
ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಸೈಪ್ ಅಲಿಖಾನ್ ಹಾಗೂ ಕರೀನಾ ಕಪೂರ್ ಖಾನ್ ದಂಪತಿಗೆ ಗಂಡು ಮಗು ಜನಿಸಿದ್ದು, ಆ ಮಗುವಿಗೆ ತೈಮೂರ್ ಅಲಿಖಾನ್ ಪಟೌಡಿ ಎಂದು ಹೆಸರಿಟ್ಟಿದ್ದು ಗೊತ್ತೇ ಇದೆ.
ಆನಂತರದ ದಿನಗಳಲ್ಲಿ ತಾರಾಜೋಡಿಯು ತಮ್ಮ ಮಗುವಿಗೆ ಭಾರತದ ಮೇಲೆ ದಂಡೆತ್ತಿ ಬಂದ ದಾಳಿಕೋರ ತೈಮೂರ್ ಹೆಸರಿಟ್ಟಿದ್ದು ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು ಮಾತ್ರ ವಿಪರ್ಯಾಸ. ತೈಮೂರ್ 14ನೇ ಶತಮಾನದಲ್ಲಿ ಭಾರತದ ಮೇಲೆ ದಂಡೆತ್ತಿ ಬಂದ ಪರ್ಶಿಯಾದ ದಾಳಿಕೋರ.
ಸಾಮಾಜಿಕ ಜಾಲತಾಣಗಳಲ್ಲಿ ಸೈಪ್-ಕರೀನಾ ಮಗು ತೈಮೂರ್ ಸತ್ತೆ ಹೋಗಲಿ ಎಂಬರ್ಥದಲ್ಲೆಲ್ಲಾ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದು ಈಗ ಇತಿಹಾಸ.
ಆದರೆ ಹೊಸ ವಿಷಯ ಏನಪ್ಪಾ ಅಂದ್ರೆ ಸೈಫ್-ಕಪೂರ್ ಜೋಡಿ ತೈಮೂರ್'ನನ್ನು ತಾತಾ ಮನ್ಸೂರ್ ಅಲಿ ಖಾನ್ ಪಟೌಡಿಯಂತೆ ಶ್ರೇಷ್ಟ ಕ್ರಿಕೆಟರ್ ಮಾಡುವ ಆಸೆಯಿದೆಯಂತೆ. ಈ ಬಗ್ಗೆ ಕರೀನಾ ತನ್ನ ತಂದೆ ರಣ್'ದೀರ್ ಕಪೂರ್ ಬಳಿ ತೈಮೂರ್'ನನ್ನು ಆತನ ತಾತನಂತೆ ಶ್ರೇಷ್ಟ ಕ್ರಿಕೆಟ್ ಆಟಗಾರರನ್ನಾಗಿ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆಂದು ಇಂಡಿಯಾ ಟುಡೇ ವರದಿ ಮಾಡಿದೆ. ಮುಂದೊಂದು ದಿನ ತೈಮೂರ್ ಬ್ಲೂ ಜೆರ್ಸಿ ತೊಟ್ಟು ಅಖಾಡಕ್ಕಿಳಿಯುತ್ತಾನಾ ಕಾಲವೇ ಉತ್ತರಿಸಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.