ಕತ್ರಿನಾ ಮದುವೆ ಆಗೋದು ಖಾತ್ರಿನಾ?

Published : Jan 09, 2018, 11:06 AM ISTUpdated : Apr 11, 2018, 12:48 PM IST
ಕತ್ರಿನಾ ಮದುವೆ ಆಗೋದು ಖಾತ್ರಿನಾ?

ಸಾರಾಂಶ

ಬಾಲಿವುಡ್ ಬೆಡಗಿಯರಿಗೆ ಮದುವೆಯಂತೆ ಎನ್ನುವ ಸುದ್ದಿ ಸದಾ ಹರಿದಾಡುತ್ತಲೇ  ಇರುತ್ತದೆ. ಯಾವುದಾದರೂ ಒಂದು ಜೋಡಿ ಮೂರ್ನಾಲ್ಕು  ಬಾರಿ ಒಟ್ಟಿಗೆ  ಕಾಣಿಸಿಕೊಂಡರೆ ಸಾಕು ಅವರಿಬ್ಬರ ನಡುವೆ ಏನೋ ಇದೆ ಎನ್ನುವ ಗುಸುಗುಸು ಶುರುವಾಗಿಬಿಡುತ್ತದೆ. ಆದರೆ ಸ್ವತಃ ನಟಿಯೇ ನಾನು ಮದುವೆಯಾಗುವ ನಿರ್ಧಾರ ಮಾಡಿದ್ದೇನೆ ಎಂದಾದ ಆ ಸುದ್ದಿಗೆ ಒಂದು ತೂಕವಿರುತ್ತದೆ. ಇಂತಹ ತೂಕದ ಮಾತನ್ನು ಆಡಿರುವ  ಬೆಡಗಿ ಕತ್ರಿನಾ ಕೈಫ್.

ಬೆಂಗಳೂರು (ಜ.09): ಬಾಲಿವುಡ್ ಬೆಡಗಿಯರಿಗೆ ಮದುವೆಯಂತೆ ಎನ್ನುವ ಸುದ್ದಿ ಸದಾ ಹರಿದಾಡುತ್ತಲೇ  ಇರುತ್ತದೆ. ಯಾವುದಾದರೂ ಒಂದು ಜೋಡಿ ಮೂರ್ನಾಲ್ಕು  ಬಾರಿ ಒಟ್ಟಿಗೆ  ಕಾಣಿಸಿಕೊಂಡರೆ ಸಾಕು ಅವರಿಬ್ಬರ ನಡುವೆ ಏನೋ ಇದೆ ಎನ್ನುವ ಗುಸುಗುಸು ಶುರುವಾಗಿಬಿಡುತ್ತದೆ. ಆದರೆ ಸ್ವತಃ ನಟಿಯೇ ನಾನು ಮದುವೆಯಾಗುವ ನಿರ್ಧಾರ ಮಾಡಿದ್ದೇನೆ ಎಂದಾದ ಆ ಸುದ್ದಿಗೆ ಒಂದು ತೂಕವಿರುತ್ತದೆ. ಇಂತಹ ತೂಕದ ಮಾತನ್ನು ಆಡಿರುವ  ಬೆಡಗಿ ಕತ್ರಿನಾ ಕೈಫ್.

ಆಂಗ್ಲ ಪತ್ರಿಕೆಯೊಂದು ನಡೆಸಿರುವ ಸಂದರ್ಶನದಲ್ಲಿ ಈ ವಿಚಾರ ಬಹಿರಂಗ ಪಡಿಸಿರುವ ಕತ್ರಿನಾ ನನಗೂ ಮದುವೆಯಾಗಿ ಮುದ್ದಾದ ಮಕ್ಕಳನ್ನು ಹೊಂದುವ ಆಸೆ ಇದೆ. ಅದು ಸದ್ಯದಲ್ಲಿಯೇ ಕೂಡಿ ಬರಲಿದೆ. ಅದಕ್ಕಾಗಿ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ ಹುಡುಗ ಯಾರು? ಏನೇನು ಸಿದ್ಧತೆ ಎನ್ನುವುದರ ಬಗ್ಗೆ ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ.

ಹಿಂದಿನ ಐದಾರು ಸಿನಿಮಾಗಳು ಹೆಚ್ಚು ನಿರೀಕ್ಷೆ ಹುಟ್ಟಿಸಲು ವಿಫಲವಾಗಿದ್ದರಿಂದ ಕಂಗೆಟ್ಟಿದ್ದ  ಕತ್ರಿನಾಗೆ ‘ಟೈಗರ್ ಜಿಂದಾ ಹೈ’ ಮರುಜೀವ ನೀಡಿದೆ. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಕತ್ರಿನಾ ಈ ನಿರ್ಧಾರ ಪ್ರಕಟನೆ ಮಾಡಿರುವುದು ಕುತೂಹಲಕಾರಿ. ಇನ್ನು ದಾಂಪತ್ಯದ ನಂತರ ಕತ್ರಿನಾ ಚಿತ್ರರಂಗದಲ್ಲಿ ಮುಂದುವರೆಯುತ್ತಾರಾ ಎನ್ನುವ ಪ್ರಶ್ನೆಗೂ ಅವರು ಸರಿಯಾದ ಉತ್ತರ  ನೀಡಿಲ್ಲ. ಸಂಸಾರ, ಮನೆ, ಮಕ್ಕಳು ಎಂದಾದಾಗ ನನಗೆ ಮನೆಯೇ ಮೊದಲ ಪ್ರಾಶಸ್ತ್ಯವಾಗಿರುತ್ತದೆ. ಸಿನಿಮಾ ಏನಿದ್ದರೂ ಎರಡನೇ ಸ್ಥಾನದಲ್ಲಿ ಇರುತ್ತದೆ ಎಂದು ಸಿನಿಮಾ  ರಂಗದಿಂದ ಅಂತರ ಕಾಯ್ದುಕೊಳ್ಳುವ ಮಾತನ್ನೂ ಮಾರ್ಮಿಕವಾಗಿ ಆಡಿದ್ದಾರೆ. ಸದ್ಯಕ್ಕೆ ಇರುವುದು ಕತ್ರಿನಾ ಮದುವೆ ಯಾವಾಗ? ಹುಡುಗ ಯಾರು? ಎನ್ನುವ ಪ್ರಶ್ನೆಗಳು ಮಾತ್ರ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Karunya Ram Sister Case: ಒಡಹುಟ್ಟಿದ ತಂಗಿ ವಿರುದ್ಧವೇ ಪೊಲೀಸ್‌ ಠಾಣೆ ಮೆಟ್ಟಿಲೇರಿದ ನಟಿ ಕಾರುಣ್ಯಾ ರಾಮ್
ಇಡೀ ಸೀಸನ್‌ಗೆ ಕಿಚ್ಚನ ಚಪ್ಪಾಳೆ ಪಡೆದು BBK 12 ಶೋಗೆ ಗುಡ್‌ಬೈ ಹೇಳಿದ Dhruvanth;‌ ವೀಕ್ಷಕರಿಗೆ ಅದೇ ಡೌಟ್!