
ಒಳ್ಳೆ ಹುಡುಗನ ಮಾತು ಹಾಗೂ ವರ್ತನೆಯನ್ನು ಆರಂಭದಿಂದಲೂ ಬಿಗ್ ಬಾಸ್ ಶೋನಲ್ಲಿರುವ ಸ್ಪರ್ಧಿಗಳು ಇಷ್ಟಪಟ್ಟಿರಲಿಲ್ಲ. ಅವರ ಮಾತುಗಳು ಕೇಳುವುದೇ ಹಿಂಸೆ. ಯಾವತ್ತೂ ತಾನೇ ಮೇಲಿರಬೇಕು ಎಂದು ಬಯಸುತ್ತಾರೆ ಎಂಬುವುದಾಗಿ 'ಒಳ್ಳೆ ಹುಡುಗ' ಪ್ರಥಮ್ ಬಗ್ಗೆ ಮನೆಯವರು ಹೇಳಿಕೊಂಡಿದ್ದರು. ಹೀಗೆ ಮಾತನಾಡಿದವರಲ್ಲಿ ಕಿರಿಕ್ ಕೀರ್ತಿ ಕೂಡಾ ಒಬ್ಬರು. ಆದರೆ ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದ ಪ್ರಥಮ್ ತನ್ನ ಹಾದಿಯಲ್ಲೇ ನಡೆದಿದ್ದರು. ಇದು ಎಲ್ಲರ ಬಿಗ್ ಮನೆ ಮಂದಿಯ ಮುನಿಸಿಗೆ ಕಾರಣವಾಗಿತ್ತು. ಆದರೀಗ ಕಿರಿಕ್ ಕೀರ್ತಿ ಪ್ರಥಮ್'ನನ್ನು ಬಿಗ್ ಮನೆಯಲ್ಲಿ ಕಿಸ್ ಮಾಡ್ಕೊತಿದಾರೆ.
ಇಂತಹ ಪರಿಸ್ಥಿತಿ ಇದ್ದಾಗಲೇ ಮಾಳವಿಕಾ ಅವಿನಾಶ್ ಹಾಗೂ ಪ್ರಥಮ್'ನನ್ನು ಬಿಗ್ ಬಾಸ್ ಹೊರ ಕರೆದಿದ್ದರು. ಒಂದೆಡೆ ಇದು ಮನೆಯವರಿಗೆ ಇದು ಶಾಕ್ ನೀಡಿತ್ತಾದರೂ ಮತ್ತೊಂದೆಡೆ ನಾವು ಸೇಫ್ ಎಂಬ ಖುಷಿ ಅವರಲ್ಲಿ ಈಗಲೂ ಇದೆ. ಆದರೆ ಇದು ಬಿಗ್ ಬಾಸ್'ನಲ್ಲಿ ಬಹು ದೊಡ್ಡ ಟ್ವಿಸ್ಟ್ ಆಗಿತ್ತು. ಅಸಲಿಗೆ ಮನೆಯಿಂದ ಹೊರ ಬಂದ ಮಾಳವಿಕಾ ಹಾಗೂ ಪ್ರಥಮ್ ಇಬ್ಬರೂ ಸೀಕ್ರೆಟ್ ರೂಂನಲ್ಲಿದ್ದಾರೆ. ಆದರೆ ಈ ವಿಚಾರ ತಿಳಿಯದ ಮನೆಯವರು ಇಬ್ಬರೂ ಹೊರ ಹೋದಾಗಿನಿಂದ ಅವರ ಬಗ್ಗೆ ಪದೇ ಪದೇ ಚರ್ಚೆ ಮಾಡಿ ಅವರ ತಪ್ಪುಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ ಅಲ್ಲದೆ ಹೊರ ಹೋಗಿತ್ತು ಒಳ್ಳೆಯದಾಯಿತು ಎನ್ನುತ್ತಿದ್ದಾರೆ. ಸೀಕ್ರೆಟ್ ರೂಂನಲ್ಲಿರುವವರು ಒಳಗಿದ್ದಾಗ ಸುಮ್ಮನಿದ್ದವರು ಹೊರ ಹೋದಾಗ ಈ ರೀತಿ ವರ್ತಿಸಿದ್ದು ಮಾಳವಿಕಾ ಹಾಗೂ ಪ್ರಥಮ್ ಸೇರಿದಂತೆ ವೀಕ್ಷಕರಿಗೂ ಅಚ್ಚರಿ ಮೂಡಿಸಿದೆ.
ಈ ನಡುವೆ ಕಳೆದ ಸೀಜನ್'ನ ಸ್ಪರ್ಧಿಯಾಗಿದ್ದ ಸುನಾಮಿ ಕಿಟ್ಟಿ ಮನೆಗೆ ಎಂಟ್ರಿ ನೀಡಿದ್ದು, ಇದರ ಬೆನ್ನಲ್ಲೇ ಬಿಗ್ ಬಾಸ್ ಮನೆಯವರಿಗೆ ಟಾಸ್ಕ್ ಒಂದನ್ನು ನೀಡಿದ್ದಾರೆ. ದುರಾದೃಷ್ಟವಶಾತ್ ಇದರಲ್ಲಿ ಕಿಟ್ಟಿ ಇದ್ದ ತಂಡ ಗೆಲುವು ಸಾಧಿಸಿದ್ದು, ಕಿರಿಕ್ ಕೀರ್ತಿ ಇದ್ದ ತಂಡ ಸೋಲನುಭವಿಸಿದೆ. ಅಚ್ಚರಿ ಮೂಡಿಸುವ ವಿಚಾರವೆಂದರೆ ಟಾಸ್ಕ್ ಆಗುವವರೆಗೂ ಪ್ರಥಮ್'ನನ್ನು ನೆನೆಸಿಕೊಳ್ಳದ ಕೀರ್ತಿ, ಸೋಲಿನ ಬಳಿಕ ಒಳ್ಳೆ ಹುಡುಗನನ್ನು ನೆನೆದು ಭಾವುಕರಾಗಿದ್ದಾರೆ.
