ನಾನು ಆರಾಮಾಗಿದ್ದೇನೆ, ವದಂತಿಗಳಿಗೆ ಕಿವಿಗೊಡಬೇಡಿ: ಲತಾ ಮಂಗೇಶ್ಕರ್

Published : Dec 14, 2018, 04:22 PM IST
ನಾನು ಆರಾಮಾಗಿದ್ದೇನೆ, ವದಂತಿಗಳಿಗೆ ಕಿವಿಗೊಡಬೇಡಿ: ಲತಾ ಮಂಗೇಶ್ಕರ್

ಸಾರಾಂಶ

ಅನಾರೋಗ್ಯ ವದಂತಿಗಳಿಗೆ ತೆರೆ ಎಳೆದ ಲತಾ ಮಂಗೇಶ್ಕರ್ | ನಾನು ಆರಾಮವಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. 

ಬೆಂಗಳೂರು (ಡಿ. 14): ಗಾನಕೋಗಿಲೆ ಲತಾ ಮಂಗೇಶ್ಕರ್  ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವದಂತಿ ಹರಿದಾಡುತ್ತಿದ್ದು ಇದನ್ನು ಸ್ವತಃ ಲತಾ ಮಂಗೇಶ್ಕರ್ ತಳ್ಳಿ ಹಾಕಿದ್ದಾರೆ. 

ಲತಾ ಮಂಗೇಶ್ಕರ್ ಅನಾರೋಗ್ಯಕ್ಕೀಡಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಲತಾ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಪಷ್ಟನೆ ನೀಡುತ್ತಾ, ನಮಸ್ಕಾರ, ನನ್ನ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವಲ್ಲ. ಅವನ್ನೆಲ್ಲಾ ನಂಬಬೇಡಿ. ನಾನು ನನ್ನ ಮನೆಯಲ್ಲಿ ಆರಾಮವಾಗಿದ್ದೇನೆ ಎಂದಿದ್ದಾರೆ. 

 

ಲತಾ ಮಂಗೇಶ್ಕರ್ ಬಗ್ಗೆ ವದಂತಿಗಳು ಹರಿದಾಡಿದ್ದು ಇದೇ ಮೊದಲ ಬಾರಿಯೇನಲ್ಲ. ಲತಾ ಹಾಡುವುದಕ್ಕೆ ವಿದಾಯ ಹೇಳಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ’ಆತಾ ವಿಸವ್ಯಾಚ ಕ್ಷಣ್.....’ ಎನ್ನುವ ಮರಾಠಿ ಹಾಡೊಂದನ್ನ ಹಾಡಿದ್ದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಹಾಡು ನಿಲ್ಲಿಸಿದ ಗಾನ ಕೋಗಿಲೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿತ್ತು. 
’ನನ್ನ ಕೊನೆ ಉಸಿರಿರುವ ತನಕ ಹಾಡುತ್ತಲೇ ಇರುತ್ತೇನೆ. ಸಂಗೀತವೇ ನನ್ನ ಉಸಿರು. ನಾವು ಮಂಗೇಶ್ಕರ್ ಫ್ಯಾಮಿಲಿಗೆ ಸಂಗೀತವೇ ಜೀವಾಳ. ಸಂಗೀತ ಇಲ್ಲದಿದ್ದರೆ ನಮ್ಮ ಜೀವವೇ ಇಲ್ಲ ಎಂದು ಈ ವದಂತಿಗೆ ತೆರೆ ಎಳೆದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸ್ಯಾಂಡಲ್‌ವುಡ್‌ನಲ್ಲಿರೋ ಸಮಸ್ಯೆಗಳನ್ನು ಬಹಿರಂಗಗೊಳಿಸಿದ ಹಿರಿಯ ನಟಿ ಜಯಮಾಲಾ
'ಸರ್ಕಾರಿ ನ್ಯಾಯಬೆಲೆ ಅಂಗಡಿ'ಯಲ್ಲಿ ರಾಗಿಣಿ.. ಜುಲೈ 31ರಂದು ಇಡೀ ಕರ್ನಾಟಕದಲ್ಲಿ 'ಪಾರ್ವತಿ' ಆಗಮನ!