ಆಪರೇಷನ್‌ನಲ್ಲಿ U/A ಪಡೆದ ಯಜ್ಞಾ ಶೆಟ್ಟಿ!

Published : Jul 01, 2019, 03:21 PM IST
ಆಪರೇಷನ್‌ನಲ್ಲಿ U/A ಪಡೆದ ಯಜ್ಞಾ ಶೆಟ್ಟಿ!

ಸಾರಾಂಶ

ತುಂಬಾ ದಿನಗಳ ನಂತರ ಯಜ್ಞಾ ಶೆಟ್ಟಿತೆರೆ ಮೇಲೆ ಬರುವುದಕ್ಕೆ ಸಜ್ಜಾಗಿದ್ದಾರೆ. ‘ಕಿಲ್ಲಿಂಗ್‌ ವೀರಪ್ಪನ್‌’ ಹಾಗೂ ‘ಲಕ್ಷ್ಮೀಸ್‌ ಎನ್‌ಟಿಆರ್‌’ ಚಿತ್ರಗಳ ನಂತರ ಟಾಲಿವುಡ್‌ ಕಡೆ ಮುಖ ಮಾಡಿದ್ದಾರೆ ಎಂದುಕೊಳ್ಳುತ್ತಿರುವಾಗಲೇ ಸದ್ದಿಲ್ಲದೆ ಕನ್ನಡದಲ್ಲಿ ‘ಆಪರೇಷನ್‌ ನಕ್ಷತ್ರ’ ಚಿತ್ರದಲ್ಲಿ ನಟಿಸಿದವರು.

ಈ ಚಿತ್ರಕ್ಕೆ ಸೆನ್ಸಾರ್‌ ಆಗಿದೆ. ಯಾವುದೇ ಕಟ್‌ ಹಾಗೂ ಮ್ಯೂಟ್‌ ಇಲ್ಲದೆ ‘ಯು/ಎ’ ಸರ್ಟಿಫಿಕೇಟ್‌ ನೀಡಲಾಗಿದೆ. ಜುಲೈ 12ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ಮಧುಸೂದನ ಕೆ ಆರ್‌ ನಿರ್ದೇಶಿರುವ ಈ ಚಿತ್ರದಲ್ಲಿ ಅದಿತಿ ಪ್ರಭುದೇವ, ನಿರಂಜನ್‌ ಒಡೆಯರ್‌, ಲಿಖಿತ್‌ ಸೂರ್ಯ ಇದ್ದಾರೆ.

ಗೊತ್ತಿರುವ ಲೆಜೆಂಡ್‌ನ ಗೊತ್ತಿಲ್ಲದ ಕಥೆ ಇದು: ಯಜ್ಞಾ ಶೆಟ್ಟಿ

ಕ್ರೈಮ್‌ ಹಾಗೂ ಸಸ್ಪೆನ್ಸ್‌ ಚಿತ್ರದಲ್ಲಿ ನಾನು ಮೊದಲ ಬಾರಿಗೆ ನಟಿಸಿದ್ದೇವೆ. ಅಲ್ಲದೆ ಚಿತ್ರದಲ್ಲಿ ನನ್ನ ಪಾತ್ರವನ್ನು ಬೇರೆ ರೀತಿಯಲ್ಲಿ ರೂಪಿಸಿದ್ದಾರೆ. ಈ ಕಾರಣಕ್ಕೆ ನನಗೆ ಚಿತ್ರದ ಮೇಲೆ ಸಾಕಷ್ಟುಭರವಸೆ ಇದೆ.- ಯಜ್ಞಾ ಶೆಟ್ಟಿ

ಈಗಾಗಲೇ ಚಿತ್ರದ ಟೀಸರ್‌, ಟ್ರೇಲರ್‌ ಹಾಗೂ ಹಾಡುಗಳು ಬಿಡುಗಡೆಯಾಗಿವೆ. ರಕ್ಷಿತ್‌ ಶೆಟ್ಟಿ, ಗಣೇಶ್‌, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೀಗೆ ಹಲವರು ಈ ಚಿತ್ರದ ಟೀಸರ್‌, ಟ್ರೈಲರ್‌ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಟ್ರೇಲರ್‌ಗೆ ವಿಶೇಷವಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಜೈಲಿನಲ್ಲಿಯೂ 'ಡಿ ಬಾಸ್' ದರ್ಬಾರ್: ಮಲಗಿದ್ದ ಸಹ ಕೈದಿಗಳನ್ನು ಕಾಲಿನಿಂದ ಒದ್ದು ನಟ ದರ್ಶನ್ ದರ್ಪ
ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?