
ಮುಂಬೈ(ನ.14): ದೇಶದಲ್ಲಿ ಸದ್ಯಕ್ಕೆ ಎಲ್ಲೆಡೆ ಚರ್ಚೆ ಆಗುತ್ತಿರುವುದು 500-1000 ಮುಖಬೆಲೆಯ ನೋಟು ಚಲಾವಣೆ ರದ್ದಾಗಿದ್ದು. ಈ ಕುರಿತು ಜನಸಾಮಾನ್ಯರಿಂದ ಹಿಡಿದು ಸೂಪರ್ ಸ್ಟಾರ್'ಗಳವರೆಗೆ ಮಾತನಾಡುತ್ತಿದ್ದಾರೆ. ಆದರೆ ಬಿಟೌನ್ ಚೆಲುವೆ ಕೃತಿ ಸೆನಾನ್'ಗೆ ಲವ್ ಲೆಟರ್ ಬರೆಯುವ ಆಸೆಯಾದಂತಿದೆ.
ಕಡಿಮೆ ಅವಧಿಯಲ್ಲೇ ಶಾರೂಖ್ ಅಭಿನಯದ ಚಿತ್ರದಲ್ಲಿ ನಟಿಸಿ ಹೆಚ್ಚು ಅಭಿಮಾನಿಗಳನ್ನು ಪಡೆದ ನಟಿ ಕೃತಿ ಸೆನಾನ್ ತಮ್ಮ ಟ್ವಿಟ್ಟರ್ ಅಕೌಂಟ್ ಮೂಲಕ ಒಂದು ಆಸೆಯನ್ನು ಹೊರಹಾಕಿದ್ದಾರೆ.ಹೌದು, 'ನಾನು ಲವ್ ಲೆಟರ್ ಬರೆಯುತ್ತಿದ್ದ ಕಾಲದಲ್ಲಿ ಜನಿಸಬೇಕಿತ್ತು. ಕೈ ಬರಹದಿಂದ ಬರೆದ ಪತ್ರಗಳನ್ನ ತೆರೆದು ಓದುವ ಖುಷಿ ಮೆಸೇಜ್‌ಗಳಲ್ಲಿ ಸಿಗೋಲ್ಲ' ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.