ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?

Published : Dec 07, 2025, 04:29 PM IST
Samantha Ruth Prabhu's lozenge-cut diamond ring

ಸಾರಾಂಶ

ರಾಜ್ ನಿಡಿಮೋರು ಈ ಹಿಂದೆ 2015ರಲ್ಲಿ ಬರಹಗಾರ್ತಿ ಮತ್ತು ವೈದ್ಯೆ ಶ್ಯಾಮಲಿ ದೇ ಅವರನ್ನ ವಿವಾಹವಾಗಿದ್ದರು. ಅವರು 2022ರಲ್ಲಿ ಪರಸ್ಪರ ಬೇರ್ಪಟ್ಟಿದ್ದರು ಎನ್ನಲಾಗಿದೆ. ಸಮಂತಾ ಈ ಹಿಂದೆ ನಾಗ ಚೈತನ್ಯರನ್ನ ವಿವಾಹವಾಗಿ ಡಿವೋರ್ಸ್ ಮಾಡಿದ್ದರು. ಸಮಂತಾ ಮತ್ತು ರಾಜ್ ಒಟ್ಟಿಗೆ ಕೆಲಸ ಮಾಡಿದ್ದಾರೆ.

ಸಮಂತಾ ಹೊಸ ನಿರ್ಧಾರ

Samantha Ruth Prabhu: ಸೌತ್ ಇಂಡಿಯನ್ ಫೇಮಸ್ ನಟಿ ಸಮಂತಾ ನಿರ್ದೇಶಕ ರಾಜ್ ನಿಡಿಮೋರು ಜೊತೆ ಇತ್ತೀಚೆಗೆ ಎರಡನೇ ಮದುವೆ ಮಾಡಿಕೊಂಡಿದ್ದು ಎಲ್ಲೆಡೆ ಟ್ರೆಂಡಿಂಗ್ ಆಗಿದೆ. ಸಮಂತಾ ಅವರು ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ಕೆಲವು ತಿಂಗಳುಗಳ ಕಾಲ ಡೇಟಿಂಗ್ ಮಾಡಿ 01 ಡಿಸೆಂಬರ್ 2005ರಂದು ತಮಿಳುನಾಡು ಕೊಯಮುತ್ತೂರಿನ ಸದ್ಗುರು ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಶನ್‌ನಲ್ಲಿ ಲಿಂಗಭೈರವಿ ದೇವಿಯ ಎದುರು 'ಭೂತ ಶುದ್ಧಿ' ಪದ್ಧತಿ ಮೂಲಕ ವಿವಾಹ ಆಗಿದ್ದಾರೆ.

ಇಬ್ಬರೂ ಪ್ರಸ್ತುತ ತಮ್ಮ ಹನಿಮೂನ್ ಅನ್ನು ಆನಂದಿಸುತ್ತಿದ್ದಾರೆ ಎಂದು ಹಲವು ತಿಳಿದಿದ್ದಾರೆ. ಆದರೆ ವಿಷಯ ಬೇರೆಯೇ ಇದೆ. ಸಮಂತಾ-ರಾಜ್ ತಮ್ಮ ಹನಿಮೂನ್ ಕ್ಯಾನ್ಸಲ್ ಮಾಡಿ ತಮ್ಮತಮ್ಮ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಮಂತಾ ಅವರ ಇತ್ತೀಚಿನ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನವದಂಪತಿ ಹನಿಮೂನ್‌ಗೆ ಹೋಗಿದ್ದಾರೆಂದು ಎಲ್ಲರೂ ಭಾವಿಸಿರುವಾಗಲೇ ಸಮಂತಾ ಹಠಾತ್ ಟ್ವಿಸ್ಟ್ ನೀಡಿದ್ದಾರೆ. ಸಮಂತಾ ತಮ್ಮ ಮುಂದಿನ ಯೋಜನೆಯತ್ತ ಗಮನ ಹರಿಸಲು ನಿರ್ಧರಿಸಿದ್ದಾರೆ. ಇದರ ಭಾಗವಾಗಿ ಅವರು ಚಿತ್ರೀಕರಣಕ್ಕಾಗಿ ತಮ್ಮ ಮೇಕಪ್ ಮಾಡಿಕೊಳ್ಳುತ್ತಿರುವ ಫೋಟೋವನ್ನ ಹಂಚಿಕೊಂಡಿದ್ದಾರೆ.

