ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಯೊಬ್ಬ ಲೈಬ್ರರಿಯನ್ನು ಕಟ್ಟಿಸಿ ಅಭಿಮಾನ ಮೆರೆದಿದ್ದಾರೆ. ಇತರರಿಗೂ ಮಾದರಿಯಾಗಿದ್ದಾರೆ.
ಕಿಚ್ಚ ಸುದೀಪ್ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ. ಸ್ಯಾಂಡಲ್ ವುಡ್ ಮಾತ್ರವಲ್ಲ ಎಲ್ಲಾ ಸಿನಿಮಾ ಇಂಡಸ್ಟ್ರಿಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ.
ಸೆ. 03 ರಂದು ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ಗಿಫ್ಟ್ ಕೊಡುವ ಮೂಲಕ, ಹಚ್ಚೆ ಹಾಕಿಸಿಕೊಳ್ಳುವ ಮೂಲಕ, ಸೈಕಲ್ ರೈಡ್ ಮಾಡುವ ಮೂಲಕ ಅಭಿಮಾನವನ್ನು ಹೊರ ಹಾಕಿದ್ದಾರೆ. ಇಲ್ಲೊಬ್ಬ ಅಭಿಮಾನಿ ತುಸು ವಿಭಿನ್ನವಾಗಿ ಅಭಿಮಾನ ತೋರಿದ್ದಾನೆ.
🤗🤗🙏🏼🙏🏼🙏🏼 https://t.co/17au2K9Gvw
— Kichcha Sudeepa (@KicchaSudeep)ಬಸಯ್ಯ ಎನ್ ನಾಗಯ್ಯನವರ್ ಎನ್ನುವ ಅಭಿಮಾನಿಯೊಬ್ಬ ಕಿಚ್ಚ ಸುದೀಪ್ ಗಾಗಿ ಬೊಂಬೇರಹಳ್ಳಿಯಲ್ಲಿ ಲೈಬ್ರರಿಯೊಂದನ್ನು ಕಟ್ಟಿಸಿದ್ದಾರೆ. ಗ್ರಂಥಾಲಯಕ್ಕೆ ಕಿಚ್ಚ ಸುದೀಪ್ ಹೆಸರನ್ನೇ ಇಟ್ಟಿದ್ದಾರೆ. ಇದನ್ನು ಸುದೀಪ್ ಶೇರ್ ಮಾಡಿಕೊಂಡು ಅಭಿಮಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.