ಸೆಕ್ಸ್ ಕುರಿತಂತೆ ಹುಬ್ಬೇರಿಸುವಂತಾ ಹೇಳಿಕೆ ಕೊಟ್ಟ ಕರಣ್ ಜೋಹರ್

By internet desk-First Published Oct 2, 2016, 8:19 AM IST
Highlights

ಸೆಕ್ಸ್ ಬಳಿಕ ಏನು ಮಾಡಲು ಇಚ್ಛಿಸುತ್ತೀರಿ ಎಂಬ ಪ್ರಶ್ನೆಗೆ ನೀಡಿರುವ ಉತ್ತರ ಹುಬ್ಬೇರಿಸುವಂತೆ ಮಾಡಿದೆ.

ಬಾಲಿವುಡ್`ನ ಖ್ಯಾತ ನಿರ್ದೇಶಕ, ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳುವ ಕರಣ್ ಜೋಹರ್ ಸಂದರ್ಶನವೊಂದರಲ್ಲಿ ಸೆಕ್ಸ್ ಕುರಿತಾಗಿ ನೀಡಿರುವ ಪ್ರತಿಕ್ರಿಯೆ ನಿಜಕ್ಕೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ.

ಸೆಕ್ಸ್ ಕುರಿತಾಗಿ ಮಾತನಾಡುತ್ತಾ 26ನೇ ವಯಸ್ಸಿಗೇ ನನ್ನ ವರ್ಜಿನಿಟಿ ಕಳೆದುಕೊಂಡೆ, ತನ್ನ ಮೊದಲ ಚಿತ್ರ `ಕುಚ್ ಕುಚ್ ಹೋತಾ ಹೈ' ರಿಲೀಸ್ ಸಂದರ್ಭ ನ್ಯೂಯಾರ್ಕ್`ಗೆ ತೆರಳಿದ್ದ ಸಂದರ್ಭ ಎಲ್ಲವೂ ನಡೆದುಹೋಯ್ತು ಎಂದ ಕರಣ್ ಜೋಹರ್, ಸೆಕ್ಸ್ ಬಳಿಕ ಏನು ಮಾಡಲು ಇಚ್ಛಿಸುತ್ತೀರಿ ಎಂಬ ಪ್ರಶ್ನೆಗೆ ನೀಡಿರುವ ಉತ್ತರ ಹುಬ್ಬೇರಿಸುವಂತೆ ಮಾಡಿದೆ. ಸೆಕ್ಸ್ ಬಳಿಕ ನಾನು ಹೊಸ ಬಟ್ಟೆ ಖರೀದಿಸಲು ಇಚ್ಛಿಸುತ್ತೇನೆ ಎಂದು ಕರಣ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.

Latest Videos

click me!