
ಆರ್ ಕೇಶವಮೂರ್ತಿ
ರ್ಮಾಪಕರೇ ನಿರ್ಮಾಣದ ಜತೆಗೆ ಚಿತ್ರಕತೆ ಹಾಗೂ ಕತೆ ಮಾಡಿದ್ದಾರೆ. ಅದ್ಭುತ ಕತೆ ಅಲ್ಲದಿದ್ದರೂ ಮೂಢನಂಬಿಕೆಯ ವ್ಯಾಮೋಹಕ್ಕೆ ಸಿಕ್ಕಿ ಮನುಷ್ಯ ಯಾವ ಮಟ್ಟಿಗೆ ರಾಕ್ಷಸ ಆಗಿದ್ದಾನೆ ಎಂದು ನಿರ್ಮಾಪಕ ಮತ್ತು ನಿರ್ದೇಶಕರ ಜತೆಯಾಗಿಯೇ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ.
ಟ್ರಾಫಿಕ್ ರೂಲ್ಸ್ ಜಾಗೃತಿಗಾಗಿ KGF ಮೊರೆ ಹೋದ ಪೊಲೀಸರು!
ಜಾಹೀರಾತುಗಳನ್ನು ಮಾಡಿಕೊಂಡಿರುವ ಒಂದು ತಂಡ. ಒಮ್ಮೆ ಜಾಹೀರಾತು ಶೂಟಿಂಗ್ ಹೆಸರಿನಲ್ಲಿ ಹೊರಗೆ ಹೋಗುತ್ತಾರೆ. ಇವರಿಗೆ ದಾರಿಯಲ್ಲಿ ಮತ್ತೊಬ್ಬ ಅಪರಿಚಿತ ಯುವತಿ ಜತೆಯಾಗುತ್ತಾಳೆ. ಎಲ್ಲರು ಒಂದು ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡುತ್ತಾರೆ. ಆದರೆ, ಈ ರೆಸಾರ್ಟ್ ಆಗಲೇ ಕುಖ್ಯಾತಿಗೆ ಪಾತ್ರವಾಗಿರುತ್ತದೆ. ಅಲ್ಲಿ ಸರಣಿ ಸಾವುಗಳಿಗೆ ಕಾರಣವಾಗಿರುತ್ತದೆ. ಈ ಎಲ್ಲ ಸಾವುಗಳು ರೆಸಾರ್ಟ್ ಮಾಲೀಕನಿಗೆ ಹತ್ತಿರ ಇದ್ದವರದ್ದೇ. ಅಲ್ಲಿಗೆ ಸಾವು, ಮಾಲೀಕ ಮತ್ತು ಈ ರೆಸಾರ್ಟ್‌ಗೆ ಯಾವುದೋ ರಹಸ್ಯ ನಂಟು ಇದೆ ಎಂಬ ಗುಟ್ಟನ್ನು ಆರಂಭದಲ್ಲೇ ಬಿಟ್ಟುಕೊಡುತ್ತಾರೆ ನಿರ್ದೇಶಕರು. ಆದರೆ, ಆ ಸರಣಿ ಸಾವುಗಳಿಗೂ ಹಾಗೂ ಆ ಜಾಹೀರಾತು ಫಿಲ್ಮ್ ನಿರ್ದೇಶಕರನಿಗೂ ನೇರ ಸಂಬಂಧ ಇದೆ, ಇವರಿಗೆ ದಾರಿ ನಡುವೆ ಜತೆಯಾದ ಯುವತಿ ಪೊಲೀಸ್ ಅಧಿಕಾರಿ ಎಂದು ಗೊತ್ತಾಗುವ ಹೊತ್ತಿಗೆ ಹೆಣ್ಣಿನ ಆತ್ಮ ಪ್ರತ್ಯಕ್ಷಗೊಳ್ಳುತ್ತದೆ. ಈ ನಡುವೆ ದೆವ್ವ ಬೇರೆ ಯಾರೋ ಎಂಬುದನ್ನು ಹೇಳಿ ದಿಕ್ಕು ತಪ್ಪಿಸುವ ಕೆಲವಸವನ್ನೂ ನಿರ್ದೇಶಕರು ಮಾಡುತ್ತಾರೆ. ಆದರೆ, ಪ್ರೇಕ್ಷಕರು ಯಾಮಾರಲ್ಲ!
ತಾರಾಗಣ: ನೀತು, ದಿಲೀಪ್ ಪೈ, ಸಂಜನಾ, ಶೋಭಿತಾ, ಪ್ರಕಾಶ್ ಹೆಗ್ಗೋಡು, ರವಿಕಿರಣ್, ನೇಹಾ, ರಾಘವೇಂದ್ರ ರೈ, ಶಶಿಕುಮಾರ್, ಅನಿಲ್ ಕುಮಾರ್.
ನಿರ್ದೇಶನ: ಆದಿತ್ಯ ಕುಣಿಗಲ್
ನಿರ್ಮಾಣ: ಶಶಿಕುಮಾರ್
ಛಾಯಾಗ್ರಹಣ: ಪಿ ಕೆ ಎಚ್ ದಾಸ್
ಸಂಗೀತ: ರಾಜ್ ಭಾಸ್ಕರ್
ಯಾವುದೇ ಒಂದು ಒಳ್ಳೆಯ ಕೆಲಸ ಮಾಡಬೇಕು ಎಂದರೆ ಅಲ್ಲೊಂದು ಬಲಿ ಆಗಬೇಕು ಎನ್ನುವ ಅನಾಚಾರ ಯಾರು ತುಂಬಿದರೋ ಗೊತ್ತಿಲ್ಲ. ಆದರೆ, ಮೂಢನಂಬಿಕೆಗಳಿಂದ ಎಂಥ ದುರಂತಗಳು ನಡೆಯುತ್ತವೆ ಎಂಬುದನ್ನು ಹೇಳುವ ‘ವಜ್ರಮುಖಿ’ ಸಿನಿಮಾ ನೋಡಗರಿಗೆ ತೀರಾ ಕಾಡಲ್ಲ. ಮೇಕಿಂಗ್, ನಿರೂಪಣೆ, ಪಾತ್ರದಾರಿಗಳ ನಟನೆ ಎಲ್ಲವೂ ಸಪ್ಪೆ. ಪಿ ಕೆ ಎಚ್ ದಾಸ್ ಕ್ಯಾಮೆರಾ ಕೂಡ ಇಷ್ಟಕ್ಕೇ ಪೂರಕವಾಗಿ ಕೆಲಸ ಮಾಡುತ್ತದೆ. ಇರುವುದರಲ್ಲಿ ಮಂಗಳೂರಿನ ರಾಘವೇಂದ್ರ ರೈ ಅವರು ನಗಿಸುವ ಪ್ರಯತ್ನ ಮಾಡಿದ್ದಾರೆ. ಉಳಿದಂತೆ ನೀತೂ ನೆನಪಿನಲ್ಲಿ ಉಳಿಯುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.