
ಬೆಂಗಳೂರು (ಜ.11): ಗುರುನಂದನ್ ನಟಿಸಿರುವ ಇದೇ ತಿಂಗಳು 19ಕ್ಕೆ ತೆರೆಗೆ ಬರಲಿರುವ ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ನಟ ಸುದೀಪ್ ಅವರ ಪಾತ್ರ ಏನೆಂಬುದು ಈಗೀಗ ಬಹಿರಂಗವಾಗುತ್ತಿದೆ.
ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಳ್ಳುತ್ತಿರುವ ಸುದೀಪ್ ಅವರದ್ದು ಪಕ್ಕಾ ನೆಗೆಟಿವ್ ಪಾತ್ರವಂತೆ. ಅಲ್ಲದೆ ಸುದೀಪ್ ಅವರ ಪಾತ್ರವನ್ನು ಉದ್ಯಮಿ ವಿಜಯ್ ಮಲ್ಯ ಅವರ ವ್ಯಕ್ತಿತ್ವಕ್ಕೆ ಹತ್ತಿರವಿರುವಂತೆ ಇಡೀ ಪಾತ್ರವನ್ನು ನಿರ್ದೇಶಕ ನರೇಶ್ ಕುಮಾರ್ ರೂಪಿಸಿದ್ದಾರಂತೆ. ಹೀಗಾಗಿ ಚಿತ್ರದಲ್ಲಿ ನಾಯಕ ಗುರುನಂದನ್ ಅವರಿಗೆ ರೋಲ್‌ಮಾಡೆಲ್ ಆಗಿದ್ದುಕೊಂಡೇ ತಮ್ಮ ಮತ್ತೊಂದು ಮುಖವನ್ನು ತೋರಿಸುತ್ತಾರೆ. ತೆಲುಗಿನ ‘ಈಗ’ ಚಿತ್ರದಲ್ಲಿ ಯಾವ ರೀತಿ ನಾಯಕಿ ಸಮಂತಾ ಅವರ ಮುಂದೆ ಒಳ್ಳೆಯವರಾಗಿ ಕಾಣಿಸಿಕೊಳ್ಳುತ್ತಲೇ ತಮ್ಮ ಅಸಲಿ ರೂಪವನ್ನು ಹೊರಗಿಡುತ್ತಾರೋ ಅದೇ ರೀತಿ ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲೂ ನಾಯಕ ಗುರುನಂದನ್ ಹಾಗೂ ನಾಯಕಿ ಆವಂತಿಕಾ ಶೆಟ್ಟಿ ಅವರನ್ನು ಕಿಚ್ಚ ಕಾಡುತ್ತಾರಂತೆ. ಚಿತ್ರದಲ್ಲಿ ಅವರದ್ದು ವಿಲನ್ ಪಾತ್ರ ಮಾಡಿರುವುದು ನಿಜವೆಂದು ಆ ಮೂಲಕ ಚಿತ್ರತಂಡ ಮಾಹಿತಿ ಕೊಟ್ಟಿದೆ. ಹೀಗಾಗಿ ಪರಭಾಷೆಗಳಲ್ಲೇ ವಿಲನ್ ಆಗಿ ಕಾಣಿಸಿಕೊಂಡವರು ಈಗ ಕನ್ನಡದಲ್ಲೂ ವಿಲನ್ ಆಗಿದ್ದಾರೆ ಸುದೀಪ್. ಕಿಚ್ಚನ ಈ ಪಾತ್ರವನ್ನು ಅವರ ಅಭಿಮಾನಿಗಳು ಹೇಗೆ ತೆಗೆದುಕೊಳ್ಳುತ್ತಾರೋ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.