ಮಕ್ಕಳೇ ಬೇಡ ಎಂದ 'ಯೂ ಟರ್ನ್’ ನಟಿ ಶ್ರದ್ಧಾ

Published : Sep 06, 2019, 11:23 AM ISTUpdated : Sep 06, 2019, 11:25 AM IST
ಮಕ್ಕಳೇ ಬೇಡ ಎಂದ 'ಯೂ ಟರ್ನ್’ ನಟಿ ಶ್ರದ್ಧಾ

ಸಾರಾಂಶ

ಯೂ ಟರ್ನ್ ನಟಿ ಶ್ರದ್ಧಾ ಶ್ರೀನಾಥ್ ಮಕ್ಕಳೇ ಬೇಡ ಎಂದು ನಿರ್ಧರಿಸಿದ್ದಾರೆ. ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಬಗ್ಗೆ ಮಾತನಾಡುತ್ತಾ ಈ ರೀತಿ ಹೇಳಿಕೆ ಕೊಟ್ಟಿರುವುದು ಕುತೂಹಲ ಮೂಡಿಸಿದೆ. 

ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಬಹುಬೇಡಿಕೆ ನಟಿ ಶ್ರದ್ಧಾ ಶ್ರೀನಾಥ್ ಮಹಿಳಾ ದೌರ್ಜನ್ಯದ ವಿರುದ್ಧ ಮಾತನಾಡಿದ್ದಾರೆ. 

ಬಾಲಿವುಡ್‌ನಿಂದ ಹಾರಿ ’ರಾಬರ್ಟ್’ ಗಾಗಿ ಹಾರಿ ಬಂದ ಭದ್ರಾವತಿ ಹುಡುಗಿ!

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶ್ರದ್ಧಾ, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಇನ್ನೂ ನಿಂತಿಲ್ಲ. ಸಮಾಜದ ದೃಷ್ಟಿಕೋನ ಬದಲಾಗಬೇಕಿದೆ ಎಂದು ಹೇಳಿದ್ದಾರೆ. 

‘ನಮ್ಮ ಅಜ್ಜಂದಿರಿಗೆ 15 ಮಕ್ಕಳಿದ್ದರು. ನನ್ನ ತಂದೆ-ತಾಯಿಗೆ ಇಬ್ಬರು ಮಕ್ಕಳಿದ್ದೇವೆ. ನಾನು ಮಕ್ಕಳೇ ಬೇಡ’ ಎಂದು ನಿರ್ಧರಿಸಿದ್ದೇನೆ’ ಎಂದಿದ್ದಾರೆ.  ಇದು ನನ್ನ ವೈಯಕ್ತಿಕ ಅಭಿಪ್ರಾಯ. ಯಾರೊಬ್ಬರ ಲೈಫ್ ಸ್ಟೈಲ್ ನಿಂದಲೂ ಪ್ರಭಾವಕ್ಕೊಳಗಾಗಿ ಈ ನಿರ್ಧಾರಕ್ಕೆ ಬಂದಿಲ್ಲ ಎಂದಿದ್ದಾರೆ. 

ಕ್ಯಾನ್ಸರ್ ರೋಗಿಗಳ ನೆರವಿಗೆ ನಿಂತ ‘ಸಜನಿ’ ನಟಿ!

ನಾನಿ ಹಾಗೂ ಶ್ರದ್ಧಾ ಶ್ರೀನಾಥ್‌ ಅಭಿನಯದ ‘ಜೆರ್ಸಿ’ ಚಿತ್ರದ ಲಿಪ್‌ಲಾಕ್‌ ದೃಶ್ಯ ಇತ್ತೀಚಿಗೆ  ವೈರಲ್‌ ಆಗಿದೆ. ಕನ್ನಡದಲ್ಲಿ ಯೂ ಟರ್ನ್ ಸಿನಿಮಾದಲ್ಲಿ ನಟಿಸಿದ್ದಾರೆ. ಒಳ್ಳೆಯ ಮೆಚ್ಚುಗೆ ಗಳಿಸಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?