ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತೆ ನಟಿ ವಾಮಿಕಾಗೆ BMW ಯಾಕಿಲ್ಲ? ಫ್ಯಾನ್ಸ್ ಗರಂ

Published : Sep 11, 2026, 06:16 PM IST
Wamiqa Gabbi

ಸಾರಾಂಶ

‘ಡಿಸಿ’ ಸಿನಿಮಾ ಸಕ್ಸಸ್ ಬಳಿಕ ಲೋಕೇಶ್ ಕನಗರಾಜ್, ಅರುಣ್ ಮಾಥೇಶ್ವರನ್ ಹಾಗೂ ಅನಿರುದ್ಧ್ ರವಿಚಂದರ್ ಅವರಿಗೆ BMW ಕಾರುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಆದರೆ ವಾಮಿಕಾ ಗಬ್ಬಿಗೆ ಗಿಫ್ಟ್ ನೀಡದಿರುವುದಕ್ಕೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅರುಣ್ ಮಾಥೇಶ್ವರನ್ ನಿರ್ದೇಶನದ ಹಾಗೂ ಲೋಕೇಶ್ ಕನಗರಾಜ್, ವಾಮಿಕಾ ಗಬ್ಬಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಡಿಸಿ’ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಸಿನಿಮಾದ ಸಕ್ಸಸ್ ಬೆನ್ನಲ್ಲೇ ನಿರ್ಮಾಣ ಸಂಸ್ಥೆ ಸನ್ ಪಿಕ್ಚರ್ಸ್‌ನ ಮಾಲೀಕ ಕಲಾನಿಧಿ ಮಾರನ್ ಅವರು ಚಿತ್ರತಂಡದ ಮೂವರಿಗೆ ಹೊಚ್ಚ ಹೊಸ BMW ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಈ ವಿಚಾರ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಲೋಕೇಶ್ ಕನಗರಾಜ್, ಅರುಣ್ ಮಾಥೇಶ್ವರನ್ ಹಾಗೂ ಅನಿರುದ್ಧ್ ರವಿಚಂದರ್ ಅವರಿಗೆ BMW ಕಾರಿನ ಕೀಗಳನ್ನು ನೀಡಿರುವ ವಿಡಿಯೋವನ್ನು ಸನ್ ಪಿಕ್ಚರ್ಸ್ ಹಂಚಿಕೊಂಡಿತ್ತು. ಆದರೆ ಈ ಪೋಸ್ಟ್‌ನ ಕಾಮೆಂಟ್ ಸೆಕ್ಷನ್‌ನಲ್ಲಿ ವಾಮಿಕಾ ಗಬ್ಬಿಗೆ ಉಡುಗೊರೆ ನೀಡದಿರುವುದಕ್ಕೆ ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ವಾಮಿಕಾಗೆ Private Jet ಕೊಡಬೇಕು!’

ಸಿನಿಮಾದಲ್ಲಿ ವಾಮಿಕಾ ಗಬ್ಬಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಅಭಿನಯಕ್ಕೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಹೀಗಿರುವಾಗ ಸಕ್ಸಸ್ ಗಿಫ್ಟ್ ಆಗಿ ಮೂವರಿಗೆ ಮಾತ್ರ BMW ಕಾರು ನೀಡಿರುವುದೇಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ವಾಮಿಕಾಗೆ ಒಂದು Private Jet ಕೊಡಿ ಎಂದು ಒಬ್ಬ ನೆಟ್ಟಿಗ ಕಾಮೆಂಟ್ ಮಾಡಿದ್ದಾನೆ.

ಮತ್ತೊಬ್ಬರು, ಸಿನಿಮಾ ನೋಡಿಲ್ಲ. ಆದರೆ ಟ್ರೇಲರ್ ನೋಡಿದಾಗ ನಾಯಕಿಗೂ ಪ್ರಮುಖ ಪಾತ್ರವಿದೆ ಎಂದು ಅನಿಸಿತ್ತು. ಹಾಗಿದ್ದರೆ ಮಹಿಳಾ ನಟಿಗೆ ಏಕೆ ಯಾವುದೇ ಗೌರವ ಅಥವಾ ಉಡುಗೊರೆ ಇಲ್ಲ? ಯಾವಾಗಲೂ ಪುರುಷರಿಗೇ ಕಾರುಗಳು ಯಾಕೆ? ಎಂದು ಪ್ರಶ್ನಿಸಿದ್ದಾರೆ. ವಾಮಿಕಾ ಕೂಡ ಇದಕ್ಕೆ ಅರ್ಹರು ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಬ್ಬ ನೆಟ್ಟಿಗ, ಇದು ವಾಮಿಕಾ ಅವರ ಸಿನಿಮಾನೇ. ಅವರು ನಾಯಕನಿಗಿಂತಲೂ ಮೊದಲು ಈ ಗೌರವಕ್ಕೆ ಅರ್ಹರು ಎಂದು ಕಾಮೆಂಟ್ ಮಾಡಿದ್ದಾರೆ.

