ಅವಮಾನಕ್ಕೊಳಗಾದ ವೇದಿಕೆಯಲ್ಲೇ ಸನ್ಮಾನ: ಮಿಸ್ ಮೆಕ್ಸಿಕೋಗೆ 2025ರ ಮಿಸ್‌ ಯೂನಿವರ್ಸ್ ಪಟ್ಟ

Published : Nov 21, 2025, 11:37 AM IST
Mexico's Fatima Bosch wins Miss Universe

ಸಾರಾಂಶ

ಸಂಘಟಕರೊಬ್ಬರಿಂದ ಡಮ್ಮಿ' ಎಂದು ಅವಮಾನಕ್ಕೊಳಗಾಗಿದ್ದ ಮೆಕ್ಸಿಕೋದ ಫಾತಿಮಾ ಬಾಷ್, ಅದೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಅವಮಾನಕ್ಕೊಳಗಾದ ಸ್ಥಳದಲ್ಲೇ ಅವರಿಗೆ ಸನ್ಮಾನವಾಗಿದೆ.

ಅವಮಾನವಾದ ಸ್ಥಳದಲ್ಲೇ ಸನ್ಮಾನ:

ಕೆಲ ದಿನಗಳ ಹಿಂದೆ ಸಂಘಟಕರ ಅವಮಾನಕ್ಕೆ ಸರಿಯಾಗಿ ತಿರುಗೇಟು ನೀಡಿ ವೇದಿಕೆಯಿಂದ ಹೊರ ನಡೆದ ಬ್ಯಾಂಕಾಕ್ ಮಿಸ್ ಯೂನಿವರ್ಸ್‌ ಸ್ಪರ್ಧಿಗೆ ಈಗ ಅದೇ ವೇದಿಕೆಯಲ್ಲಿ ಸನ್ಮಾನವಾಗಿದೆ. ಈ ಬಾರಿಯ ಮಿಸ್ ಯೂನಿವರ್ಸ್ ಸ್ಪರ್ಧೆಯ ಕಿರೀಟ ಬ್ಯಾಂಕಾಕ್ ಸ್ಪರ್ಧಿ ಫಾತಿಮಾ ಬಾಷ್ ಮುಡಿಗೇರಿದೆ. ಬ್ಯಾಂಕಾಂಕ್‌ನಲ್ಲಿ ನಡೆದ ಈ ಸಮಾರಂಭದಲ್ಲಿ 100 ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳು ಭಾಗಿಯಾಗಿದ್ದರು. ಕಳೆದ ವರ್ಷದ ಮಿಸ್ ಯೂನಿವರ್ಸ್ ಡೆನ್ಮಾರ್ಕ್‌ನ ವಿಕ್ಟೋರಿಯಾ ಥೀಲ್ವಿಗ್ ಅವರು ಈ ಬಾರಿ ಮಿಸ್ ಯೂನಿವರ್ಸ್ ಮೆಕ್ಸಿಕೋದ ಫಾತಿಮಾ ಬಾಷ್‌ಗೆ ಕಿರೀಟವನ್ನು ಮುಡಿಗೇರಿಸಿದರು.

ಫಾತಿಮಾ ಭಾಷ್ ಗೆಲುವನ್ನು ಸಂಭ್ರಮಿಸಿದ ಸಹ ಸ್ಪರ್ಧಿಗಳು

ಮೆಕ್ಸಿಕೋದ ಫಾತಿಮಾ ವಿನ್ನರ್ ಎಂಬುದು ತಿಳಿಯುತ್ತಿದ್ದಂತೆ ಅಲ್ಲಿದ್ದ ಸ್ಪರ್ಧಿಗಳೆಲ್ಲರೂ ಯಾವುದೇ ಬೇಸರವಿಲ್ಲದೇ ಈ ವಿಜಯವನ್ನು ತಮ್ಮ ವಿಜಯ ಎಂಬಂತೆ ಸಂಭ್ರಮಿಸಿದರು. ಮಿಸ್ ಯೂನಿವರ್ಸ್ ಸಂಸ್ಥೆ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡ ಈ ಸಂಭ್ರಮದ ಕ್ಷಣದ ವೀಡಿಯೋದಲ್ಲಿ ಫಾತಿಮಾ ಅವರು, ಕೆಂಪು ಬಣ್ಣದ ಗವನ್ ತೊಟ್ಟು ತಲೆ ಮೇಲೆ ಕಿರೀಟ ಹಿಡಿದುಕೊಂಡು ಮಿಂಚುತ್ತಿದ್ದರೆ, ಅಲ್ಲಿದ್ದ ಇತರ ಸ್ಪರ್ಧಿಗಳು ಈ ಗೆಲುವು ತಮ್ಮದೆಂಬಂತೆ ಸಂಭ್ರಮಿಸಿದ್ದಾರೆ.

