Army service: ನಾನಾ ಪಾಟೇಕರ್‌ಗೆ ಸೇನೆ ಸೇರಲು ವಿಶೇಷ ಅವಕಾಶ ನೀಡಿದ ಕನ್ನಡಿಗ ಇವರೇ!

Published : Oct 08, 2026, 07:28 PM IST
Indian Army

ಸಾರಾಂಶ

Nana Patekar Indian army service: 1999ರ ಯುದ್ಧದ ಸಮಯದಲ್ಲಿ ನಟ ನಾನಾ ಪಾಟೇಕರ್ ಅವರಿಗೆ ಭಾರತೀಯ ಸೇನೆ ಸೇರಲು ಕನ್ನಡಿಗರೊಬ್ಬರು ವಿಶೇಷ ಅವಕಾಶ ನೀಡಿದ್ದರು. ಗಡಿಯಲ್ಲಿ 60 ದಿನಗಳ ಕಾಲ ಸೈನಿಕರೊಂದಿಗೆ ಸೇವೆ ಸಲ್ಲಿಸಿದ ಅವರು, ಶತ್ರುಗಳ ದಾಳಿ ಎದುರಿಸುವ ಜೊತೆಗೆ ಗಾಯಗೊಂಡ ಯೋಧರ ಆರೈಕೆಯನ್ನೂ ಮಾಡಿದರು.

ನಾನಾ ಪಾಟೇಕರ್‌ಗೆ ಕನ್ನಡದ ನಂಟೂ ಸದಾ ಬೆಸೆದುಕೊಂಡೆ ಬಂದಿದೆ. ಅದರಲ್ಲೂ ಪ್ರೊ.ಎಂ.ನಜುಂಡಸ್ವಾಮಿ ಬಯೋಫಿಕ್‌, ಕೇಸರಿ ಹರವೊರೊಂದಿಗಿನ ಒಡನಾಟ ಸೇರಿ ಹಲವಾರು ಬಾರಿ ಕನ್ನಡ ಒಂದಕ್ಕೊಂದು ಬೆಸೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಪ್ರಾರಂಭದಲ್ಲಿ ಸೇನೆ ಸೇರಲು ಅನುಮತಿ ಸಿಗದೇ ಇದ್ದಾಗ, ವಿಶೇಷ ಅವಕಾಶ ನೀಡಿದ್ದೇ ಕನ್ನಡಿಗ. ಅವರು ಯಾರು ಗೊತ್ತಾ? ಈ ಕುರಿತು ಸಂಪೂರ್ಣ ವಿವರವನ್ನು ನೋಡೋಣ ಬನ್ನಿ.

ಪಾಟೇಕರ್‌ಗಿತ್ತು ತರಬೇತಿ!

ಮೊದಲು ಸೇನೆಗೆ ಸೇರಲು ತರಬೇತಿ ಮುಖ್ಯ, ಅಲ್ಲದೇ ಏಕಾಏಕಿ ಎದುರಾಗುವ ಹಲವು ಸನ್ನಿವೇಶಗಳಿಗೆ ತರಬೇರಿ ಅವಶ್ಯವಾಗಿರುತ್ತದೆ. ಆದ್ದರಿಂದ ಸಾಮಾನ್ಯ ನಾಗರಿಕರಿಗೆ ಅವಕಾಶ ನೀಡಿರುವುದಿಲ್ಲ. ಆದರೆ ಇವರು ಶೂಟಿಂಗ್‌ ವಿಭಾಗದಲ್ಲಿ3 ಬಾರಿ ಗೋಲ್ಡ್‌ ಮೆಡಲ್ಪ ಡೆದಿರುತ್ತಾರೆ. ಅಲ್ಲದೇ 1991 ಚಿತ್ರವೊಂದರ ಚಿತ್ರೀಕರಣಕ್ಕಾಗಿ, ಮರಾಠ ಇನ್ಫಂಟ್ರರಿಯಲ್ಲಿ ತರಬೇತಿ ಮುಗಿಸಿರುತ್ತಾರೆ. ಈ ಹಿನ್ನೆಲೆಯಲ್ಲೂ ಅವರಿಗೆ ಈ ಅವಕಾಶ ಸಿಗುವ ಸಾಧ್ಯತೆ ಇದ್ದರೂ, ಅದನ್ನು ತಳ್ಳಿಹಾಕಿರುತ್ತಾರೆ. ಆದರೆ ಅದಕ್ಕೆ ಕನ್ನಡಿಗನ ಮೊರೆ ಹೋಗಿ ವಿಶೇಷ ಅನುಮತಿ ಪಡೆಯುತ್ತಾರೆ.

