
ಬಿಷ್ಣೋಯಿ ಗ್ಯಾಂಗ್ ಬೆದರಿಕೆ!
ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಹಿಂದಿಯ Bigg Boss 19: ಪವರ್ ಸ್ಟಾರ್ ಪವನ್ ಸಿಂಗ್ ಅವರಿಗೆ ಲಾರೆನ್ಸ್ ಬಿಷ್ಟೋಯ್ (Lawrence Bishnoi Gang) ಬೆದರಿಕೆ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೌದು, Bigg Boss 19 finale ಯಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಬೇಕಿದ್ದ ಪವರ್ ಸಿಂಗ್ ಅವರಿಗೆ ಬೆದರಿಕೆ ಕರೆ ಬಂದಿದೆ. ಮೂಲಗಳ ಪ್ರಕಾರ, ಬಿಗ್ ಬಾಸ್ ಫಿನಾಲೆ ಶೋನಲ್ಲಿ ಪವನ್ ಸಿಂಗ್ ಕಾಣಿಸಿಕೊಳ್ಳಬೇಕಿತ್ತು. ಆದರೆ ಅವರಿಗೆ ಫೋನ್ ಕರೆಯ ಮೂಲಕ ಬೆದರಿಕೆ ಹಾಕಲಾಗಿದೆ.
ಇನ್ನು ಪವನ್ ಸಿಂಗ್‌ಗೆ ಕರೆ ಮಾಡಿದ ವ್ಯಕ್ತಿ ತಾನು ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದವನೆಂದು ಹೇಳಿಕೊಂಡಿದ್ದು, ಸಲ್ಮಾನ್ ಖಾನ್ ಅವರೊಂದಿಗೆ ವೇದಿಕೆ ಹಂಚಿಕೊಂಡರೆ, ಮತ್ತೆ ಎಂದಿಗೂ ಕೆಲಸ ಮಾಡಲು ಸಾಧ್ಯವಾಗದ ರೀತಿ ಮಾಡ್ತೀನಿ ಅಂತ ಬೇದರಿಕೆ ಹಾಕಿದ್ದಾರಂತೆ. ಜೊತೆಗೆ, ದೊಡ್ಡ ಮೊತ್ತದ ಹಣವನ್ನು ಸಹ ಕೇಳಿದ್ದಾನೆ ಎನ್ನಲಾಗಿದೆ. ಬಿಗ್ ಬಾಸ್ 19 ರ ಗ್ರಾಂಡ್ ಫಿನಾಲೆ ಇಂದು ನಡೆಯಲಿದೆ. ಸಲ್ಮಾನ್ ಖಾನ್ ನಿರೂಪಣೆ ಮಾಡುತ್ತಿರುವ ಈ ಕಾರ್ಯಕ್ರಮದಲ್ಲಿ ಹಲವಾರು ಸೆಲೆಬ್ರಿಟಿಗಳು ಭಾಗವಹಿಸುತ್ತಿದ್ದಾರೆ.
ಭೋಜ್‌ಪುರಿ ಸಿನಿಮಾ ಸ್ಟಾರ್ ನಟ ಪವರ್ ಸ್ಟಾರ್ ಪವನ್ ಸಿಂಗ್ ಅವರಿಗೆ ಲಾರೆನ್ಸ್ ಬಿಡೋಯ್ ಗ್ಯಾಂಗ್ ನಿಂದ ಬೆದರಿಕೆ ಬಂದ ಬಳಿಕ ಭದ್ರತಾ ಸಂಸ್ಥೆ ಜಾಗೃತವಾಗಿದೆ. ಘಟನೆಯ ನಂತರ, ಪವನ್ ಸಿಂಗ್ ಅವರ ತಂಡವು ಘಟನೆಯ ಬಗ್ಗೆ ಭದ್ರತಾ ಸಂಸ್ಥೆಗಳಿಗೆ ಮಾಹಿತಿ ನೀಡಿತು. ಮೊಬೈಲ್ ಸಂಖ್ಯೆ ಮತ್ತು ಕರೆ ವಿವರಗಳ ಆಧಾರದ ಮೇಲೆ ಪೊಲೀಸರು ಈಗಾಗಲೇ ತನಿಖೆ ಆರಂಭಿಸಿದ್ದಾರೆ.
1998 ರಲ್ಲಿ, 'ಹಮ್ ಸಾಥ್ ಸಾಥ್ ಹೈ' ಚಿತ್ರದ ಚಿತ್ರೀಕರಣದ ಸಮಯದಲ್ಲಿ, ಜೋದ್‌ಪುರದಲ್ಲಿ ಕೃಷ್ಣಮೃಗ ಬೇಟೆಯ ಪ್ರಕರಣ ಆಗಿತ್ತು. ಇದರಲ್ಲಿ ಸಲ್ಮಾನ್ ಖಾನ್ ಆರೋಪಿಯಾಗಿದ್ದರು. ಬಿಷ್ಟೋಮ್ ಸಮುದಾಯವು ಕೃಷ್ಣಮೃಗವನ್ನು ಪವಿತ್ರ ಪ್ರಾಣಿ ಎಂದು ಪರಿಗಣಿಸುತ್ತದೆ. ಅದನ್ನು ಕೊಲ್ಲುವುದು ಅವರ ಧಾರ್ಮಿಕ ನಂಬಿಕೆಗಳಿಗೆ ಗಂಭೀರ ಅವಮಾನವೆಂದು ಪರಿಗಣಿಸುತ್ತದೆ. ದರೋಡೆಕೋರ ಲಾರೆನ್ಸ್ ಬಿಷ್ಟೋಯ್ ಈ ಬಿಷ್ಟೋಯ್ ಸಮುದಾಯಕ್ಕೆ ಸೇರಿದವನು. 'ಸಲ್ಮಾನ್ ಖಾನ್ ತಮ್ಮ ನಂಬಿಕೆಯನ್ನು ಅವಮಾನಿಸಿದ್ದಾರೆ ಮತ್ತು ನಟ ಶಿಕ್ಷೆಗೆ ಒಳಗಾಗಬೇಕು" ಎಂದು ಅವರು ಪದೇ ಪದೇ ಹೇಳಿದ್ದರು. ಆ ದ್ವೇಷ ಇನ್ನೂ ಚಾಲ್ತಿಯಲ್ಲಿದೆ.
ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ ಬಾಸ್ 19 ಹಿಂದಿಯ ಗ್ರಾಂಡ್ ಫಿನಾಲೆ ಇಂದು ನಡೆಯುತ್ತಿದೆ. ಭೋಜ್‌ಪುರಿ ತಾರೆ ಮತ್ತು ಬಿಜೆಪಿ ನಾಯಕ ಪವನ್ ಸಿಂಗ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅದಕ್ಕೂ ಮೊದಲು, ಅವರ ತಂಡದ ಸಂಖ್ಯೆಗೆ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಕರೆ ಮಾಡಿದ ವ್ಯಕ್ತಿ ಲಾರೆನ್ಸ್ ಬಿಷ್ಟೋಮ್ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿರುವುದಾಗಿ ಹೇಳಿಕೊಂಡಿದ್ದರು. ಸಲ್ಮಾನ್ ಖಾನ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳದಂತೆ ಬೆದರಿಕೆ ಹಾಕಿದ್ದರು. ಆದರೆ, ಇದೀಗ ಪವನ್ ಸಿಂಗ್ ಭಾಗಿಯಾಗುತ್ತಿದ್ದು ಮುಂದಿನ ಬೆಳವಣಿಗೆ ಏನಾಗಲಿದೆ ಎಂಬ ಕುತೂಹಲ ಕಾಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.