ಟ್ರೇಲರ್ ಅಬ್ಬರಿಸುತ್ತಿದೆ... ಇನ್ನೊಂದೇ ವಾರದಲ್ಲಿ 'ಜೂನಿಯರ್' ರೂಪದಲ್ಲಿ ತೆರೆ ಮೇಲೆ ಬರಲಿರುವ ಕಿರೀಟಿ..!

Published : Jul 12, 2025, 04:14 PM IST
Kireeti movie junior

ಸಾರಾಂಶ

ಕಿರೀಟಿಗೆ ಇದು ಚೊಚ್ಚಲ ಸಿನಿಮಾ ಅನಿಸುವುದಿಲ್ಲ. ಜೂನಿಯರ್‌ನಲ್ಲಿ ಕಿರೀಟಿ ಆಲ್ ರೌಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ನೃತ್ಯ, ಫೈಟಿಂಗ್ ಮತ್ತು ತಮ್ಮ ಪಾತ್ರಕ್ಕೆ ಅಗತ್ಯವಾದ ಮನೋಭಾವವನ್ನು ಅದ್ಭುತವಾಗಿ ನಿಭಾಯಿಸುತ್ತಾರೆ ಎಂಬ ಮಾತಿದೆ.  ನಾಯಕಿಯಾಗಿ ಶ್ರೀಲೀಲಾ ಅದ್ಭುತವಾಗಿ ಕಾಣುತ್ತಾರೆ.

ಕಿರೀಟಿ (Kireeti) ನಟನೆಯ ಚೊಚ್ಚಲ ಸಿನಿಮಾ 'ಜೂನಿಯರ್' ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಇದೇ ತಿಂಗಳ 18ಕ್ಕೆ ಏಕಕಾಲಕ್ಕೆ ಕನ್ನಡ, ತೆಲುಗು, ತಮಿಳು ಚಿತ್ರ ತೆರೆಗೆ ಈ ಜೂನಿಯರ್ (Junior) ತೆರೆಗೆ ಬರ್ತಿದೆ. ಟೀಸರ್‌ ಮೂಲಕ ಭರವಸೆ ಹುಟ್ಟಿಸಿದ್ದ ಚಿತ್ರತಂಡವೀಗ ಟ್ರೇಲರ್‌ ಬಿಡುಗಡೆ ಮಾಡಿದೆ. ಮನಸ್ಸು ಮುಟ್ಟುವ ಕಥೆ ಟ್ರೇಲರ್‌ನಲ್ಲಿದೆ. ಆಕ್ಷನ್ ಎಮೋಷನ್‌, ಲವ್‌, ಫ್ಯಾಮಿಲಿ, ಸ್ಟುಡೆಂಟ್‌ ಲೈಫ್‌ ಎಲ್ಲವೂ ಟ್ರೇಲರ್‌ನಲ್ಲಿ ಕಟ್ಟಿಕೊಡಲಾಗಿದೆ.

ಕಿರೀಟಿಗೆ ಇದು ಚೊಚ್ಚಲ ಸಿನಿಮಾ ಅನಿಸುವುದಿಲ್ಲ. ಜೂನಿಯರ್‌ನಲ್ಲಿ ಕಿರೀಟಿ ಆಲ್ ರೌಂಡರ್ ಆಗಿ ಕಾಣಿಸಿಕೊಂಡಿದ್ದಾರೆ. ನೃತ್ಯ, ಫೈಟಿಂಗ್ ಮತ್ತು ತಮ್ಮ ಪಾತ್ರಕ್ಕೆ ಅಗತ್ಯವಾದ ಮನೋಭಾವವನ್ನು ಅದ್ಭುತವಾಗಿ ನಿಭಾಯಿಸುತ್ತಾರೆ. ತಮ್ಮ ಅದ್ಭುತ ಹಾಸ್ಯ ದಿಂದಲೂ ಮನರಂಜಿಸುತ್ತಾರೆ. ನಾಯಕಿಯಾಗಿ ಶ್ರೀಲೀಲಾ ಅದ್ಭುತವಾಗಿ ಕಾಣುತ್ತಾರೆ. ಕಿರೀಟಿ ತಂದೆಯಾಗಿ ರವಿಚಂದ್ರನ್‌ ಹಾಗೂ ಸುಧಾರಾಣಿ ಸಾಥ್‌ ಕೊಟ್ಟಿದ್ದಾರೆ.