ಫಾತಿಮಾಗೆ ಡಮ್ಮಿ ಪೀಸ್ ಎಂದು ಕರೆದಿದ್ದ ಸಂಘಟಕ

ಮಿಸ್ ಯೂನಿವರ್ಸ್‌ ಕಾರ್ಯಕ್ರಮದಲ್ಲಿ ಏನಾಗಿತ್ತು. ಮಿಸ್ ಯೂನಿವರ್ಸ್ ಸ್ಪರ್ಧೆಯು ಹಲವು ಸುತ್ತುಗಳ ಕಾರ್ಯಕ್ರಮವಾಗಿರುತ್ತದೆ. ಈ ಸ್ಪರ್ಧೆಗಾಗಿ ತಿಂಗಳುಗಳ ಕಾಲ ಹಲವು ದೇಶಗಳ ಸ್ಪರ್ಧಿಗಳು ಒಂದೆಡೆ ಸೇರಿರುತ್ತಾರೆ. ಅಂತಿಮವಾದ ಸ್ಪರ್ಧೆಗೂ ಮೊದಲು ಅವರಿಗೆ ಹಲವು ಸುತ್ತುಗಳ ಸ್ಪರ್ಧೆಗಳು ಪರೀಕ್ಷೆಗಳು ನಡೆಯುತ್ತಿರುತ್ತವೆ. ಅದೇ ರೀತಿ ಈ ಬಾರಿಯ ಮಿಸ್ ಯೂನಿವರ್ಸ್ ಸ್ಪರ್ಧೆಯ ಅತಿಥ್ಯವನ್ನು ಥೈಲ್ಯಾಂಡ್‌ ವಹಿಸಿಕೊಂಡಿತ್ತು. ಇಲ್ಲಿನ ರಾಜಧಾನಿ ಬ್ಯಾಂಕಾಕ್‌ನಲ್ಲಿ ಸ್ಪರ್ಧೆಗಳು ನಡೆದಿದ್ದವು. ವಾರಗಳ ಹಿಂದೆ ನಡೆದ ಈ ಸ್ಪರ್ಧೆಯ ಒಂದು ಪ್ರಕ್ರಿಯೆಯ ವೇಳೆ ಮೆಕ್ಸಿಕೋದ ಸ್ಪರ್ಧಿಗೆ ಮಿಸ್ ಯೂನಿವರ್ಸ್‌ನ ಸಂಘಟಕನಾಗಿದ್ದ ನಾವತ್ ಇತ್ಸರಗರಿಸಿಲ್ ಅವಮಾನ ಮಾಡಿದ್ದರು. ಆಕೆಯನ್ನು ಡಮ್ಮಿ ಪೀಸ್ ಎಂದು ಕರೆಯುವ ಮೂಲಕ ಎಲ್ಲರ ಮುಂದೆ ಅವಮಾನಿಸಿದ್ದರು.

