ನಿಖಿಲ್‌ ಗೌಡ ಹಿಟ್‌ ಅಂಡ್‌ ರನ್‌ ಕೇಸ್‌ ಗೂ ನನಗೂ ಸಂಬಂಧ ಇಲ್ಲ, ಮೊದಲ ಬಾರಿ ಯೂಟ್ಯೂಬರ್‌ ಮಧು ಗೌಡ ರಿಯಾಕ್ಷನ್‌

Published : Nov 03, 2026, 11:30 AM IST
Madhu Gowda

ಸಾರಾಂಶ

ಯೂಟ್ಯೂಬರ್ ನಿಖಿಲ್ ಗೌಡ ಹಿಟ್ ಅಂಡ್ ರನ್ ಕೇಸ್ ಬಗ್ಗೆ ಮೊದಲ ಬಾರಿ ಮಧು ಗೌಡ ರಿಯಾಕ್ಷನ್ ನೀಡಿದ್ದಾರೆ. ಯೂಟ್ಯೂಬ್ ನಲ್ಲಿ ಒಂದು ವಿಡಿಯೋ ಹಂಚಿಕೊಂಡ ಅವರು ಪ್ರಕರಣದ ಬಗ್ಗೆ ಕ್ಲಾರಿಟಿ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವೈಯಕ್ತಿಕ ಜೀವನವನ್ನು ತೋರಿಸಿ ಪ್ರಸಿದ್ಧಿಗೆ ಬಂದವರು ನಿಖಿಲ್ ಗೌಡ ಹಾಗೂ ಮಧು ಗೌಡ. ಕೆಲವೇ ದಿನಗಳ ಹಿಂದೆ ಮಧು ಗೌಡ ಹಾಗೂ ನಿಖಿಲ್ ಪಾಲಕರಾಗಿದ್ದಾರೆ. ಈ ಸಂಭ್ರಮದಲ್ಲಿರುವಾಗ್ಲೇ ನಿಖಿಲ್ ಗೌಡ ಹಿಟ್ ಅಂಡ್ ರನ್ ಕೇಸ್ ಚರ್ಚೆಯಲ್ಲಿದೆ. ಈ ಪ್ರಕರಣ ಬೆಳಕಿಗೆ ಬಂದ್ಮೇಲೆ ನಿಖಿಲ್ ಗೌಡ ಮಾತ್ರವಲ್ಲ ಮಧು ಗೌಡ ಮೇಲೂ ಸಾಕಷ್ಟು ಆರೋಪವನ್ನು ಜನರು ಮಾಡ್ತಿದ್ದಾರೆ. ಹಿಟ್ ಅಂಡ್ ರನ್ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸಾಕಷ್ಟು ಕಮೆಂಟ್ ಕೂಡ ಬಂದಿತ್ತು. ಈಗ ಮಧು ಗೌಡ ಅದಕ್ಕೆ ಉತ್ತರ ನೀಡಿದ್ದಾರೆ.

ಹಿಟ್ ಆಂಡ್ ರನ್ ಕೇಸ್ ಬಗ್ಗೆ ಮಧು ಗೌಡ ಹೇಳಿಕೆ

ಯೂಟ್ಯೂಬ್ ನಲ್ಲಿ ಮಧು ಗೌಡ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಮೊದಲು ಶಾಪಿಂಗ್ ಮಾಡ್ತಾರೆ. ನಂತ್ರ ತಮ್ಮ ಕಾಂಪ್ಲೆಕ್ಸ್ ಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ಕೆಲ್ಸಗಳನ್ನು ನೋಡಿದ್ದಾರೆ. ಇದೇ ವಿಡಿಯೋದಲ್ಲಿ ಹಿಟ್ ಆಂಡ್ ರನ್ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ನನಗೂ ಈ ವಿಷ್ಯ ಮೊದಲು ಗೊತ್ತಿರಲಿಲ್ಲ ಅಂತ ಮಧು ಗೌಡ ಹೇಳಿದ್ದಾರೆ. ಹಿಟ್ ಅಂಡ್ ರನ್ ಕೇಸ್ ಆಗಿದೆ ಅಂತ ವಿಡಿಯೋ ಪೋಸ್ಟ್ ಮಾಡಿದ್ಮೇಲೆ ನಿಖಿಲ್ ಗೌಡ ನನಗೂ ವಿಷ್ಯ ಹೇಳಿದ್ರು. ನನಗೆ ಮೊದಲು ಇದು ಗೊತ್ತಿರಲಿಲ್ಲ. ನಾವ್ಯಾರೂ ಅಲ್ಲಿರಲಿಲ್ಲ. ನಮಗೆ ಭಯವಾಗುತ್ತೆ ಎನ್ನುವ ಕಾರಣಕ್ಕೆ ಅವರು ಇಂಥ ವಿಷ್ಯಗಳನ್ನು ನಮಗೆ ಹೇಳೋದಿಲ್ಲ. ಹಾಗಾಗಿ ಈ ವಿಷ್ಯವನ್ನೂ ನಿಖಿಲ್ ಹೇಳಿರಲಿಲ್ಲ ಎಂದು ಮಧುಗೌಡ ಹೇಳಿದ್ದಾರೆ.

