
ಈ ವಾರ ಯೋಗರಾಜ ಭಟ್ಟರ ಪಂಚತಂತ್ರ ತೆರೆ ಕಾಣುತ್ತಿದೆ. ಅದರ ಜೊತೆಗೇ ಎಂಟು ಸಿನಿಮಾಗಳು ನಾವು ಯಾರಿಗೆ ಕಮ್ಮಿ ಎಂದು ದಾಂಗುಡಿಯಿಟ್ಟು ಬರುತ್ತಿವೆ. ಏಳು ದಿನಗಳಲ್ಲಿ ಒಂಬತ್ತು ಸಿನಿಮಾ ನೋಡಬೇಕಾದ ಟ್ವೆಂಟಿ ಟ್ವೆಂಟಿ ಮ್ಯಾಚ್ ಸವಾಲನ್ನು ಪ್ರೇಕ್ಷಕನ ಮುಂದಿಟ್ಟಿವೆ.
ಮೇನ್ ಥೇಟರ್ ಬೇಕು, ಹಲವಾರು ಚಿತ್ರಮಂದಿರಗಳು ಸಿಗಬೇಕು ಅನ್ನುವ ಬೇಡಿಕೆಗಳನ್ನೆಲ್ಲ ಗಾಳಿಗೆ ತೂರಿ, ಸಿಕ್ಕ ಸಿಕ್ಕಲ್ಲಿ ತೂರಿಕೊಳ್ಳುವ ಅಭ್ಯಾಸವನ್ನೂ ಈ ಹೊಸ ಚಿತ್ರಗಳು ಮಾಡಿಕೊಂಡಿವೆ. ಹೀಗಾಗಿ ವೀರೇಶ್, ನವರಂಗ್, ಪ್ರಸನ್ನ ಚಿತ್ರಮಂದಿರಗಳನ್ನೇ ಮೇನ್ ಥೇಟರ್ ಮಾಡಿಕೊಂಡು ಸಿನಿಮಾಗಳು ಬರುತ್ತಿವೆ.
ಬೆಂಗಳೂರಲ್ಲಿರುವ ಮಾಲ್‌ಗಳ ಸಂಖ್ಯೆ 15. ಅಲ್ಲಿರುವ ಸ್ಕ್ರೀನ್‌ಗಳು 200. ಕನ್ನಡದ ಜೊತೆಗೇ ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಸಿನಿಮಾಗಳ ಪೈಪೋಟಿ. ಅಲ್ಲಿಗೆ ಕನ್ನಡ ಸಿನಿಮಾಗಳಿಗೆ ಒಂದೇ ವಾರಕ್ಕೆ ವಾಕ್‌ಔಟ್ ಭಾಗ್ಯ.
ರಾಜ್ಯದಲ್ಲಿ ಈಗಿರುವ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸಂಖ್ಯೆ ಒಟ್ಟು 625. ಬೆಂಗಳೂರಲ್ಲಿ 80. ಹೊಸಬರ ಸಿನಿಮಾಗಳಿಗೆ ಅಲ್ಲಿ ಎರಡು ಶೋ ಕೊಡುವುದೇ ಅಲ್ಲಿ ಕಷ್ಟ. ಇಂತಹ ಸಂದರ್ಭದಲ್ಲಿ ವಾರಕ್ಕೆ 8-9 ಸಿನಿಮಾಗಳು ತೆರೆ ಕಂಡರೆ ಅವುಗಳ ಗತಿ ಏನು ಎನ್ನುವುದು ಪ್ರಶ್ನೆ.
ಈ ವಾರ ತೆರೆಗೆ:
1 ಪಂಚತಂತ್ರ
2 ಲಂಬೋದರ ಲಂಡನ್
3 ರಗಡ್
4 ಗಂಧದ ಕುಡಿ
5 ಧರ್ಮಸ್ಯ
6 ರವಿ ಹಿಸ್ಟರಿ
7 ರಣಕಣಕ
8 ಧರ್ಮಾಪುರ
9ಪ್ರೀತಿ-ಹಾಸ್ಯದ ಹನಿಗಳು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.