
ಸೂರ್ಯ ಎಂಬ ಹುಡುಗನ ಸುತ್ತಾ ಸುತ್ತುವ ಕಲರ್‌ಫುಲ್ ಸ್ಟೋರಿ ಈ ಮಳೆಬಲ್ಲು. ತಾನು ಪ್ರೀತಿಸುವ ಹುಡುಗಿ ಮಳೆ ಬಿಲ್ಲಿನಂತೆ ಇರಬೇಕು ಎನ್ನುವುದು ಅವನ ಆಸೆ. ಆದರೆ ವಿಧಿಯಾಟ ಅವನಿಗೆ ಮತ್ತೊಂದನೇ ರೆಡಿ ಮಾಡಿತ್ತು.
2010-2011ರಲ್ಲಿ ನಡೆದ ನೈಜ ಘಟನೆಯಾದ ಈ ಚಿತ್ರ ಈಗಿನ ಯೂಥ್‌ಗೆ ಇಷ್ಟವಾಗುವುದಂತೂ ಗ್ಯಾರಂಟಿ, ಈ ಲವ್‌ಸ್ಟೋರಿ ಕೊಂಚ ಟ್ವಿಸ್ಟ್ ಸೇರಿಕೊಂಡು ಚಿತ್ರಕ್ಕೆ ಹೊಸ ರೂಪವೇ ನೀಡುತ್ತದೆ. ಚಿತ್ರದ ನಿರ್ದೇಶಕ ಸಾಯಿಪ್ರಕಾಶ್ ಹಾಗೂ ಫಿಲ್ಮ್ ಛೇಂಬರ್ ಅಧ್ಯಕ್ಷರಾದ ಚೆನ್ನೇಗೌಡರು ಈ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇನ್ನು ಸಿನಿಮಾದಲ್ಲಿ ಕೆಲವೊಂದು ಪಂಚ್ ಡೈಲಾಗ್‌ಗಳಿದ್ದು, ಜನರ ಮನಸ್ಸು ಗೆದ್ದಿದೆ, 'ಸ್ವಾಭಿಮಾನಿ ಹುಡುಗನ್ನೊಬ್ಬ ಕನ್ನಡ ಅಭಿಮಾನವನ್ನು ಎತ್ತಿಡಿಯುವುದು ಈ ಸೂರ್ಯ' ಎಂದು ಹಾಗೂ 'ಯಾವ ಮಣ್ಣಲ್ಲಿ ಕಸ್ತೂರಿಯ ಕಂಪು ಇರುತ್ತೂ ಅಂತ ಊರನ ಕರುನಾಡು ಅಂತಾರೆ' ಎಂದು ಭಾಷಾಭಿಮಾನವನ್ನು ಎತ್ತಿಡಿದಿದ್ದಾರೆ.
ಅನನ್ಯ ಸಿನಿ ಎಂಟರ್‌ಪ್ರೈಸಸ್ ರವರ ಪ್ರಥಮ ಕಾಣಿಕೆಯಾಗಿ 'ಮಳೆ ಬಿಲ್ಲು' ಚಿತ್ರ ಮೂಡಿ ಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.