ಸಮಂತಾ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಜೊತೆ 'Do this' ಎಂಬ ಟ್ಯಾಗ್‌ ಲೈನ್ ಹಾಕಿದ್ದಾರೆ. ಇದರೊಂದಿಗೆ ಸಮಂತಾ-ರಾಜ್ ನಿಡಿಮೋರು ಅವರ ಹನಿಮೂನ್ ರದ್ದಾಗಿದ್ದು, ಅವರು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ವೃತ್ತಿಜೀವನಕ್ಕೆ ಯಾವಾಗಲೂ ಆದ್ಯತೆ ನೀಡುವ ಸಮಂತಾ ಹಾಗೂ ರಾಜ್ ಈಗ ಹನಿಮೂನ್‌ ಮಾಡಿಕೊಳ್ಳುತ್ತಿಲ್ಲ. ಸಮಂತಾ ತಮ್ಮದೇ ನಿರ್ಮಾಣದ 'ಮಾ ಇಂತಿ ಬಂಗಾರಂ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನ ನಂದಿನಿ ರೆಡ್ಡಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣಕ್ಕಾಗಿ ಸಮಂತಾ ತಮ್ಮ ಹನಿಮೂನ್ ಟ್ರಿಪ್ ರದ್ದುಗೊಳಿಸಿ ಕ್ಯಾಮೆರಾ ಮುಂದೆ ನಿಂತಿದ್ದಾರೆ.

ಕೊಯಮತ್ತೂರಿನ ಈಶಾ ಫೌಂಡೇಶನ್‌ನಲ್ಲಿ ಸಮಂತಾ ಮದುವೆ

ಡಿಸೆಂಬರ್ 1ರಂದು ಕೊಯಮತ್ತೂರಿನ ಈಶಾ ಫೌಂಡೇಶನ್‌ನಲ್ಲಿ ಸಮಂತಾ ಮತ್ತು ರಾಜ್ ನಿಧಿಮೋರು ಅತ್ಯಂತ ಸರಳ ರೀತಿಯಲ್ಲಿ ವಿವಾಹವಾದರು. ವಿವಾಹ ಸಮಾರಂಭವು ಯಾವುದೇ ಮಾಧ್ಯಮಗಳ ಪ್ರಚಾರವಿಲ್ಲದೆ, ಕುಟುಂಬ ಸದಸ್ಯರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ, ಕೇವಲ 30 ಆಪ್ತರು-ಅತಿಥಿಗಳೊಂದಿಗೆ ನಡೆಯಿತು. ಈ ವಿವಾಹದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಸಮಂತಾ ಅವರ ಫೋಟೋಗಳಲ್ಲಿ ಅವರು ಧರಿಸಿದ್ದ ಉಂಗುರವು ಹೈಲೈಟ್ ಆಗಿದೆ. ಮದುವೆಯಲ್ಲಿ ಕೆಂಪು ರೇಷ್ಮೆ ಸೀರೆಯಲ್ಲಿ ಸಮಂತಾ ಮಿಂಚುತ್ತಿದ್ದರು. ರಾಜ್ ಅವರು ಕ್ರೀಮ್ ಕಲರ್‌ ಕುರ್ತಾದಲ್ಲಿ ಸರಳವಾಗಿದ್ದರು.

ಈ ಹಿಂದೆ ನಾಗ ಚೈತನ್ಯರನ್ನ ವಿವಾಹವಾಗಿ ಡಿವೋರ್ಸ್ ಮಾಡಿದ್ದರು

ರಾಜ್ ನಿಡಿಮೋರು ಈ ಹಿಂದೆ 2015ರಲ್ಲಿ ಬರಹಗಾರ್ತಿ ಮತ್ತು ವೈದ್ಯೆ ಶ್ಯಾಮಲಿ ದೇ ಅವರನ್ನ ವಿವಾಹವಾಗಿದ್ದರು. ಅವರು 2022ರಲ್ಲಿ ಪರಸ್ಪರ ಬೇರ್ಪಟ್ಟಿದ್ದರು ಎನ್ನಲಾಗಿದೆ. ಸಮಂತಾ ಈ ಹಿಂದೆ ನಾಗ ಚೈತನ್ಯರನ್ನ ವಿವಾಹವಾಗಿ ಡಿವೋರ್ಸ್ ಮಾಡಿದ್ದರು. ಸಮಂತಾ ಮತ್ತು ರಾಜ್ 'ದಿ ಫ್ಯಾಮಿಲಿ ಮ್ಯಾನ್ 2' ಮತ್ತು 'ಸಿಟಾಡೆಲ್: ಹನಿ ಬನ್ನಿ ' ನಂತಹ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 2025ರ ಆರಂಭದಲ್ಲಿ ಅವರ ಸಂಬಂಧದ ಬಗ್ಗೆ ಹೊರ ಪ್ರಪಂಚಕ್ಕೆ ತಿಳಿಯಿತು. ಈಗ ಈ ಜೋಡಿ ವಿವಾವಾಗಿದ್ದು, ಖುಷಿಯ ಕ್ಷಣಗಳನ್ನ ಕಳೆಯುತ್ತಿದ್ದಾರೆ. ಮತ್ತೆ ತಮ್ಮತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!