ಅದೊಂದು ರಾತ್ರಿ ಒಬ್ಬ ಹುಡುಗಿಯ ಸಾವು ಸಂಭವಿಸುತ್ತದೆ. ಅಲ್ಲಿಂದ ಕತೆ ಶುರು.
ಆ ಸಾವು ಯಾಕಾಯಿತು, ಹೇಗಾಯಿತು ಎಂಬುದನ್ನು ಹುಡುಕುವುದಕ್ಕೆ ಪೊಲೀಸ್ ಹುಲಿ ಕಿಶೋರ್ ಇದ್ದಾರೆ. ಅವರ ಎಂಟ್ರಿಯೇ ಅದ್ದೂರಿ. ಹೈವೋಲ್ಟೇಜ್ ಪೊಲೀಸ್ ಸ್ಟೈಲಲ್ಲೇ ಎಂಟ್ರಿ ಕೊಟ್ಟು ನಾಲ್ಕೈದು ಮಂದಿಯನ್ನು ರಪರಪನೆ ಎತ್ತೆತ್ತಿ ಆಚೀಚೆ ಒಗಾಯಿಸುತ್ತಾರೆ. ಆರಂಭದಲ್ಲಿ ರೌದ್ರಾವತಾರ, ಆಮೇಲೆಲ್ಲಾ ಅವರದು ಸೌಮ್ಯ ಮುಖಭಾವ. ಬೇಕಾದ ಸಮಯದಲ್ಲಿ ಬೇಕಾದ ಎಕ್ಸ್‌ಪ್ರೆಷನ್ ಕೊಟ್ಟು ನೋಡುಗರನ್ನು ಮಂತ್ರಮುಗ್ಧಗೊಳಿಸುವ ಕಲೆ ಅವರಿಗೆ ಕರಗತ.
’ನನ್ನ ಪ್ರಕಾರ’ಕ್ಕೆ ಸಿಕ್ಕ ಪ್ರಶಂಸೆ; ಡೈರಕ್ಟರ್ ಫುಲ್ ಖುಷ್!
ಇದೊಂದು ಕ್ರೈಮ್ ಥ್ರಿಲ್ಲರ್. ನಿರೂಪಣೆ ಕೂಡ ಕ್ರೈಂ ಸ್ಟೋರಿ ಹೇಳುವಂತೆಯೇ ಇದೆ. ಇಡೀ ಸಿನಿಮಾ ಸಾವನ್ನು ಬಗೆಯುವ ಕಾರ್ಯಕ್ರಮ. ಅಷ್ಟರ ಮಟ್ಟಿಗೆ ನಿರ್ದೇಶಕರು ಸ್ಪಷ್ಟವಾಗಿದ್ದಾರೆ. ಅನವಶ್ಯಕ ಸೀನ್ ಗಳಿಲ್ಲ, ಬೇಡದ ಕಾಮಿಡಿಗಳಿಲ್ಲ. ಎಷ್ಟು ಬೇಕೋ ಅಷ್ಟಷ್ಟೇ. ಮಧ್ಯೆ ಒಂಚೂರು ಸೆಂಟಿಮೆಂಟ್ ಕೂಡ ಉಂಟು.
ಸಿನಿಮಾದಲ್ಲಿ ಒಮ್ಮೆ ಕಿಶೋರ್ ತನಿಖೆಯಲ್ಲಿ ಜೊತೆಯಾದರೆ ಅವರ ಹಿಂದೆಯೇ ಹೋಗಬೇಕು. ಅವರ ಪತ್ನಿ ಡಾಕ್ಟ್ರು ಪ್ರಿಯಾಮಣಿ. ಅವರ ಪಾತ್ರಕ್ಕೆ ಸ್ವಲ್ಪ ಕಡಿಮೆ ಸ್ಪೇಸ್. ಆದರೆ ಮುಖ್ಯಘಟ್ಟದಲ್ಲಿ ಕತೆಗೊಂದು ಬೇರೆ ತಿರುವು ಕೊಡುತ್ತಾರೆ. ಅವರ ಎನರ್ಜಿಯೇ ಬೇರೆ.
ಟ್ರೇಲರ್ ಹಾಗೂ ಟೀಸರ್ ನಿಂದ ಕುತೂಹಲ ಮೂಡಿಸಿತ್ತು 'ನನ್ನ ಪ್ರಕಾರ'!
ಸಿನಿಮಾದ ದಾರಿ ಸರಿ ಇದೆ. ಆದರೆ ಹೋಗ್ತಾ ಹೋಗ್ತಾ ದಾರಿಯಲ್ಲಿ ಅಲ್ಲಲ್ಲಿ ಮುಗ್ಗರಿಸುವಂತಾಗುತ್ತದೆ. ಅದಕ್ಕೆ ಕಾರಣ ಲಾಜಿಕ್ ಇಲ್ಲದೇ ಇರುವುದು. ಥ್ರಿಲ್ಲರ್‌ನ ಶಕ್ತಿಯೇ ಚಿತ್ರಕತೆ. ಆದರೆ ಇಲ್ಲಿ ಒಮ್ಮೊಮ್ಮೆ ಶಕ್ತಿ ಹೆಚ್ಚಿಸಲು ಬೂಸ್ಟ್ ಕೊಡಬೇಕಿತ್ತೇನೋ ಅನ್ನಿಸುತ್ತದೆ. ಮಯೂರಿ, ನಿರಂಜನ್ ದೇಶಪಾಂಡೆ, ಅರ್ಜುನ್ ಯೋಗೇಶ್, ಪ್ರಮೋದ್ ಶೆಟ್ಟಿ ಈ ಚಿತ್ರದ ಆಧಾರಗಳು. ಒಂದೊಳ್ಳೆಯ ಕ್ರೈಂ ಥ್ರಿಲ್ಲರ್ ಕಟ್ಟಿಕೊಡುವ ಸೊಗಸಾದ ಪ್ರಯತ್ನ ಇದು.