಟ್ಟಿ‘ಬಾಹುಬಲಿ-2'ನಲ್ಲಿ ಪಕ್ಕಾ ಗ್ಲಾಮರ್ ರೋಲ್ ಇದೆ ಎನ್ನುವ ಗಟ್ಟಿನಂಬಿಕೆ ಮೂಡಿಸಸಲಾಗಿದೆ. ಬಹುಶಃ ಅಮರೇಂದ್ರ ಬಾಹುಬಲಿ ಜತೆ ಬ್ಯೂಟಿ ಕ್ವೀನ್ ಕಂ ವಾರಿಯರ್‌ನ ಲುಕ್‌ನಲ್ಲಿ ಅನುಷ್ಕಾ ಶೆಟ್ಟಿಅವರ ಪಾತ್ರ ಸಂಯೋಜನೆ ಮಾಡಲಾಗಿದೆಯಂತೆ.
‘ಬಾಹುಬಲಿಯನ್ನು ಕಪ್ಪಟ್ಟಯಾಕೆ ಕೊಂದ?' ಎನ್ನುವ ಮಿಲಿಯನ್ ಡಾಲರ್‌ಗಳ ಪ್ರಶ್ನೆಯಷ್ಟಅನುಷ್ಕಾ ಹಾಗೂ ಪ್ರಭಾಸ್ ಜೋಡಿ ಹೇಗಿರುತ್ತದೆಂಬ ಪ್ರಶ್ನೆಗೂ ಉತ್ತರ ಕೊಟ್ಟಿರುವ ಈ ಪೋಸ್ಟರ್, ಪ್ರಭಾಸ್ ಅಭಿಮಾನಿಗಳಿಗೆ ಖುಷಿ ಪಡಿಸುವುದು ಗ್ಯಾರಂಟಿಯಂತೆ. ಏಪ್ರಿಲ್ 28ಕ್ಕೆ ತೆರೆ ಕಾಣುವ ಈ ಚಿತ್ರದಲ್ಲಿ ಸತ್ಯರಾಜ್, ರಮ್ಯಾ ಕೃಷ್ಣ, ತಮನ್ನಾ, ರಾಣಾ ದಗ್ಗುಬಾಟಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಈಗಷ್ಟೆಶೂಟಿಂಗ್ ಮುಗಿಸಿಕೊಂಡು ಬಿಡುಗಡೆಯ ತಯಾರಿ ಮಾಡಿಕೊಳ್ಳುತ್ತಿರುವ ಹೊತ್ತಿನಲ್ಲೇ ಚಿತ್ರದ ಒಂದೊಂದೇ ಪೋಸ್ಟರ್ ಅನ್ನು ಬಿಡುಗಡೆ ಮಾಡುತ್ತಿದ್ದಾರೆ ರಾಜಮೌಳಿ. ಅದರ ಭಾಗವಾಗಿಯೇ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿಜೋಡಿಯ ಪೋಸ್ಟರ್ ಅನಾವರಣ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.