
ನಟಿ ರಾಣಿ ಮುಖರ್ಜಿ ತಮ್ಮ ಇತ್ತೀಚಿನ ಸಿನಿಮಾ 'ಮರ್ದಾನಿ 3' ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಥಿಯೇಟರ್‌ನಲ್ಲಿ ಉತ್ತಮ ಪ್ರದರ್ಶನ ಕಂಡ ನಂತರ, ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ 30 ದಿನಗಳನ್ನು ಪೂರೈಸಿದೆ. ಈ ಮೂಲಕ ಓಟಿಟಿಯಲ್ಲೂ ಸಿನಿಮಾ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಸಿನಿಮಾದ 'ಭಾವನಾತ್ಮಕ' ಜರ್ನಿ ಬಗ್ಗೆ ರಾಣಿ ಮಾತು
ಈ ಯಶಸ್ಸಿನ ಬಗ್ಗೆ ರಾಣಿ ಮುಖರ್ಜಿ ಒಂದು ಹೇಳಿಕೆಯಲ್ಲಿ ಮಾತನಾಡಿದ್ದು, ಈ ಜರ್ನಿಯನ್ನು 'ನಂಬಲಾಗದಷ್ಟು ಭಾವನಾತ್ಮಕ' ಎಂದು ಬಣ್ಣಿಸಿದ್ದಾರೆ. 'ಮರ್ದಾನಿ 3' ಸಿನಿಮಾದ ಜರ್ನಿ ನನಗೆ ತುಂಬಾ ಎಮೋಷನಲ್ ಆಗಿದೆ. ಯಾಕಂದ್ರೆ, ಈ ಸಿನಿಮಾ ಮೊದಲು ಥಿಯೇಟರ್‌ನಲ್ಲಿ, ಈಗ ನೆಟ್‌ಫ್ಲಿಕ್ಸ್ ಮೂಲಕ ಇಡೀ ಜಗತ್ತಿನ ಜನರನ್ನು ತಲುಪಿದೆ. ಥಿಯೇಟರ್‌ನಲ್ಲೂ ಈ ಸಿನಿಮಾ ಮಹಿಳಾ ಪ್ರಧಾನ ಆ್ಯಕ್ಷನ್ ಚಿತ್ರವಾಗಿ ಹಲವು ಮೈಲಿಗಲ್ಲುಗಳನ್ನು ದಾಟಿತ್ತು.
ಈಗ ಒಂದು ತಿಂಗಳಿಂದ ಸ್ಟ್ರೀಮಿಂಗ್‌ನಲ್ಲಿ ಟಾಪ್ ಲಿಸ್ಟ್‌ನಲ್ಲಿ ಟ್ರೆಂಡ್ ಆಗ್ತಿರೋದನ್ನು ನೋಡಿದ್ರೆ, ನನಗೆ ತುಂಬಾ ಖುಷಿ ಹಾಗೂ ವಿನಮ್ರ ಭಾವನೆ ಬರ್ತಿದೆ. ಈ ಯಶಸ್ಸು ಒಂದು ಬದಲಾವಣೆಯನ್ನು ಸೂಚಿಸುತ್ತಿದೆ. ಜನ ಈಗ ಪವರ್‌ಫುಲ್, ಮಹಿಳಾ ಪ್ರಧಾನ ಕಥೆಗಳನ್ನು ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲೂ ಒಪ್ಪಿಕೊಳ್ತಿದ್ದಾರೆ. ಧೈರ್ಯ, ನ್ಯಾಯ ಮತ್ತು ನಿಜವಾದ ಸಮಸ್ಯೆಗಳ ಬಗ್ಗೆ ಹೇಳುವ ಕಥೆಗಳು ಕಮರ್ಷಿಯಲ್ ಆಗಿ ಯಶಸ್ವಿಯಾಗಬಲ್ಲವು, ಜೊತೆಗೆ ಸಾಂಸ್ಕೃತಿಕವಾಗಿಯೂ ಪ್ರಭಾವ ಬೀರಬಲ್ಲವು ಅನ್ನೋದನ್ನು ಇದು ಸಾಬೀತುಪಡಿಸಿದೆ," ಎಂದು ಅವರು ಹೇಳಿದ್ದಾರೆ.
