ದರ್ಶನ್‌ ಬರೋವರೆಗೂ ಸಿನಿಮಾ ನಿರ್ದೇಶನ ಮಾಡಲ್ಲ: ತರುಣ್‌ ಸುಧೀರ್‌ ಪ್ರತಿಜ್ಞೆ- ಅವರು ಹೇಳಿದ್ದೇನು

Published : Oct 09, 2026, 07:49 PM IST
Darshan and Tharun Sudhir

ಸಾರಾಂಶ

ನಟ ದರ್ಶನ್ ಅವರಿಗೆ ಜಾಮೀನು ಸಿಗದ ಕಾರಣ, ಅವರು ಹೊರಬರುವವರೆಗೂ 'ಸಿಂಧೂರ ಲಕ್ಷ್ಮಣ' ಚಿತ್ರವನ್ನು ನಿರ್ದೇಶಿಸುವುದಿಲ್ಲ ಎಂದು ತರುಣ್ ಸುಧೀರ್ ತಿಳಿಸಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಅದ್ಭುತವಾಗಿ ಮೂಡಿಬಂದಿದ್ದು, ದರ್ಶನ್ ಇಲ್ಲದೆ ಬೇರೆ ಯಾರಾದರೂ ನಿರ್ದೇಶನ ಮಾಡಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹಲವಾರು ಹಿಟ್‌ ಚಿತ್ರಗಳನ್ನು ನೀಡಿರುವ ನಿರ್ದೇಶಕ ತರುಣ್‌ ಸುಧೀರ್‌ ಅವರು ಈ ಪರಿಯಲ್ಲಿ ಯಶಸ್ಸು ಗಳಿಸಲು ಕಾರಣವಾಗಿದ್ದು ದರ್ಶ‌ನ್‌ ಅವರು. ಇದೇ ಕಾರಣಕ್ಕೆ ತರುಣ್‌ ಸುಧೀರ್‌ ಮತ್ತು ಪತ್ನಿ ಸೋನಲ್‌ ಮಂಥೆರೋ ಅವರು ಸದಾ ದರ್ಶನ್‌ ಅವರನ್ನು ಆರಾಧಿಸುತ್ತಾರೆ. ಅಷ್ಟಕ್ಕೂ ತರುಣ್‌ ಸುಧೀರ್‌ 2021ರಲ್ಲಿ ಬಿಡುಗಡೆಯಾದ ರಾಬರ್ಟ್ (Roberrt) ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದು, ದರ್ಶನ್ ನಾಯಕರಾಗಿ ಅಭಿನಯಿಸಿದ್ದರು. ಕಾಟೇರ (Kaatera) ಈ ಸಿನಿಮಾ ದೊಡ್ಡ ಮಟ್ಟದ ಕಮರ್ಷಿಯಲ್ ಯಶಸ್ಸು ಕಂಡಿತು. 2023ರ ಡಿಸೆಂಬರ್ 29ರಂದು ಬಿಡುಗಡೆಯಾದ ಈ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದರು.

