
ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಈ ಶುಕ್ರವಾರ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾ ಬಿಡುಗಡೆಗೆ ಲಹರಿ ಆಡಿಯೋ ಮಾಲೀಕ ವೇಲು ಸ್ಟೇ ತಂದಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದ ಹೇಯ್ ಹೂ ಆರ್ ಯೂ ಹಾಡು ಹಂಸಲೇಖ ಸಂಗೀತದ ಶಾಂತಿ ಕ್ರಾಂತಿ ಸಿನಿಮಾದ ಮಧ್ಯಾರಾತ್ರೀಲಿ ಹಾಡಿನ ಕಾಪಿಯಾಗಿದ್ದು. ಈ ಒರಿಜಿನಲ್ ಹಾಡಿನ ಕಾಪಿರೈಟ್ಸ್ ತಮ್ಮದೆಂದು ಆರೋಪಿಸಿ ಸಿನಿಮಾಗೆ ಬೆಂಗಳೂರು ಸಿವಿಲ್ ಕೋರ್ಟ್ನಿಂದ ಸ್ಟೇ ತಂದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಿರಿಕ್ ಪಾರ್ಟಿ ಚಿತ್ರತಂಡ ಮತ್ತು ಸಂಗೀತ ನಿರ್ದೇಶಕ ಅಜನೀಶ್ ಹೇಯ್ ಹೂ ಆರ್ ಯೂ ಹಾಡು ಶಾಂತಿ ಕ್ರಾಂತಿ ಹಾಡಿನ ಸ್ಫೂರ್ತಿ ಯಷ್ಟೆ ಕಾಪಿಯಲ್ಲ ಎನ್ನುತ್ತಿದ್ದಾರೆ. ಆದರೆ ಈಗ ಚಿತ್ರಕ್ಕೆ ಹೊಸ ಕಿರಿಕ್ ಶುರುವಾಗಿದೆ. ಚಿತ್ರತಂಡ ಸಿನಿಮಾ ರಿಲೀಸ್ ಮಾಡಲು ಈಗ ಹಾಡನ್ನೇ ಸಿನಿಮಾದಿಂದ ತೆಗೆಯಲು ಸೆನ್ಸಾರ್ ಮಂಡಳಿತ್ತ ಧಾವಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.