ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!

Published : Dec 06, 2025, 05:46 PM IST
Manara Chopra baharain

ಸಾರಾಂಶ

Priyanka Chopra sister:ಪ್ರಿಯಾಂಕಾ ಚೋಪ್ರಾ ಅವರ ಸಹೋದರಿ ಹಾಗೂ ಬಿಗ್‌ಬಾಸ್‌ ಖ್ಯಾತಿಯ ಮನಾರಾ ಚೋಪ್ರಾ ಅವರು ಬಹರೇನ್‌ನ ಮಸೀದಿಯೊಂದಕ್ಕೆ ಬುರ್ಖಾ ಧರಿಸಿ ಭೇಟಿ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಅಲ್ಲಾ ಒಬ್ಬನೇ ಎಂದು ಹೇಳಿರುವ ಅವರ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆ ವ್ಯಕ್ತವಾಗಿದೆ.

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮದುವೆಯ ನಂತರ ವಿದೇಶದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅಮೆರಿಕನ್‌ ಗಾಯಕ ನಿಕ್‌ ಜೋನಾಸ್‌ ಅವರನ್ನು ವಿವಾಹವಾಗಿದ್ದಾರೆ. ನಿಕ್‌ ಹಾಗೂ ಪ್ರಿಯಾಂಕಾ ಅವರಿಗೆ ಒಂದು ಹೆಣ್ಣು ಮಗುವಿದ್ದು, ಆ ಮಗುವಿಗೆ ಮಾಲ್ತಿ ಮೇರಿ ಎಂದು ಹೆಸರಿಟ್ಟಿದ್ದಾರೆ. ಅಮೆರಿಕದಲ್ಲಿಯೇ ನೆಲೆಸಿದ್ದರೂ, ಅವರು ಭಾರತಕ್ಕೆ ಬರುವ ಅವಕಾಶವನ್ನು ಮಿಸ್‌ ಮಾಡೋದಿಲ್ಲ. ರಾಜಮೌಳಿ ನಿರ್ದೇಶನದ ಮಹೇಶ್‌ ಬಾಬು ನಟನೆಯ ವಾರಣಾಸಿ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಅಮೆರಿಕದಲ್ಲಿ ಇರುವ ಸಮಯದಲ್ಲೂ ಅವರು ಇಡೀ ಕುಟುಂಬದೊಂದಿಗೆ ಭಾರತೀಯ ಹಬ್ಬಗಳನ್ನು ಆಚರಿಸೋದನ್ನು ಇಷ್ಟಪಡುತ್ತಾರೆ. ಇದರ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಅವರು ಅಪ್‌ಡೇಟ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ಕೆಲದ ದಿನಗಳ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಬಾಲಿವುಡ್‌ ಬಗ್ಗೆ ಕೆಲವು ಆಘಾತಕಾರಿ ಸ್ಟೇಟ್‌ಮೆಂಟ್‌ಗಳನ್ನು ನೀಡಿದ್ದರು. ಪ್ರಿಯಾಂಕಾ ಚೋಪ್ರಾ ಜೊತೆಗೆ, ಅವರ ಸಹೋದರಿಯರು ಕೂಡ ಚಲನಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಪ್ರಿಯಾಂಕಾ ಜೊತೆಗೆ, ಪರಿಣಿತಿ ಚೋಪ್ರಾ ಮತ್ತು ಮನಾರಾ ಚೋಪ್ರಾ ಬಾಲಿವುಡ್‌ನಲ್ಲಿದ್ದಾರೆ. ಪ್ರಿಯಾಂಕಾ ಅವರಂತೆ ಪರಿಣಿತಿ ಹಾಗೂ ಮನಾರಾ ಕೂಡ ತಮ್ಮ ನಟನೆಯ ಮೂಲಕ ಗಮನಸೆಳೆದಿದ್ದಾರೆ.

ಇತ್ತೀಚೆಗೆ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ಹೋಗಿಬಂದಿದ್ದ ಮನಾರಾ ಚೋಪ್ರಾ, ಅಲ್ಲಿ ಸಖತ್‌ ಹವಾ ಎಬ್ಬಿಸಿದ್ದರು. ಇಷ್ಟೇ ಅಲ್ಲದೆ, ಪ್ರಿಯಾಂಕಾ ಚೋಪ್ರಾ ಕೂಡ ಮಾನಾರಾ ಚೋಪ್ರಾ ಬಿಗ್‌ಬಾಸ್‌ ಮನೆಯಲ್ಲಿದ್ದಾಗ ಅವರನ್ನು ಬೆಂಬಲಿಸಿದ್ದರು. ಮನಾರಾ ಬಿಗ್‌ಬಾಸ್‌ ಮನೆಯಿಂದ ಹೊರಬಂದ ನಂತರ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್‌ ಅವರಿಗೆ ಕರೆ ಮಾಡಿ ರಿಯಾಲಿಟಿ ಶೋನಲ್ಲಿನ ಪ್ರದರ್ಶನವನ್ನು ಹೊಗಳಿದ್ದರು. ಮನಾರಾ ಸೋಶಿಯಲ್‌ ಮೀಡಿಯಾದಲ್ಲಿ ಸಕತ್‌ ಆಕ್ಟೀವ್‌ ಇದ್ದಾರೆ. ತಮ್ಮ ಬದುಕಿನಲ್ಲಿ ಆಗುವ ಪ್ರತಿ ವಿಚಾರಗಳನ್ನೂ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಹೀಗಿರುವ ಮನಾರಾ ಚೋಪ್ರಾ ಬಗ್ಗೆ ಈಗ ಟೀಕೆ ವ್ಯಕ್ತವಾಗಿದೆ.