‘ವಾಮಿಕಾಗೂ ಗಿಫ್ಟ್ ಕೊಡಿ ಮಾರನ್ ಸರ್’

ಇನ್ನೊಂದು ಕಾಮೆಂಟ್‌ನಲ್ಲಿ, ಬದಲಾವಣೆಗೆ ನೀವೇ ಕಾರಣರಾಗಿ, ಮಾರನ್ ಸರ್. @iWamiqaGabbi ಅವರಿಗೂ ಉಡುಗೊರೆ ನೀಡಿ. ಅವರು ಲೋಕೇಶ್ ಅವರಷ್ಟೇ ಅಲ್ಲ, ಕೆಲವೊಮ್ಮೆ ಅವರಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ನಟಿಸಿದ್ದಾರೆ. ಚಂದ್ರ ಪಾತ್ರದ ಬಗ್ಗೆ ಜನರು ಮಾತನಾಡುವಂತೆ ಮಾಡಿದ್ದಾರೆ. ಹೀಗಾಗಿ ಅವರಿಗೂ ಏನಾದರೂ ವಿಶೇಷವಾಗಿ ನೀಡಬೇಕು. ಕಾಲಿವುಡ್‌ನಲ್ಲಿ ಮಹಿಳೆಯರ ಕೊಡುಗೆಯನ್ನು ಗುರುತಿಸುವ ಸಮಯ ಬಂದಿದೆ ಎಂದು ನೆಟ್ಟಿಗರು ಬರೆದಿದ್ದಾರೆ.

ಇನ್ನು ಕೆಲವರು, ಥಿಯೇಟರ್‌ನಲ್ಲಿ ಸಿನಿಮಾಗೆ ಸಿಕ್ಕ ಅರ್ಧದಷ್ಟು ಚಪ್ಪಾಳೆಗಳು ವಾಮಿಕಾಗಾಗಿಯೇ ಇದ್ದವು. ಆದರೆ ನೀವು ಅವರನ್ನು ಬಿಟ್ಟುಬಿಟ್ಟಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಮೂವರ ಗೆಲುವು ಮಾತ್ರವಲ್ಲ, ಇಡೀ ಚಿತ್ರತಂಡದ ಗೆಲುವು. ವಾಮಿಕಾಗೆ ಯಾಕೆ ಕಾರು ಕೊಡಲಿಲ್ಲ? ಎಂಬ ಪ್ರಶ್ನೆಯೂ ಕೇಳಿಬಂದಿದೆ.

‘ಡಿಸಿ’ ಸಿನಿಮಾದಲ್ಲಿ ವಾಮಿಕಾ ಪಾತ್ರವೇನು?

‘ಡಿಸಿ’ ಸಿನಿಮಾದಲ್ಲಿ ಲೋಕೇಶ್ ಕನಗರಾಜ್ ದೇವದಾಸ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬದುಕುಳಿಯಲು ಭಾರೀ ಬೆಲೆ ತೆರಬೇಕಾದ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿರುವ ವ್ಯಕ್ತಿಯ ಸುತ್ತ ಕಥೆ ಸಾಗುತ್ತದೆ. ವಾಮಿಕಾ ಗಬ್ಬಿ ಇಲ್ಲಿ ಚಂದ್ರಾ ಎಂಬ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ದೇವದಾಸ್ ಜೊತೆ ಆಕೆ ಆಪ್ತವಾದ ಸಂಬಂಧ ಹೊಂದಿದ್ದು, ಕಥೆಯ ಪ್ರಮುಖ ಭಾಗವಾಗಿದ್ದಾರೆ. ಅರುಣ್ ಮಾಥೇಶ್ವರನ್ ನಿರ್ದೇಶನದ ಈ ಸಿನಿಮಾ ಆಗಸ್ಟ್ 7ರಂದು ಥಿಯೇಟರ್‌ಗಳಿಗೆ ಬಿಡುಗಡೆಯಾಗಿದ್ದು, ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಧರ್ಮ ಪ್ರೊಡಕ್ಷನ್ಸ್ ಸಿನಿಮಾವನ್ನು ವಿತರಿಸಿದೆ.

ಲೋಕೇಶ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳು

‘ಡಿಸಿ’ ಹೊರತುಪಡಿಸಿ ಲೋಕೇಶ್ ಕನಗರಾಜ್ ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 2025ರಲ್ಲಿ ರಜನಿಕಾಂತ್ ಅಭಿನಯದ ‘ಕೂಲಿ’ ಸಿನಿಮಾವನ್ನು ನಿರ್ದೇಶಿಸಿದ್ದ ಲೋಕೇಶ್, ಇದೀಗ ಮೊದಲ ಬಾರಿಗೆ ತೆಲುಗು ಸಿನಿಮಾವೊಂದನ್ನು ನಿರ್ದೇಶಿಸಲು ಸಜ್ಜಾಗಿದ್ದಾರೆ. ಇನ್ನು ಅಲ್ಲು ಅರ್ಜುನ್ ಜೊತೆಗಿನ ಈ ಚಿತ್ರಕ್ಕೆ ಸದ್ಯಕ್ಕೆ ‘AA23’ ಎಂಬ ತಾತ್ಕಾಲಿಕ ಶೀರ್ಷಿಕೆ ಇದೆ. ಹೀಗಾಗಿ ಲೋಕೇಶ್ ಅವರ ಮುಂದಿನ ಪ್ರಾಜೆಕ್ಟ್‌ಗಳ ಮೇಲೂ ಸಿನಿಪ್ರೇಕ್ಷಕರ ಕಣ್ಣು ನೆಟ್ಟಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

90s Kids.. ನಿಮ್ಮ ಬಾಲ್ಯದ ಈ ಕಾರ್ಟೂನ್ ನೆನಪಿದೆಯಾ? ಜಿಪುಣ ಅಂಕಲ್ ಸ್ಕ್ರೂಜ್ ಕಥೆಯಿದು!
ಈ ನಟ ಡ್ಯಾನ್ಸ್ ಮಾಡ್ತಿದ್ರೆ ಕಣ್ಣು ಮಿಟುಕಿಸೋಕೆ ಆಗಲ್ಲ.. ಮೈಕೇಲ್ ಜಾಕ್ಸನ್‌ಗಿಂತ ಬೆಸ್ಟ್: ನಟಿ ರಂಭಾ