ಜೆನಿಲಿಯಾ ಡಿಸೋಜಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾವ್‌ ರಮೇಶ್‌, ಅಚ್ಯುತ್‌ ಕುಮಾರ್‌, ಸತ್ಯ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ನಿರ್ದೇಶಕ ರಾಧಾ ಕೃಷ್ಣ ಒಂದು ಸಂಪೂರ್ಣ ಯುವ ಮನರಂಜನೆಯನ್ನು ನೀಡಿದ್ದಾರೆ. ಕೆ ಕೆ ಸೆಂಥಿಲ್ ಕುಮಾರ್ ಅವರ ಛಾಯಾಗ್ರಹಣ ಅದ್ಭುತವಾಗಿದೆ, ರಾಕ್‌ಸ್ಟಾರ್ ದೇವಿ ಶ್ರೀ ಪ್ರಸಾದ್ ಸಂಗೀತ ಚಿತ್ರದ ಹೈಲೆಂಟ್‌ಗಳಲ್ಲೊಂದು.

ಸಿನಿಮಾಗೆ ಖ್ಯಾತ ಆ್ಯಕ್ಷನ್ ಕೊರಿಯೋಗ್ರಾಫರ್ ಪೀಟರ್ ಹೆನ್ಸ್ ಸಾಹಸ ಸಂಯೋಜಿಸಿದ್ದಾರೆ. ವಾರಾಹಿ ಚಲನಚಿತ್ರ ಬ್ಯಾನರ್‌ನಡಿ ರಜನಿ ಕೊರ್ರಪಾಟಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಸಾಯಿಶಿವಾನಿ ಪ್ರಸೆಂಟ್‌ ಮಾಡುತ್ತಿದ್ದಾರೆ. ಜುಲೈ 18 ರಂದು ಸಿನಿಮಾ ಬಿಡುಗಡೆಯಾಗಲಿದೆ.

ಕನ್ನಡ-ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆ ಕಾಣಲಿರುವ ಈ ಚಿತ್ರದ ಬಗ್ಗೆ ಇದೀಗ ಸೌತ್ ಇಂಡಿಯಾದಲ್ಲಿ ಭಾರೀ ನಿರೀಕ್ಷೆ ಮನೆಮಾಡಿದೆ. ಕಾರಣ, ಮೊದಲನೆಯದಾಗಿ ಇದು ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾ. ಎರಡನೆಯದಾಗಿ ಇದು ಕನ್ನಡ ಮಾತ್ರವಲ್ಲದೇ ಸೌತ್ ಇಂಡಿಯಾವನ್ನು ಬೆಸೆಯುವ ಸಿನಿಮಾ, ಂಉರನೆಯದಾಗಿ ಇದೊಂದು ಬಿಗ್ ಬಜೆಟ್ ಸಿನಿಮಾ. ಹಲವರ ಬದುಕಿಗೆ ನೆರವಾಗಬಲ್ಲ, ನೆರಳಾಗಬಲ್ಲ ಸಿನಿಮಾ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನ್ನ Kindness ಅನ್ನು, Weakness ಅಂದ್ಕೋಬೇಡಿ...ಜಾನ್ವಿ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?
ಕೊನೆಗೂ ಬಯಲಾಯ್ತು ಗಿಲ್ಲಿಯ ನಿಜವಾದ ಗೆಲುವಿನ ಸೀಕ್ರೆಟ್‌! ಬಿಗ್ ಬಾಸ್ ಗೆದ್ದ ಗಿಲ್ಲಿ, ವರ್ಕ್ ಔಟ್ ಆಗಿದ್ದು ಎಲ್ಲಿ?