ಮಸೀದಿ ಭೇಟಿ ಮಾಡಿದ ಮನಾರಾ ಚೋಪ್ರಾ

ಈಗ ಮನಾರಾ ಚೋಪ್ರಾ ನೇರವಾಗಿ ಮಸೀದಿಗೆ ತಲುಪಿದ್ದಾರೆ. ಮನಾರಾ ಅವರ ವಿಡಿಯೋ ಮತ್ತು ಬಹರೇನ್‌ನ ಅಲ್‌ ಫತೇ ಗ್ರ್ಯಾಂಡ್‌ ಮಸೀದಿಯ ಕೆಲವು ಫೋಟೋಗಳು ವೈರಲ್ ಆಗಿದ್ದು, ಸಾಕಷ್ಟು ಸಂಚಲನ ಮೂಡಿಸಿವೆ. ವೀಡಿಯೊದಲ್ಲಿ ಮನಾರಾ ಹಿಜಾಬ್ ಜೊತೆಗೆ ಬುರ್ಖಾ ಧರಿಸಿರುವುದು ಕಂಡುಬರುತ್ತದೆ. ಇದರೊಂದಿಗೆ, ವೀಡಿಯೊದಲ್ಲಿ ಅಜಾನ್ ಸ್ಪಷ್ಟವಾಗಿ ಕೇಳಿಸುತ್ತದೆ. ಇದಲ್ಲದೆ, ಅಲ್ಲಾಹನು ಎಲ್ಲೆಡೆ ಒಬ್ಬನೇ ಎಂದು ಆಕೆ ಹೇಳುವುದನ್ನು ಸಹ ಕಾಣಬಹುದು. ಅವರು ಸೆಲ್ಫಿ ಕ್ಯಾಮೆರಾದೊಂದಿಗೆ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ ಮತ್ತು ಮನಾರಾ ಚೋಪ್ರಾ ಮಸೀದಿಯನ್ನು ತೋರಿಸಲು ಪ್ರಯತ್ನಿಸಿದ್ದಾರೆ.

ಮನಾರಾ ಚೋಪ್ರಾ ಅವರ ಈ ವಿಡಿಯೋ ನೋಡಿ ಜನ ಶಾಕ್‌ಗೆ ಒಳಗಾಗಿದ್ದಾರೆ. ಇಷ್ಟೇ ಅಲ್ಲದೆ, ಸಾಕಷ್ಟು ಮಂದಿ ಕಾಮೆಂಟ್‌ ಕೂಡ ಮಾಡಿದ್ದಾರೆ. ಶೀಘ್ರದಲ್ಲಿಯೇ ಮನಾರಾ ಕೂಡ ಇಸ್ಲಾಂಗೆ ಮತಾಂತರಗೊಳ್ಳುವ ಸೂಚನೆಗಳು ಕಾಣುತ್ತಿದೆ ಎಂದಿದ್ದರೆ, ಇನ್ನೂ ಕೆಲವರು ಇದನ್ನು ಮಾಡುವ ಅಗತ್ಯವೇನು ಎಂದು ಪ್ರಶ್ನೆ ಮಾಡಿದ್ದಾರೆ. ಮನಾರಾ ಯಾರ ಜೊತೆಯಲ್ಲಿ ಮಸೀದಿಗೆ ಹೋಗಿದ್ದಾರೆ ಅನ್ನೋದು ಗೊತ್ತಾಗಿಲ್ಲ. ಆದರೆ, ದೀಪಿಕಾ ಪಡುಕೋಣೆ ಬಳಿಕ ಇವರ ಮಸೀದಿ ಭೇಟಿಯೂ ವಿವಾದಕ್ಕೆ ಕಾರಣವಾಗಿದೆ.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?
ವಿಲನ್ ಶೇಡ್​​ನಲ್ಲೂ ಪ್ಲೇ ಬಾಯ್ ಲುಕ್.. ಡೆವಿಲ್ ದರ್ಶನ್‌ರನ್ನ ಕಣ್ತುಂಬಿಕೊಂಡ 3 ಮಿಲಿಯನ್‌ ಮಂದಿ!