
ಒಂದು ಕಾಲದಲ್ಲಿ ತಮ್ಮ ಸೌಂದರ್ಯ, ಅಭಿನಯ ಹಾಗೂ ಡ್ಯಾನ್ಸ್ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿ ರಂಭಾ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ಸ್ಟಾರ್ ಹೀರೋಗಳ ಜೊತೆ ನಾಯಕಿಯಾಗಿ ಮಿಂಚಿದ್ದ ಅವರು, ಹೀರೋಯಿನ್ ಪಾತ್ರಗಳ ಜೊತೆಗೆ ಸ್ಪೆಷಲ್ ಸಾಂಗ್‌ಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದರು. ಇದೀಗ ಸಿನಿಮಾಗಳಿಂದ ಕೊಂಚ ದೂರ ಉಳಿದಿರುವ ರಂಭಾ, ತಮ್ಮ ಹಳೆಯ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆಯೊಂದು ಮತ್ತೆ ವೈರಲ್ ಆಗುತ್ತಿದೆ.
ರಂಭಾ ತಮ್ಮ ಸಿನಿ ಜರ್ನಿ, ವೈಯಕ್ತಿಕ ಜೀವನ ಹಾಗೂ ವೃತ್ತಿಜೀವನದ ಹಲವು ಆಸಕ್ತಿಕರ ಸಂಗತಿಗಳನ್ನು ಆ ಸಂದರ್ಶನದಲ್ಲಿ ಹಂಚಿಕೊಂಡಿದ್ದರು. ಇದೇ ವೇಳೆ ಟಾಲಿವುಡ್‌ನ ಯಂಗ್ ಟೈಗರ್ ಜೂ.ಎನ್‌ಟಿಆರ್ ಬಗ್ಗೆ ಅವರು ನೀಡಿದ್ದ ಹೇಳಿಕೆ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಎನ್‌ಟಿಆರ್ ಡ್ಯಾನ್ಸ್‌ಗೆ ಫಿದಾ ಆದ ರಂಭಾ
ಜೂ.ಎನ್‌ಟಿಆರ್ ಅವರ ಡ್ಯಾನ್ಸ್‌ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಅಭಿನಯದ ಜೊತೆಗೆ ಅದ್ಭುತ ಡ್ಯಾನ್ಸರ್ ಆಗಿಯೂ ಗುರುತಿಸಿಕೊಂಡಿರುವ ತಾರಕ್, ತಮ್ಮ ಎನರ್ಜಿಟಿಕ್ ಪರ್ಫಾರ್ಮೆನ್ಸ್‌ನಿಂದ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಟಾಲಿವುಡ್‌ನ ಬೆಸ್ಟ್ ಡ್ಯಾನ್ಸರ್ ಯಾರು ಎಂದು ಕೇಳಿದರೆ ಅನೇಕರು ಜೂ.ಎನ್‌ಟಿಆರ್ ಹೆಸರನ್ನೇ ಹೇಳುತ್ತಾರೆ.
ಇದೀಗ ನಟಿ ರಂಭಾ ಕೂಡ ತಾರಕ್ ಅವರ ಡ್ಯಾನ್ಸ್ ಹಾಗೂ ಡೆಡಿಕೇಶನ್ ಬಗ್ಗೆ ಮನಸಾರೆ ಹೊಗಳಿದ್ದಾರೆ. ಜೂ.ಎನ್‌ಟಿಆರ್ ಅವರ ನಟನೆಯೆಂದರೆ ತಮಗೆ ತುಂಬಾ ಇಷ್ಟ ಎಂದು ಹೇಳಿರುವ ರಂಭಾ, ಅವರ ಡ್ಯಾನ್ಸ್ ನೋಡಲು ತಾನು ಕೂಡ ಇಷ್ಟಪಡುತ್ತೇನೆ ಎಂದು ತಿಳಿಸಿದ್ದಾರೆ.
‘ನಾಚೋರೆ ನಾಚೋರೆ’ ಎಂದರೆ ರಂಭಾಗೆ ಅಚ್ಚುಮೆಚ್ಚು
ತಾವು ನಟಿಸಿರುವ ಸ್ಪೆಷಲ್ ಸಾಂಗ್‌ಗಳ ಪೈಕಿ ‘ನಾಚೋರೆ ನಾಚೋರೆ’ ಹಾಡು ತಮಗೆ ಬಹಳ ಇಷ್ಟ ಎಂದು ರಂಭಾ ಹೇಳಿದ್ದಾರೆ. ಈ ಹಾಡಿನಲ್ಲಿನ ಎನ್‌ಟಿಆರ್ ಅವರ ಡ್ಯಾನ್ಸ್ ಹಾಗೂ ಎನರ್ಜಿ ಬಗ್ಗೆ ಅವರು ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎನ್‌ಟಿಆರ್ ಡ್ಯಾನ್ಸ್ ಮಾಡುತ್ತಿದ್ದರೆ ಕಣ್ಣು ಮಿಟುಕಿಸದೇ ನೋಡುತ್ತಿರುತ್ತೇವೆ. ಅವರ ಡೆಡಿಕೇಶನ್ ನೋಡಿದರೆ ಹುಚ್ಚೆದ್ದು ಹೋಗುವಂತಾಗುತ್ತದೆ ಎಂಬರ್ಥದಲ್ಲಿ ರಂಭಾ ತಾರಕ್ ಅವರನ್ನು ಹೊಗಳಿದ್ದಾರೆ.
ಅಷ್ಟೇ ಅಲ್ಲ, ತಮ್ಮ ದೃಷ್ಟಿಯಲ್ಲಿ ಮೈಕೇಲ್ ಜಾಕ್ಸನ್‌ಗಿಂತಲೂ ಜೂ.ಎನ್‌ಟಿಆರ್ ಉತ್ತಮ ಡ್ಯಾನ್ಸರ್ ಎಂದು ರಂಭಾ ಹೇಳಿರುವುದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಎನ್‌ಟಿಆರ್ ಅವರ ಡ್ಯಾನ್ಸ್ ಮೇಲಿನ ಹಿಡಿತ, ಎನರ್ಜಿ ಮತ್ತು ಡೆಡಿಕೇಶನ್‌ಗೆ ರಂಭಾ ನೀಡಿರುವ ಈ ಕಾಂಪ್ಲಿಮೆಂಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ.
ಇದೇ ಸಂದರ್ಶನದಲ್ಲಿ ರಂಭಾ ತಮ್ಮ ಇನ್ನೊಂದು ಆಸೆಯನ್ನೂ ಬಹಿರಂಗಪಡಿಸಿದ್ದರು. ಟಾಲಿವುಡ್‌ನ ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ಪವನ್ ಕಲ್ಯಾಣ್ ಅವರ ಜೊತೆ ಸಿನಿಮಾದಲ್ಲಿ ನಟಿಸಬೇಕು ಎಂಬ ತಮ್ಮ ಆಸೆಯನ್ನು ಅವರು ವ್ಯಕ್ತಪಡಿಸಿದ್ದರು. ಇನ್ನು ಹಲವು ವರ್ಷಗಳ ಹಿಂದೆ ರಂಭಾ ನೀಡಿದ್ದ ಈ ಹೇಳಿಕೆ ಇದೀಗ ಮತ್ತೆ ಚರ್ಚೆಗೆ ಬಂದಿದ್ದು, ಜೂ.ಎನ್‌ಟಿಆರ್ ಅಭಿಮಾನಿಗಳು ರಂಭಾ ಅವರ ಮಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.