ತಪ್ಪಾಗೋಗಿದೆ. ಯಾರೂ ಉದ್ದೇಶ ಪೂರ್ವಕವಾಗಿ ಹೀಗೆ ಮಾಡಿರೋದಿಲ್ಲ. ನಮ್ಮ ಕಡೆಯಿಂದ ಎಲ್ಲ ಸಹಾಯ ಮಾಡಿದ್ದೇವೆ. ಸದ್ಯ ಎಲ್ಲವೂ ಸ್ಮೂತ್ ಆಗಿ ನಡೆಯುತ್ತಿದೆ ಎಂದು ಮಧುಗೌಡ ಹೇಳಿದ್ದಾರೆ.

ನನಗೂ ಇದಕ್ಕೂ ಸಂಬಂಧ ಇಲ್ಲ

ಇಷ್ಟೇ ಅಲ್ದೆ ಮಧು ಗೌಡ ವಿಡಿಯೋದಲ್ಲಿ ಕ್ಲಾರಿಟಿ ಒಂದನ್ನು ನೀಡಿದ್ದಾರೆ. ಈ ಘಟನೆ ಆದ್ಮೇಲೆ ಎಲ್ಲರೂ ನನ್ನ ಹೆಸರು ಹೇಳ್ತಿದ್ದಾರೆ. ನನ್ನ ವಿಡಿಯೋದಲ್ಲಿ ಬರುವವರು ಏನೇ ತಪ್ಪು ಮಾಡಿದ್ರೂ ಎಲ್ಲದಕ್ಕೂ ನಾನು ಹೊಣೆಯಲ್ಲ. ನಾನು ಸ್ವಲ್ಪ ಜವಾಬ್ದಾರಿ ತಗೊಳ್ಬಹುದು ಅಷ್ಟೆ. ಆದ್ರೆ ಅದಕ್ಕೆ ನಾನೇ ಕಾರಣ ಆಗಿರೋದಿಲ್ಲ ಅಂತ ಮಧು ಗೌಡ ಸ್ಪಷ್ಟನೆ ನೀಡಿದ್ದಾರೆ. ಇದ್ರಿಂದ ನಾನೂ ತುಂಬಾ ನೊಂದಿದ್ದೇನೆ, ನಮಗೆ ಸಾಂತ್ವಾನ ಹೇಳಿದ, ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದ ಅಂತ ಮಧುಗೌಡ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ತಮಿಳು ರಿಯಾಲಿಟಿ ಶೋನಲ್ಲಿ ಕನ್ನಡದ ಕಂಪು.. ಪುನೀತ್‌ ರಾಜ್‌ಕುಮಾರ್ ಹಾಡಿಗೆ ಭೂಷಣ್ ಮಾಸ್ಟರ್ ಭರ್ಜರಿ ಸ್ಟೆಪ್ಸ್!
ನಟ ಜಗ್ಗೇಶ್​ ಕುರಿತು ಯಾರಿಗೂ ತಿಳಿಯದ ಗುಟ್ಟನ್ನು ವೇದಿಕೆ ಮೇಲೆ ಹೇಳಿದ ನಟಿ ಮೇಘನಾ ರಾಜ್​