ಸಿಂಧೂರ ಲಕ್ಷ್ಮಣ ಮೂವಿ

ಇದೀಗ ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣ (Sindhoora Lakshmana Movie) ಅವರ ಜೀವನ ಆಧರಿತ ದರ್ಶನ್ ಅವರ 59ನೇ ಚಿತ್ರಕ್ಕೆ ತರುಣ್ ಸುಧೀರ್ ಆಕ್ಷನ್-ಕಟ್ ಹೇಳಲಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ದರ್ಶನ್‌ ಅವರು ಸದ್ಯ ಹೊರಕ್ಕೆ ಬರುವ ಯಾವುದೇ ಸೂಚನೆಯನ್ನು ಕೋರ್ಟ್ ನೀಡುತ್ತಿಲ್ಲ. ಅವರು ಜಾಮೀನು ಅರ್ಜಿಗಳು ವಜಾ ಆಗುತ್ತಿವೆ. ಇದರಿಂದ ನೊಂದಿರುವ ತರುಣ್‌ ಸುಧೀರ್‌ ಅವರು, ದರ್ಶನ್‌ ಅವರು ಹೊರಕ್ಕೆ ಬರುವವರೆಗೂ ನಾನು ಈ ಚಿತ್ರಕ್ಕೆ ನಿರ್ದೇಶನ ಮಾಡುವುದಿಲ್ಲ ಎಂದಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಈ ಸಿನಿಮಾದ ಸ್ಕ್ರಿಪ್ಟ್‌ ಅದ್ಭುತವಾಗಿ ಮೂಡಿ ಬಂದಿದೆ. ಈ ಸಿನಿಮಾ ಕುರಿತು ದರ್ಶನ್‌ ಸರ್‌ ಜೊತೆ ಸಾಕಷ್ಟು ಚರ್ಚೆ ಮಾಡಿದ ನಂತರ ಸ್ಕ್ರಿಪ್ಟ್‌ ಬರೆಯಲಾಗಿತ್ತು. ಆದರೆ ಅವರಿಲ್ಲದೇ ನಾನು ನಿರ್ದೇಶನ ಮಾಡುವುದಿಲ್ಲ. ಬೇರೆ ಯಾರಾದರೂ ನಿರ್ದೇಶನ ಮಾಡಿದರೆ ನನಗೆ ಅಭ್ಯಂತರವಿಲ್ಲ. ಇದರ ಸ್ಕ್ರಿಪ್ಟ್‌ ಓಪನ್‌ ಆಗಿದೆ. ಯಾರು ಬೇಕಾದರೂ ಇದನ್ನು ನಿರ್ದೇಶನ ಮಾಡಬಹುದು. ಆದರೆ ದರ್ಶನ್‌ ಅವರ ಹೊರಕ್ಕೆ ಬಂದ ಹೊರತೂ ನಾನಂತೂ ನಿರ್ದೇಶನ ಮಾಡುವುದಿಲ್ಲ ಎಂದಿದ್ದಾರೆ.

ಯಾರು ಈ ಸಿಂಧೂರ ಲಕ್ಷ್ಮಣ?

ಇನ್ನು ಸಿಂಧೂರ ಲಕ್ಷ್ಮಣ ಅವರ ಕುರಿತು ಹೇಳುವುದಾದರೆ, ಇವರು ಉತ್ತರ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಭಾಗದ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರು. ಬ್ರಿಟಿಷರು ಹಾಗೂ ಜಮೀನ್ದಾರರ ವಿರುದ್ಧ ಹೋರಾಡಿ, ಸರ್ಕಾರಿ ಖಜಾನೆ ಲೂಟಿ ಮಾಡಿ ಬಡವರಿಗೆ ಹಂಚುತ್ತಿದ್ದರಿಂದ ಇವರನ್ನು 'ಕರ್ನಾಟಕದ ರಾಬಿನ್ ಹುಡ್' ಎಂದು ಕರೆಯಲಾಗುತ್ತದೆ. ದರ್ಶನ್ ಅವರ ಹುಟ್ಟುಹಬ್ಬದ (ಫೆಬ್ರವರಿ 16) ಸಂದರ್ಭದಲ್ಲಿ ಈ ಚಿತ್ರದ ಅಧಿಕೃತ ಘೋಷಣೆಯಾಗಿದೆ. ಶೈಲಜಾ ನಾಗ್ ಮತ್ತು ಬಿ. ಸುರೇಶ್ ಅವರ 'ಮೀಡಿಯಾ ಹೌಸ್ ಸ್ಟುಡಿಯೋ' (Media House Studio) ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನೀತಾ ಅಂಬಾನಿ ಧರಿಸಿದ ಈ ನೆಕ್ಲೆಸ್ ಹಿಂದಿನ ರಹಸ್ಯವಿದು: ಸೋನಂ ಕಪೂರ್ ಹೆಸರು ಬಂದಿದ್ದೇಕೆ?
OTT Crime Thrillers: ಒಟಿಟಿಯಲ್ಲಿ ಮಿಸ್ ಮಾಡ್ದೆ ನೋಡಬೇಕಾದ ಟಾಪ್ 5 ಕ್ರೈಮ್ ಥ್ರಿಲ್ಲರ್ ಸಿನಿಮಾಗಳಿವು!