27 ವರ್ಷಗಳ ಬಳಿಕ ಮಿಸ್‌ ವರ್ಲ್ಡ್‌ಗೆ ಆತಿಥ್ಯ ವಹಿಸಿಕೊಳ್ಳಲಿದೆ ಭಾರತ!

Published : Jun 08, 2023, 10:00 PM ISTUpdated : Jun 08, 2023, 10:11 PM IST
27 ವರ್ಷಗಳ ಬಳಿಕ ಮಿಸ್‌ ವರ್ಲ್ಡ್‌ಗೆ ಆತಿಥ್ಯ ವಹಿಸಿಕೊಳ್ಳಲಿದೆ ಭಾರತ!

ಸಾರಾಂಶ

ಬರೋಬ್ಬರಿ 27 ವರ್ಷಗಳ ಬಳಿಕ ವಿಶ್ವದ ಅತ್ಯಂತ ಪ್ರಖ್ಯಾತ ಬ್ಯೂಟಿ ಪೇಜೆಂಟ್‌ ಮಿಸ್‌ ವರ್ಲ್ಡ್‌ಗೆ ಭಾರತ ಆತಿಥ್ಯ ವಹಿಸಿಕೊಳ್ಳಲಿದೆ. ಈ ಕುರಿತಾಗಿ ಮಿಸ್‌ ವರ್ಲ್ಡ್‌ ಆರ್ಗನೈಜೇಷನ್‌ನ ಮುಖ್ಯಸ್ಥೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.  

ನವದೆಹಲಿ (ಜೂ.8): ವಿಶ್ವದ ಅತ್ಯಂತ ಪ್ರಖ್ಯಾತ ಬ್ಯೂಟಿ ಪೇಜೆಂಟ್‌ ಆಗಿರುವ ಮಿಸ್‌ ವರ್ಲ್ಡ್‌ ಭಾರತಕ್ಕೆ ಮರಳಲಿದೆ. 2023ರ ಮಿಸ್‌ ವರ್ಲ್ಡ್‌ ಚಾಂಪಿಯನ್‌ಷಿಪ್‌ ಭಾರತದಲ್ಲಿ ನಡೆಯಲಿದೆ ಎಂದು ಮಿಸ್‌ ವರ್ಲ್ಡ್‌ ಆರ್ಗನೈಜೇಷನ್‌ ಗುರುವಾರ ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಸ್ಪರ್ಧೆಯಲ್ಲಿ 130 ದೇಶಗಳ ಸುಂದರಿಯರು ಭಾಗವಹಿಸಲಿದ್ದಾರೆ. ಅಂದಾಜು ಒಂದು ತಿಂಗಳ ಕಾಲ ನಡೆಯಲಿರುವ ಈ ಸ್ಪರ್ಧೆ ಅಂತಿಮ ಸುತ್ತು ನವೆಂಬರ್‌-ಡಿಸೆಂಬರ್‌ನಲ್ಲಿ ನಡೆಯಲಿದೆ. ಪ್ರತಿಷ್ಠಿತ ಮಿಸ್‌ ವರ್ಲ್ಡ್‌ ಚಾಂಪಿಯನ್‌ಷಿಪ್‌ಗೆ ಭಾರತ ಆತಿಥ್ಯ ವಹಿಸುತ್ತಿರುವುದು 2ನೇ ಬಾರಿಯಾಗಿದೆ. ಇದಕ್ಕೂ ಮುನ್ನ 1996ರಲ್ಲಿ ಮೊಟ್ಟಮೊದಲ ಬಾರಿಗೆ ಭಾರತ ಮಿಸ್‌ ವರ್ಲ್ಡ್‌ಅನ್ನು ಆಯೋಜನೆ ಮಾಡಿತ್ತು. ಗುರುವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಿಸ್‌ ವರ್ಲ್ಡ್‌ ಆರ್ಗನೈಜೇಷನ್‌ನ ಮುಖ್ಯ ವ್ಯವಸ್ಥಾಪಕ ಅಧಿಕಾರಿ ಹಾಗೂ ಮುಖ್ಯಸ್ಥೆ ಜೂಲಿಯಾ ಮೂರ್ಲೆ, 71ನೇ ಆವೃತ್ತಿಯ ಮಿಸ್‌ ವರ್ಲ್ಡ್‌ ಸ್ಪರ್ಧೆಗೆ ಭಾರತ ಆತಿಥ್ಯ ವಹಿಸಿಕೊಂಡಿದೆ ಎಂದು ಘೋಷಣೆ ಮಾಡಲು ಸಂತೋಷವಾಗಿದೆ. ನನಗೆ 30 ವರ್ಷವಾಗಿದ್ದಾಗ ನಾನು ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೆ. ಅಂದಿನಿಂದ ಇಂದಿನವರೆಗ ಭಾರತ ಹಾಗೂ ಇಲ್ಲಿನ ಜನರ ಪ್ರೀತಿಯು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಕಾರ್ಯಕ್ರಮದಲ್ಲಿ 2022ರ ಮಿಸ್‌ ವರ್ಲ್ಡ್‌ ಆಗಿರುವ ಕ್ಯಾರೋಲಿನಾ ಬಿಲಾವಸ್ಕಾ ಕೂಡ ಹಾಜರಿದ್ದರು.

