'ಆ ವೇಶ್ಯೆ ಕನ್ನಡದವಳಲ್ಲ, ಮುಂಬೈಗೆ ವಾಪಸ್ ಕಳುಹಿಸಿ' - ಸ್ಯಾಂಡಲ್ವುಡ್'ನಲ್ಲೊಂದು ಕೋಳಿಜಗಳ

Published : Dec 28, 2016, 11:42 AM ISTUpdated : Apr 11, 2018, 12:49 PM IST
'ಆ ವೇಶ್ಯೆ ಕನ್ನಡದವಳಲ್ಲ, ಮುಂಬೈಗೆ ವಾಪಸ್ ಕಳುಹಿಸಿ' - ಸ್ಯಾಂಡಲ್ವುಡ್'ನಲ್ಲೊಂದು ಕೋಳಿಜಗಳ

ಸಾರಾಂಶ

'ಮಂಡ್ಯ ಟು ಮುಂಬೈ ಚಿತ್ರದಲ್ಲಿ ಎರಡು ಹಾಟ್‌ ದೃಶ್ಯಗಳಲ್ಲಿ ನಟಿಸಿದ್ದೇನೆ. ಅಷ್ಟಕ್ಕೆ ನನಗೆ ವೇಶ್ಯೆ ಪಟ್ಟಕಟ್ಟಿದ್ದಾರೆ. ನಾನು ಕನ್ನಡದವರು ಅಲ್ಲ ಎಂದಿದ್ದಾರೆ. ನಾನು ಹುಟ್ಟಿದ್ದು ಬೆಂಗಳೂರಿನ ಮಾರ್ಥಸ್‌ ಆಸ್ಪತ್ರೆಯಲ್ಲಿ. ಬೆಳೆದಿದ್ದೂ ಇಲ್ಲಿಯೇ. ಯಾವುದೇ ನಟಿ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಬೇಕು' ಎಂದು ಸಂಜನಾ ಚಾಟಿ ಬೀಸಿದ್ದಾರೆ.

ಇದು ಇಬ್ಬರ ನಟಿಯರ ಕೋಳಿಜಗಳದ ಕತೆ. ಕೆಲವು ದಿನಗಳಿಂದ ಮುಸುಕಿನ ಮುನಿಸಾಗಿದ್ದ ಈ ಸಂಗತಿ ದಿಢೀರನೆ ಹೊರಬಿದ್ದಿದೆ! ಒಬ್ಬರು ‘ಆ ವೇಶ್ಯೆ, ಕನ್ನಡದವಳೇ ಅಲ್ಲ. ಮುಂಬೈಗೆ ವಾಪಸು ಕಳುಹಿಸಿ' ಅಂತ ಹೇಳಿದ್ದರೆ, ‘ನಾನು ವೇಶ್ಯೆನಾ? ನಾನು ನಾರ್ತ್ ಇಂಡಿಯನ್‌ ಹುಡುಗಿನಾ? ಒಂದೆರಡು ಹಾಟ್‌ ದೃಶ್ಯಗಳಲ್ಲಿ ನಟಿಸಿದ್ದಕ್ಕೆ ನನಗೇ ವೇಶ್ಯೆ ಪಟ್ಟಕಟ್ಟೋದಾ?' ಎಂದು ಗರಂ ಆಗಿ ಮತ್ತೊಬ್ಬ ನಟಿಯನ್ನು ಪ್ರಶ್ನಿಸಿದ್ದಾರೆ.

ಈ ಮಾತಿನ ಸಮರದ ಕೇಂದ್ರಬಿಂದುಗಳು ನಟಿಯರಾದ ಸಂಜನಾ ಹಾಗೂ ಅಮೃತಾ ರಾವ್‌. ಇವರಿಬ್ಬರು ಒಟ್ಟಿಗೆ ನಟಿಸಿರುವ ‘ಮಂಡ್ಯ ಟು ಮುಂಬೈ' ಚಿತ್ರವೇ ಇವರ ಜಗಳದ ಮುಖ್ಯ ವೇದಿಕೆ‡. ವಿಷಯ ಇಷ್ಟೇ, ಅಮೃತಾ ರಾವ್‌ ಈ ಚಿತ್ರದ ನಾಯಕಿ. ಅವರಿಗೆ ಇದು ಮೊದಲ ಸಿನಿಮಾ ಬೇರೆ. ರಾಕೇಶ್‌ ಅಡಿಗ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಚಿತ್ರದ ಪೋಸ್ಟರ್‌ಗಳಲ್ಲಿ ಅಮೃತಾ ರಾವ್‌ ಅವರ ಅಕ್ಕ ಆಗಿ ನಟಿಸಿರುವ ಸಂಜನಾ ಅವರ ಫೋಟೋಗಳನ್ನೇ ಚಿತ್ರದ ಪೋಸ್ಟರ್‌ಗಳಲ್ಲಿ ದೊಡ್ಡದಾಗಿ ಬಳಸಲಾಗಿದೆ. ನಾಯಕಿಯಾಗಿದ್ದರೂ ತಮ್ಮ ಫೋಟೋ ಬಳಸಿಕೊಂಡಿಲ್ಲ ಎಂಬುದು ಅಮೃತಾ ಅರೋಪ. ಸಂಜನಾ ಈ ಚಿತ್ರದಲ್ಲೂ ವೇಶ್ಯೆ ಪಾತ್ರ ಮಾಡಿದ್ದಾರೆ. ‘ಸಂಜನಾ ಕನ್ನಡದವಳೇ ಅಲ್ಲ, ಅವಳನ್ನು ಮುಂಬೈಗೆ ವಾಪಸು ಕಳುಹಿಸಿ' ಎಂದು ಸೋಷಿಯಲ್‌ ಮೀಡಿಯಾಗಲ್ಲಿ ಅಮೃತಾ ಬರೆದುಕೊಂಡಿದ್ದಾರೆ.

