
ಬಾಲಿವುಡ್ ಖ್ಯಾತ ಪ್ರೊಡ್ಯೂಸರ್ ಕರಣ್ ಜೋಹರ್ ಬಿ ಟೌನ್ ಕ್ಲೋಸ್ ಫ್ರೆಂಡ್ಸ್ ಗಳಿಗಾಗಿ ಗೆಟ್ ಟು ಗೆದರ್ ಆಯೋಜಿಸಿದ್ದರು. ಈ ಗೆಟ್ ಟು ಗೆದರ್ ಪಾರ್ಟಿಗೆ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ವಿಕ್ಕಿ ಕೌಶಲ್, ಅರ್ಜುನ್ ಕಪೂರ್, ಮಲೈಕಾ ಅರೋರಾ, ಶಾಹಿದ್ ಕಪೂರ್ ಸೇರಿದಂತೆ ಸಾಕಷ್ಟು ಮಂದಿ ಭಾಗಿಯಾಗಿದ್ದಾರೆ.
ಪಾರ್ಟಿ ವಿಡಿಯೋವನ್ನು ಕೆಲವರು ಶೇರ್ ಮಾಡಿಕೊಂಡಿದ್ದು ಈ ವಿಡಿಯೋ ಚರ್ಚೆ ಹುಟ್ಟು ಹಾಕಿದೆ.
ಎಸ್ ಎಡಿ ಎಂಎಲ್ಎ ಮಜೀಂದ್ ದಾರ್ ಸಿರ್ಸಾ ವಿಡಿಯೋ ನೋಡಿ ಆಕ್ಷೇಪ ತೆಗೆದಿದ್ದಾರೆ. ’ಸೆಲೆಬ್ರಿಟಿಗಳೆಲ್ಲಾ ಡ್ರಗ್ ನಶೆಯಲ್ಲಿದ್ದಾರೆ. ನಾನಿದರ ಬಗ್ಗೆ ದನಿ ಎತ್ತುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನು ಕಾಂಗ್ರೆಸ್ ಲೀಡರ್ ಮಿಲಿಂದ್ ಡಿಯೋರಾ ತಳ್ಳಿ ಹಾಕಿದ್ದು, ‘ನನ್ನ ಪತ್ನಿಯೂ ಈ ಪಾರ್ಟಿಗೆ ಹೋಗಿದ್ದರು. ಯಾರೂ ಕೂಡಾ ಡ್ರಗ್ಸ್ ತೆಗೆದುಕೊಂಡಿರಲಿಲ್ಲ. ಮಾನಹಾನಿ ಮಾಡುವ ಇಂತಹ ಸುದ್ಧಿಗಳನ್ನು ಹರಡುವುದನ್ನು ನಿಲ್ಲಿಸಿ. ನೀವು ಬೇಷರತ್ ಕ್ಷಮೆಯಾಚಿಸುತ್ತೀರಿ ಎಂದು ಭಾವಿಸಿದ್ದೇನೆ‘ ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.