ಭಾರತವು ಆಕರ್ಷಕ ದೇಶ. ಇಲ್ಲಿನ ನಾಗರಿಕತೆ ಮತ್ತು ಸಂಸ್ಕೃತಿಯಲ್ಲಿ ಸಾಕಷ್ಟು ವೈವಿಧ್ಯತೆಗಳಿವೆ. ಇಲ್ಲಿರುವ ಪ್ರವಾಸಿ ತಾಣಗಳು ಕೂಡ ಅಷ್ಟೇ ಅದ್ಭುತವಾಗಿದೆ. ನಾವು ಈ ಸ್ಥಳದ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಇಡೀ ಜಗತ್ತಿಗೆ ಪರಿಚಯಿಸುತ್ತೇವೆ. ಈ ಸ್ಪರ್ಧೆಯಲ್ಲಿ, 130 ದೇಶಗಳ ಚಾಂಪಿಯನ್‌ಗಳು ಒಂದು ತಿಂಗಳ ಕಾಲ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ ಎಂದು ಮೂರ್ಲೆ ಹೇಳಿದ್ದಾರೆ. 1951ರಲ್ಲಿ ಬ್ರಿಟನ್‌ನಲ್ಲಿ ಮೊಟ್ಟಮೊದಲ ಬಾರಿಗೆ ಮಿಸ್‌ ವರ್ಲ್ಡ್‌ ಸ್ಪರ್ಧೆ ಆರಂಭವಾಗಿತ್ತು. ಇದರಲ್ಲಿ ಸ್ವೀಡನ್‌ನ ಕಿಕಿ ಹೆಕನ್‌ಸನ್‌ ಪ್ರಶಸ್ತಿ ಜಯಿಸಿದ್ದರು. ಈಕೆ ಮಿಸ್‌ ವರ್ಲ್ಡ್‌ ಎನಿಸಿಕೊಂಡ ಮೊದಲ ಮಹಿಳೆ.

ಭಾರತದಿಂದ ನಂದಿತಾ ಗುಪ್ತಾ ಸ್ಪರ್ಧೆ: 2023ರ ಮಿಸ್‌ ವರ್ಲ್ಡ್‌ನಲ್ಲಿ ಭಾರತದ ಸ್ಪರ್ಧಿಯಾಗಿ ನಂದಿತಾ ಗುಪ್ತಾ ಕಣಕ್ಕಿಳಿಯಲಿದ್ದಾರೆ. 19 ವರ್ಷದ ಈಕೆ ರಾಜಸ್ಥಾನದ ಕೋಟಾ ಮೂಲದವರು. ಈ ವರ್ಷದ ಮಿಸ್‌ ಇಂಡಿಯಾದಲ್ಲಿ ಈಕೆ ಚಾಂಪಿಯನ್‌ ಕೂಡ ಆಗಿದ್ದಾರೆ.  ನಂದಿನಿ ಪ್ರಸ್ತುತ ಮುಂಬೈನ ಕಾಲೇಜೊಂದರಲ್ಲಿ ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್‌ ವಿದ್ಯಾಭ್ಯಾಸ ಮಾಡುತ್ತಿದ್ದು, 2ನೇ ವರ್ಷದ ಪದವಿಯಲ್ಲಿ ಓದುತ್ತಿದ್ದಾರೆ.

