
ಜೈಲರ್ ಹಿಟ್ ಆದ್ಮೇಲೆ ಇದರ ಸೀಕ್ವೆಲ್ ಮಾಡೋಣ ಅಂತ ಹೇಳಿದ್ರು. ಆದ್ರೆ ನಾನು ಯಾವತ್ತೂ ಪಾರ್ಟ್ 2 ಸಿನಿಮಾಗಳಿಗೆ ಒಪ್ಪಿಕೊಳ್ಳಲ್ಲ. ಸೀಕ್ವೆಲ್ ಅಂದ್ರೆನೇ ಅಲ್ಲಿ ಕ್ರಿಯೇಟಿವಿಟಿ ಕಮ್ಮಿ ಆಗಿರುತ್ತೆ, ಹಳೇ ಕಥೆಗೆ ಸ್ವಲ್ಪ ಉಪ್ಪು ಖಾರ ಸೇರಿಸಿ ಮಾಡ್ತಾರೆ ಅನ್ನೋದು ನನ್ನ ಅಭಿಪ್ರಾಯ. ಆರ್.ಎಂ.ವೀರಪ್ಪನ್ ಅವರು 'ಬಾಷಾ 2'ಗೆ ಒಳ್ಳೆ ಕಥೆ ತಂದಿದ್ರು, ಆದ್ರೆ ನಾನು ಒಪ್ಪಲಿಲ್ಲ. ಆಮೇಲೆ ವಿಜಯ್ ಸೇತುಪತಿ ಸೇಡು ತೀರಿಸಿಕೊಳ್ಳೋ ತರಹ 'ಪೇಟ 2' ಕಥೆ ಮಾಡಿದ್ರು, ಅದಕ್ಕೂ ನಾನು ಇಂಟರೆಸ್ಟ್ ತೋರಿಸಲಿಲ್ಲ.
ಜೈಲರ್ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆದಾಗ ನಾನು ನೋಡಿದೆ. ಅದರಲ್ಲಿ ವರ್ಮಾ ತನ್ನ ಹಿಂದೆ ದೊಡ್ಡ ಇಂಟರ್ನ್ಯಾಷನಲ್ ನೆಟ್‌ವರ್ಕ್ ಇದೆ ಅಂತ ಹೇಳ್ತಾನೆ. ಹಾಗೇ ಜೈಲರ್ ಬಳಿ 1000 ಕೋಟಿಗೂ ಹೆಚ್ಚು ಹಣ ಇರೋ 3 ಕಂಟೇನರ್‌ಗಳಿರುತ್ತೆ. ಇದನ್ನ ವರ್ಮಾ ಗ್ಯಾಂಗ್ ಸುಮ್ಮನೆ ಬಿಡುತ್ತಾ? ಈ ಲೀಡ್ ಮೊದಲ ಭಾಗದಲ್ಲೇ ಇತ್ತು. ಜೊತೆಗೆ ನನ್ನ ವಯಸ್ಸಿಗೆ ತಕ್ಕಂತ ಪಾತ್ರ ಇದಾಗಿದ್ದರಿಂದ ಜೈಲರ್ 2 ಮಾಡಲು ನಿರ್ಧರಿಸಿದೆ.
ನೋ ಎಂದಿದ್ದ ನೆಲ್ಸನ್
ಜೈಲರ್ ರಿಲೀಸ್ ಆದ್ಮೇಲೆ ನೆಲ್ಸನ್‌ಗೆ ನ್ಯಾಷನಲ್ ಲೆವೆಲ್‌ನಲ್ಲಿ ಡಿಮ್ಯಾಂಡ್ ಬಂತು. ಹಿಂದಿ, ತೆಲುಗು, ತಮಿಳಿನ ದೊಡ್ಡ ನಿರ್ಮಾಣ ಸಂಸ್ಥೆಗಳು ಕ್ಯೂನಲ್ಲಿ ನಿಂತ್ವು. ನಾನು ಜೈಲರ್ 2 ಐಡಿಯಾ ಹೇಳಿದಾಗ, ನೆಲ್ಸನ್ ಅದೆಲ್ಲಾ ಬೇಡ ಸರ್ ಅಂದ್ರು. ನಾನೂ ಸರಿ ಅಂತ ಬಿಟ್ಟೆ. ಆಮೇಲೆ 'ವೇಟ್ಟೈಯನ್' ಶೂಟಿಂಗ್ ಟೈಮ್‌ನಲ್ಲಿ ನೆಲ್ಸನ್ ಕಾಲ್ ಮಾಡಿದ್ರು. ಸರ್ ನೀವು ಹೇಳಿದ ಹಾಗೆ ಜೈಲರ್ 2 ಮಾಡೋಕೆ ಒಳ್ಳೆ ಚಾನ್ಸ್ ಇದೆ, ಸ್ವಲ್ಪ ಟೈಮ್ ಕೊಡಿ ಅಂತ ಕೇಳಿದ್ರು. ನಾನು ಓಕೆ ಅಂದೆ.
ಸಿನಿಮಾದಲ್ಲಿ ಎಸ್.ಜೆ.ಸೂರ್ಯ, ರಮ್ಯಾ ಕೃಷ್ಣನ್, ಮಿರ್ಣಾ, ಸೂರಜ್ ಎಲ್ಲರೂ ಸೂಪರ್ ಆಗಿ ಆಕ್ಟ್ ಮಾಡಿದ್ದಾರೆ. ಆದ್ರೆ ಚಿತ್ರದಲ್ಲಿ ಮಿಸ್ ಆಗ್ತಿರೋದು ತಮನ್ನಾ ಮಾತ್ರ. ಒಂದು ಹಾಡಿನಲ್ಲಿ ತಮನ್ನಾ ಇರಲಿ ಅಂತ ನೆಲ್ಸನ್‌ಗೆ ಹೇಳಿದೆ. ಅದಕ್ಕೆ ಅವರು, ಸರ್ ನಿಮಗೆ ಇಷ್ಟ ಅಂತ ಇಟ್ಟುಕೊಳ್ಳೋಕೆ ಆಗಲ್ಲ ಅಂದ್ರು. ನನಗೆ ಇಷ್ಟ ಅಂತ ಅಲ್ಲ, ಜನರಿಗೆ ಇಷ್ಟ ಅದಕ್ಕೆ ಕೇಳಿದೆ ಅಂತ ರಜನಿ ಹೇಳಿದ್ರು. ಈ ಕಾರ್ಯಕ್ರಮದಲ್ಲಿ ನೆಲ್ಸನ್ ರಜನಿಗೆ ಕೆಲವು ಪ್ರಶ್ನೆಗಳನ್ನ ಕೇಳಿ ವೇದಿಕೆ ಮೇಲೆಯೇ ಕಾಲೆಳೆದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.