ಮಹಿಳಾ ಪ್ರಧಾನ ಸಿನಿಮಾಗಳು ಪ್ರೇಕ್ಷಕರನ್ನು ಹೇಗೆ ತಲುಪುತ್ತಿವೆ ಎಂಬುದನ್ನು ರಾಣಿ ವಿವರಿಸಿದ್ದಾರೆ. "ಒಂದು ಮಹಿಳಾ ಪ್ರಧಾನ ಆ್ಯಕ್ಷನ್ ಸಿನಿಮಾ ಥಿಯೇಟರ್‌ನಲ್ಲೂ ಹಿಟ್ ಆಗಿ, ನಂತರ ವಾರಗಟ್ಟಲೆ ಸ್ಟ್ರೀಮಿಂಗ್‌ನಲ್ಲೂ ಟಾಪ್‌ನಲ್ಲಿ ಟ್ರೆಂಡ್ ಆಗುತ್ತೆ ಅಂದ್ರೆ, ಅದಕ್ಕೊಂದು ಸ್ಪಷ್ಟ ಕಾರಣವಿದೆ: ಜನರಿಗೆ ಪವರ್, ಪರ್ಪಸ್ ಮತ್ತು ಸತ್ಯ ಇರುವ ಕಥೆಗಳು ಬೇಕು. ಪ್ರಾಮಾಣಿಕತೆ, ಭಾವನೆ ಮತ್ತು ಗಟ್ಟಿಯಾದ ನೈತಿಕ ದನಿಯಿರುವ ಕಥೆಗಳು ಎಲ್ಲಿಗೆ ಬೇಕಾದರೂ ತಲುಪಬಲ್ಲವು. ಅವು ಥಿಯೇಟರ್‌ನಿಂದ ಶುರುವಾಗಿ, ಜಗತ್ತಿನಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ಜಾಗ ಮಾಡಿಕೊಳ್ಳಬಲ್ಲವು" ಎಂದು ಅವರು ಸೇರಿಸಿದ್ದಾರೆ.
ನಟಿ 'ಮರ್ದಾನಿ' ಫ್ರಾಂಚೈಸ್‌ನ ಜರ್ನಿ ಮತ್ತು ಅದರ ಹೆಚ್ಚುತ್ತಿರುವ ಪ್ರಭಾವದ ಬಗ್ಗೆಯೂ ಮಾತನಾಡಿದ್ದಾರೆ. 'ಮರ್ದಾನಿ' ಫ್ರಾಂಚೈಸ್‌ನ ಸಿನಿಮಾಗಳು ಸುಮಾರು ಮೂರು ತಿಂಗಳಿಂದ ಸ್ಟ್ರೀಮಿಂಗ್‌ನಲ್ಲಿ ಟ್ರೆಂಡಿಂಗ್‌ನಲ್ಲಿವೆ. ಅಂದ್ರೆ, ಈ ಫ್ರಾಂಚೈಸ್ ಜನರಿಗೆ ಮುಖ್ಯ ಎನಿಸುವ ವಿಷಯಗಳ ಬಗ್ಗೆ ಮಾತನಾಡುತ್ತಿದೆ. ಶಿವಾನಿ ಶಿವಾಜಿ ರಾಯ್ ಈಗ ಕೇವಲ ಒಂದು ಪಾತ್ರವಾಗಿ ಉಳಿದಿಲ್ಲ. ಭಾರತ ಮತ್ತು ಜಗತ್ತಿನಾದ್ಯಂತ ಜನರ ಮನಸ್ಸಿನಲ್ಲಿ ಆಕೆ ಜಾಗ ಪಡೆದಿದ್ದಾಳೆ. ಇದೇ ಕಾರಣಕ್ಕೆ ಈ ಫ್ರಾಂಚೈಸ್‌ಗೆ ಇಂದಿಗೂ ಅಷ್ಟೊಂದು ಪ್ರೀತಿ ಸಿಗುತ್ತಿದೆ," ಎಂದು ಅವರು ಹೇಳಿದ್ದಾರೆ. ಅಭಿರಾಜ್ ಮಿನಾವಾಲಾ ನಿರ್ದೇಶನದ ಮತ್ತು ಆದಿತ್ಯ ಚೋಪ್ರಾ ನಿರ್ಮಾಣದ 'ಮರ್ದಾನಿ 3' ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾಗಿತ್ತು. ಭಾರತದಲ್ಲಿ ಈ ಸಿನಿಮಾ 53 ಕೋಟಿ ರೂಪಾಯಿಗಿಂತ ಹೆಚ್ಚು ಕಲೆಕ್ಷನ್ ಮಾಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.