ಮಾಜಿ ಮಿಸ್‌ ಇಂಡಿಯಾ ಆದಿತಿ ಆರ್ಯಾ ಜೊತೆ ಬಿಲಿಯನೇರ್‌ ಉದಯ್‌ ಕೋಟಕ್‌ ಪುತ್ರನ ನಿಶ್ಚಿತಾರ್ಥ!

ಭಾರತದಿಂದ ಆರು ಸುಂದರಿಯರು ಮಿಸ್‌ ವರ್ಲ್ಡ್‌: ಇಲ್ಲಿವರೆಗೂ ಭಾರತದ ಆರು ಮಂದಿ ಸುಂದರಿಯರು ಮಿಸ್‌ ವರ್ಲ್ಡ್‌ ಆಗಿದ್ದಾರೆ. 1966ರಲ್ಲಿ ರೀಟಾ ಫರಿಯಾ ಮಿಸ್‌ ವರ್ಲ್ಡ್‌ ಆದ ಮೊಟ್ಟ ಮೊದಲ ಭಾರತೀಯೆ. ಅದಾದ ಬಳಿಕ 1994ರಲ್ಲಿ ಐಶ್ವರ್ಯಾ ರೈ ಬಚ್ಛನ್‌ ಈ ಸ್ಪರ್ಧೆ ಜಯಿಸಿದ್ದರು. ಡಯಾನಾ ಹೇಡೆನ್‌ 1997ರಲ್ಲಿ ವಿಶ್ವದ ಸುಂದರಿ ಎನಿಕೊಂಡಿದ್ದರೆ, 199ರಲ್ಲಿ ಯುಕ್ತಾ ಮುಖೆ ಈ ಕಿರೀಟ ಧರಿಸಿದ್ದರು. ಅದಾದ ಬಳಿಕ 2000ದಲ್ಲಿ ಪ್ರಿಯಾಂಕಾ ಚೋಪ್ರಾ ಜಯಿಸಿದ್ದರು. ಇದಾದ 17 ವರ್ಷಗಳ ಬಳಿಕ 2017ರಲ್ಲಿ ಮಾನುಷಿ ಚಿಲ್ಲರ್‌ ಈ ಕಿರೀಟವನ್ನು ತೊಟ್ಟಿದ್ದರು.

ಪ್ರಿಯಾಂಕಾ 'ಮಿಸ್ ವರ್ಲ್ಡ್' ಗೆದ್ದಾಗ ನಿಕ್ ಜೋನಸ್ ಏನ್ಮಾಡ್ತಿದ್ರು? 22 ವರ್ಷದ ಹಿಂದಿನ ಘಟನೆ ಬಿಚ್ಚಿಟ್ಟ ನಟಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

BBK 12 ಮಿಡ್‌ ವೀಕ್‌ ಎಲಿಮಿನೇಶನ್‌ ಆಯ್ತು; ಭಯದಲ್ಲೇ ಪ್ರಾರ್ಥಿಸುತ್ತ ಬಾಗಿಲೊಳಗೆ Rakshita Shetty
90's Kids ಶಾಲಾ ದಿನಗಳಲ್ಲಿ ನೋಡ್ತಿದ್ದ ಧಾರಾವಾಹಿಗಳಿವು... ನಿಮ್‌ ಫೇವರಿಟ್ ಯಾವ್ದು?