
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹುಟ್ಟುಹಬ್ಬದ (Rishab Shetty Birthgday) ಸಂಭ್ರಮದಲ್ಲಿದ್ದಾರೆ. ಕುಂದಾಪುರದಲ್ಲಿ ಕಾಂತಾರ ಟೀಂ ಜೊತೆಗೆ ತಮ್ಮ 42 ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಈ ಸಾರಿ ಫ್ಯಾನ್ಸ್ ಗೆ ಸಿಗದೇ ಹೋದ್ರೂ ಕಾಂತಾರ ಚಾಪ್ಟರ್ 1 (Kantara Chapter 1) ರಿಲೀಸ್ ಡೇಟ್ ಆನೌನ್ಸ್ ಮಾಡೋ ಮೂಲಕ ಫ್ಯಾನ್ಸ್ ಗು ಸರ್ಪ್ರೈಸ್ ಕೊಟ್ಟಿದ್ದಾರೆ.
ಯಸ್ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕುಂದಾಪುರದಲ್ಲಿ ತಮ್ಮ ಫ್ಯಾಮಿಲಿ ಮತ್ತು ಕಾಂತಾರ ತಂಡದ ಜೊತೆಗೆ ಕೇಕ್ ಕತ್ತರಿಸಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ ರಿಷಬ್.
ರಿಷಬ್ ಬರ್ತ್ ಡೇ ಪಾರ್ಟಿ ನಲ್ಲಿ ಕಾಂತಾರ ನಿರ್ಮಾಪಕ ವಿಜಯ್ ಕಿರಗಂದೂರು ಕೂಡಾ ಭಾಗಿಯಾಗಿದ್ದಾರೆ. ಇನ್ನೂ ಬರ್ತ್ ಡೇ ದಿನ ಫ್ಯಾನ್ಸ್ ಗಳಿಗೂ ರಿಷಬ್ ಗಿಫ್ಟ್ ಕೊಡೋದನ್ನ ಮರೆತಿಲ್ಲ. ಕಾಂತಾರ -1 ಹೊಸ ಪೋಸ್ಟರ್ ರಿಲೀಸ್ ಆಗಿದ್ದು. ಅಕ್ಟೋಬರ್ 2 ಕ್ಕೇ ಸಿನಿಮಾ ರಿಲೀಸ್ ಅನ್ನೋದನ್ನ ಅನೌನ್ಸ್ ಮಾಡಲಾಗಿದೆ.
ಅಸಲಿಗೆ ಕಳೆದ ವರ್ಷವೇ ಕಾಂತಾರ 1 ಅಕ್ಟೋಬರ್ 2 ರಂದು ರಿಲೀಸ್ ಆಗುತ್ತೆ ಅಂತ ಅನೌನ್ಸ್ ಮಾಡಲಾಗಿತ್ತು. ಆದ್ರೆ ಶೂಟಿಂಗ್ ಸಮಯದಲ್ಲಿ ಚಿತ್ರತಂಡಕ್ಕೆ ನಾನಾ ಅಡ್ಡಿಗಳು ಎದುರಾಗಿದ್ವು. ಈ ಅಡ್ಡಿಗಳ ನಡುವೆಯೂ ರಿಷಬ್ ಅಂದುಕೊಂಡ ಸಮಯಕ್ಕೆ ಶೂಟಿಂಗ್ ಮುಗಿಸಿದ್ದಾರೆ.
ಸದ್ಯ ರಿಲೀಸ್ ಆಗಿರೋ ಪೋಸ್ಟರ್ ನಲ್ಲಿ ರಿಷಬ್ ಉಗ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದಂತ ಕಥೆಯ ಮುನ್ನುಡಿ.. ಮನದಾಳದ ಕಥೆಗೆ ಮತ್ತೊಮ್ಮೆ ಸ್ವಾಗತ ಅಂತ ಬರೆಯಲಾಗಿದ್ದು , ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದೆ. ಕನ್ನಡದ ಜೊತೆಗೆ 6 ಭಾಷೆಗಳಲ್ಲಿ ಕಾಂತಾರ 1 ಸಿದ್ಧವಾಗಿದ್ದು ಇಂಗ್ಲಿಷ್ ಭಾಷೆಯಲ್ಲಿ ಕೂಡಾ ರಿಲೀಸ್ ಆಗಲಿದೆ. ಒಟ್ಟಾರೆ ಕಾಂತಾರ ಚಾಪ್ಟರ್ 1 ಮೇಲೆ ಫ್ಯಾನ್ಸ್ ಗೆ ನೂರೆಂಟು ನಿರೀಕ್ಷೆ ಇವೆ. ಆ ನಿರೀಕ್ಷೆಗೆ ತಕ್ಕ ಸಿನಿಮಾ ಕೊಡ್ತೀನಿ ಅನ್ನೋ ಸೂಚನೆ ಕೊಟ್ಟಿದ್ದಾರೆ ಬರ್ತ್ ಡೇ ಬಾಯ್ ರಿಷಬ್ ಶೆಟ್ಟಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.