ನಾನಾ ಪಾಟೇಕರ್‌ಗೆ ವಿಶೇಷ ಅನುಮತಿ!

ಅದು 1999ರ ಕಾಲಘಟ್ಟ ಆಗ ದೇಶದಲ್ಲಿ ಯುದ್ಧದ ವಾತಾವರಣವೂ ಸೃಷ್ಟಿಯಾಗಿತ್ತು. ಅಲ್ಲದೇ ಸಾಮಾನ್ಯ ನಾಗರಿಗೆ ಅವಕಾಶ ಇರಲಿಲ್ಲ. ಆದರೆ ಈ ಸಂಧರ್ಭದಲ್ಲಿ ಕೇಂದ್ರ ರೈಲ್ವೆ ಸಚಿವರಾದ ಮಂಗಳೂರಿನ ಜಾರ್ಜ್ ಫರ್ನಾಂಡಿಸ್‌ ಅವರು, ನಾನಾಗೆ ಅವಕಾಶ ಕಲ್ಪಿಸಿದ್ದರು. ಇದು ಅವರಿಗಿದ್ದ ಶಕ್ತಿ.

60 ದಿನಗಳ ಕಾಲ ಗಡಿಯಲ್ಲಿ ಸೇವೆ!

ಅಂದು ಯುದ್ಧದ ಕಾರ್ಮೋಡ ಕವಿದಿದ್ದ ಪ್ರಮುಖ ಪ್ರದೇಶಗಳಾಗಿದ್ದ, ದ್ರಾಸ್‌, ಕುಪ್ವಾರ, ಬಾರಾಮುಲ್ಲಾ, ಮತ್ತು ಸೋಪೋರ್ ಗಡಿಗಳಲ್ಲಿ ಸೈನಿಕರೊಂದಿಗೆ ಕಾಲ ಕಳೆದು, ದೇಶ ಮೊದಲು ಎನ್ನುವುದನ್ನು ಸಾರಿ, ಸಾರಿ ಹೇಳಿದರು. ಅಲ್ಲದೇ ಯಾವುದೇ ವಿಐಪಿ ಸೌಲಭ್ಯ ಪಡೆಯದ ಅವರು, ಶತ್ರುಗಳ ದಾಳಿಗೆ ತಕ್ಷಣ ಪ್ರತಿಕ್ರಿಯಿಸುವ ಕ್ವಿಕ್ ರಿಯಾಕ್ಷನ್ ಟೀಮ್‌ನೊಂದಿಗೆ ಗಸ್ತು ತಿರುಗುವುದಲ್ಲದೇ, ಮದ್ದುಗುಂಡುಗಳನ್ನು ಸಾಗಿಸುವ ಕೆಲಸದಲ್ಲೂ ನೆರವಾಗಿದ್ದಾರೆ.

20 ಕೆಜಿ ತೂಕ ನಷ್ಟ!

ಕಠಿಣ ಹವಾಮಾನ ಮತ್ತು ಯುದ್ಧಭೂಮಿಯ ತೀವ್ರ ಒತ್ತಡದ ನಡುವೆ ಸೈನಿಕರಂತೆ ಬಂಕರ್‌ಗಳಲ್ಲಿ ವಾಸಿಸಿದ ಅವರು, ಆ 60 ದಿನಗಳಲ್ಲಿ ಬರೋಬ್ಬರಿ ೨೦ ಕೆಜಿ ತೂಕ ಕಳೆದುಕೊಂಡಿದ್ದರು. ಅಷ್ಟೇ ಅಲ್ಲ ಗಾಯಗೊಂಡ ಸೈನಿಕರ ಆರೈಕೆ ಮಾಡುವುದರ ಜೊತೆಗೆ, ಯುದ್ಧದ ಸಂದರ್ಭದಲ್ಲಿ ಸೇನೆಯ ಮುಂಚೂಣಿಯಲ್ಲಿದ್ದು ಭಾರತೀಯ ಯೋಧರ ಮನೋಬಲವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

‘ಬೇಬಮ್ಮ’ ನಟಿ ಡ್ರೀಮ್‌ ರೋಲ್‌ ರಿವೀಲ್: ಈ ಪಾತ್ರದಲ್ಲಿ ನೋಡೋಕೆ ಫ್ಯಾನ್ಸ್‌ ಕೂಡ ಕಾತರ!
ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದ ಡಿಂಪಲ್​ ಕ್ವೀನ್​ ರಚಿತಾ ರಾಮ್: ಏನಿದೆ ಅದರಲ್ಲಿ? ಫ್ಯಾನ್ಸ್​ ಫುಲ್​ ಖುಷ್​​