ನಿನ್ನೆ ನಡೆದ ಎಪಿಸೋಡ್ ಗಮನಿಸಿದರೆ ಟಾಸ್ಕ್'ನಲ್ಲಿ ತನಗಾದ ಸೋಲು ಕಿರಿಕ್ ಕೀರ್ತಿಗೆ ಪ್ರಥಮ್'ನನ್ನು ನೆನಪಿಸಿಕೊಳ್ಳುವಂತೆ ಮಾಡಿತು ಎಂಬ ಅನುಮಾನ ಮೂಡಿಸುತ್ತದೆ. ಯಾಕೆಂದರೆ ಪ್ರಥಮ್ ವರ್ತನೆ ಅದೆಷ್ಟು ಹಿಂಸೆ ನೀಡಿದರೂ ಆತ ತನ್ನನ್ನು ತಾನು ಟಾಸ್ಕ್'ನಲ್ಲಿ ತೊಡಗಿಸಿಕೊಳ್ಳುತ್ತಿದ್ದ ರೀತಿ ನಿಜಕ್ಕೂ ಪ್ರಶಂಸನೀಯ. ಮನೆಯಲ್ಲಿ ಕಳೆದ ಬಾರಿ ನಡೆದ ಟಾಸ್ಕ್'ನಲ್ಲೂ ಪ್ರಥಮ್ ಅತ್ಯುತ್ತಮ ಎಂಬ ಹೆಗ್ಗಳಿಕೆ ಪಡೆದಿದ್ದ. ಬಹುಶಃ ಇದೇ ಕಿರಿಕ್ ಕೀರ್ತಿ ಪ್ರಥಮ್'ನ ನೆನಪು ತರಿಸಿತೇನೋ.
ಮನೆಯವರೆಲ್ಲಾ ಖುಷಿಯಾಗಿ ಮನೆಯೊಳಗಿದ್ದಾಗ ಒಬ್ಬಂಟಿಯಾಗಿ ಹೊರ ಕುಳಿತಿದ್ದ ಕೀರ್ತಿ
'ಮಾಳವಿಕ ಮೇಡಂ ಹಾಗೂ ಪ್ರಥಮ್ ನೀವು ಹೋದ ಬಳಿಕ ಮನೆಡ ತುಂಬಾ ಖಾಲಿ ಎನಿಸುತ್ತಿದೆ. ಪ್ರಥಮ್ ನಿಮ್ಮ ವಾಯ್ಸ್ ಇಲ್ಲ. ನಿಜಕ್ಕೂ ನೀವೇ ಹೇಳಿದ ಹಾಗೆ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ತಿದ್ದೇವೆ. ಸಾಕಷ್ಟು ಬಾರಿ ನಿಮ್ಮ ಬಗ್ಗೆಯೇ ಮಾತನಾಡುತ್ತಿರುತ್ತೇವೆ. ಮಾಳವಿಕಾ ಮೇಡಂ ಈ ಜರ್ನಿಯಲ್ಲಿ, ಮನೆಯಲ್ಲಿ ಇನ್ನೂ ಸಾಕಷ್ಟು ದಿನ ನಿಮ್ಮನ್ನು ಎಕ್ಸ್'ಪೆಕ್ಸ್ ಮಾಡಿದ್ವಿ, ನಾನಂತೂ ಮಾಡಿದ್ದೆ. ಅದು ನಿಮಗೂ ತಿಳಿದಿದೆ. ನಿಮ್ಮನ್ನೂ ತುಂಬಾ ಮಿಸ್ ಮಾಡ್ಕೊತಿದೀವಿ. ಖುಷಿಯಾಗಿರಿ. ಒಳ್ಳೆಯದಾಗಲಿ' ಎಂದಿದ್ದಾರೆ.
ಅದೇನೇ ಇರಲಿ ಮನೆಯಲ್ಲಿದ್ದಾಗ ಪ್ರಥಮ್ ಹಾಗೂ ಮಾಳವಿಕಾರ ಕುರಿತು ಅಸಮಾಧಾನಗೊಂಡಿದ್ದ ಕೀರ್ತಿ ಹೊರ ಹೋದ ಎರಡು ದಿನಗಳ ಬಳಿಕ ಅವರ ಅವರನ್ನಿ ನೆನಪಿಸಿಕೊಂಡಿದ್ದಾರೆ. ಮನದ ಮೂಲೆಯಲ್ಲಿ ಅವರ ನೆನಪು ಕಾಡಲಾರಂಭಿಸಿದೆ. ಇಬ್ಬರನ್ನೂ ಇಷ್ಟೊಂದು ಮಿಸ್ ಮಾಡ್ಕೊಳ್ತಿರುವ ಕೀರ್ತಿ, ಆದರೆ ಸೀಕ್ರೆಟ್ ರೂಂನಿಂದ ಇಬ್ಬರೂ ಮನೆಗೆ ಮತ್ತೆ ಮರಳಿದಾಗ ಹೇಗೆ ವರ್ತಿಸುತ್ತಾರೆ ಎಂಬುವುದನ್ನು ಕಾದುನೋಡಬೇಕಷ್ಟೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.