ಆದರೆ ಈ ವೇಳೆ ಫಾತಿಮಾ ಬಾಷ್ ಈ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿದ್ದರು. ಈ ತಿಂಗಳ ಆರಂಭದಲ್ಲಿ ನಡೆದ ನೇರ ಪ್ರಸಾರದ ಸ್ಯಾಶ್ ಸಮಾರಂಭದಲ್ಲಿ ಈ ಘಟನೆ ನಡೆದಿತ್ತು. ಥಾಯ್ ಸ್ಪರ್ಧೆಯ ಕಾರ್ಯನಿರ್ವಾಹಕ ನಾವತ್ ಇತ್ಸರಗರಿಸಿಲ್, ಈ ಸಮಾರಂಭದ ಪ್ರಚಾರದ ಚಿತ್ರೀಕರಣಕ್ಕೆ ಫಾತಿಮಾ ಬಾಷ್ ಗೈರುಹಾಜರಾದ ಬಗ್ಗೆ ಬಾಷ್ ಅವರನ್ನು ಪ್ರಶ್ನಿಸಿದರು. ಅಲ್ಲದೇ ತಮ್ಮನ್ನು ಸಮರ್ಥಿಸಿಕೊಳ್ಳುವಂತೆ ಹೇಳಿದ್ದರು. ಅಲ್ಲದೇ ಆಕೆಯನ್ನು ಡಮ್ಮಿ ಎಂದು ಕರೆದಿದ್ದರು.

ಆದರೆ ಇದಕ್ಕೆ ಸರಿಯಾಗಿ ತಿರುಗೇಟು ನೀಡಿದ ಮಿಸ್ ಮೆಕ್ಸಿಕೋ ಫಾತಿಮಾ ಬಾಷ್, ಆತ ಓರ್ವ ಮಹಿಳೆಯನ್ನು ಹಾಗೂ ಮೆಕ್ಸಿಕೋ ಪ್ರತಿನಿಧಿಯನ್ನು ಅವಮಾನಿಸುತ್ತಿದ್ದಾನೆ. ನೀವು ಓರ್ವ ಮಹಿಳೆಯಾಗಿರುವ ನನ್ನನ್ನು ಗೌರವಿಸುತ್ತಿಲ್ಲ ಹಾಗೂ ಒಂದು ದೇಶದ ಪ್ರತಿನಿಧಿಯಾಗಿ ಬಂದ ನನ್ನನ್ನು ಗೌರವಿಸುತ್ತಿಲ್ಲ ಎಂದು ಹೇಳಿ ಅವರು ಅಲ್ಲಿಂದ ಹೊರ ನಡೆದಿದ್ದರು. ಈ ವೇಳೆ ಅಲ್ಲಿದ್ದ ಇತರ ಸ್ಪರ್ಧಿಗಳು ಕೂಡ ಫಾತಿಮಾ ಮೇಲಿನ ಗೌರವದಿಂದ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದರು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಇದಾದ ನಂತರ ನಾವತ್ ಇತ್ಸರಗರಿಸಿಲ್ ಈ ಘಟನೆಗೆ ಸಂಬಂಧಿಸಿದಂತೆ ಬಹಿರಂಗವಾಗಿ ಕ್ಷಮೆ ಕೇಳಿದ್ದರು.

ಮಿಸ್ ಯೂನಿವರ್ಸ್ ಗೆದ್ದ ಫಾತಿಮಾ ಬಾಷ್ ಯಾರು?

ಕೇವಲ 25 ನೇ ವಯಸ್ಸಿನಲ್ಲಿ, ಫಾತಿಮಾ ಬಾಷ್ ಮೆಕ್ಸಿಕೋ ಮತ್ತು ವಿದೇಶಗಳಲ್ಲಿ ಸ್ಪಷ್ಟವಾದ ಪ್ರೊಫೈಲ್ ಅನ್ನು ನಿರ್ಮಿಸಿದ್ದಾರೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಅವರು ಮಿಸ್ ಯೂನಿವರ್ಸ್ ಮೆಕ್ಸಿಕೋ ಪ್ರಶಸ್ತಿಯನ್ನು ಗೆದ್ದರು. ಥೈಲ್ಯಾಂಡ್‌ನಲ್ಲಿ ನಡೆದ 74 ನೇ ಆವೃತ್ತಿಯ ಜಾಗತಿಕ ಸ್ಪರ್ಧೆಯಲ್ಲಿ ಈಗ ಗೆಲ್ಲುವ ಮೂಲಕ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಥೈಲ್ಯಾಂಡ್‌ನ ಭಾರತೀಯ ಮೂಲದ ಪ್ರವೀಣರ್ ಸಿಂಗ್ ಅವರು ಈ ಶೋದಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!