ಅಮೃತಾ ರಾವ್‌'ರ ಈ ಮಾತಿಗೆ ಸಂಜನಾ ಸಿಟ್ಟಾಗಿದ್ದಾರೆ. ಅಲ್ಲದೆ ಅಮೃತಾ ರಾವ್‌ ಚಿತ್ರದ ಪ್ರಚಾರದಿಂದಲೇ ದೂರವುಳಿದಿದ್ದಾರೆ. ‘ಚಿತ್ರರಂಗಕ್ಕೆ ಬರುವ ಹೊಸಬರಿಗೆ ಹೇಗೆ ವರ್ತಿಸಬೇಕು ಅನ್ನುವುದು ಗೊತ್ತಿಲ್ಲ. ಚಿತ್ರದ ಹೆಚ್ಚು ಪ್ರಚಾರಕ್ಕಾಗಿ ನನ್ನ ಫೋಟೋಗಳನ್ನು ಹಾಕಿಕೊಳ್ಳಿ ಅಂತ ಹೇಳಿದ್ದು ನಾನಲ್ಲ. ಅದು ನಿರ್ದೇಶಕರ ತೀರ್ಮಾನ. ಆದರೆ, ಅಮೃತಾ ರಾವ್‌ ಪತ್ರಿಕೆಯೊಂದಕ್ಕೆ ಸಂದರ್ಶನ ಕೊಟ್ಟು ನನ್ನ ವ್ಯಕ್ತಿತ್ವಕ್ಕೆ ದಕ್ಕೆ ತರುವಂಥ ಮಾತುಗಳನ್ನು ಆಡಿದ್ದಾರೆ. ಮಂಡ್ಯ ಟು ಮುಂಬೈ ಚಿತ್ರದಲ್ಲಿ ಎರಡು ಹಾಟ್‌ ದೃಶ್ಯಗಳಲ್ಲಿ ನಟಿಸಿದ್ದೇನೆ. ಅಷ್ಟಕ್ಕೆ ನನಗೆ ವೇಶ್ಯೆ ಪಟ್ಟಕಟ್ಟಿದ್ದಾರೆ. ನಾನು ಕನ್ನಡದವರು ಅಲ್ಲ ಎಂದಿದ್ದಾರೆ. ನಾನು ಹುಟ್ಟಿದ್ದು ಬೆಂಗಳೂರಿನ ಮಾರ್ಥಸ್‌ ಆಸ್ಪತ್ರೆಯಲ್ಲಿ. ಬೆಳೆದಿದ್ದೂ ಇಲ್ಲಿಯೇ. ಯಾವುದೇ ನಟಿ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಬೇಕು' ಎಂದು ಚಾಟಿ ಬೀಸಿದ್ದಾರೆ. ‘ಮಂಡ್ಯ ಟು ಮುಂಬೈ' ಸಿನಿಮಾ ಬಿಡುಗಡೆಯಾಗುತ್ತಿರುವ ಹೊತ್ತಿನಲ್ಲಿ ಚಿತ್ರದ ಇಬ್ಬರು ನಟಿಯರ ಈ ಮಾತಿನ ಸಮರ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಸಂಜನಾ ನಮ್ಮ ಚಿತ್ರದ ನಾಯಕಿಯೇ ಅಲ್ಲ. ಆಕೆ ಇಲ್ಲಿ ವೇಶ್ಯೆ ಪಾತ್ರ ಮಾಡಿದ್ದಾರೆ. ಚಿತ್ರದ ನಾಯಕಿ ನಾನು. ಆದರೂ ಚಿತ್ರದ ಪೋಸ್ಟರ್‌'ಗಳಲ್ಲಿ ನನ್ನ ಫೋಟೋವನ್ನು ಬಳಸಿಲ್ಲ. ಪೋಸ್ಟರ್‌'ನಲ್ಲಿ ಸಂಜನಾ ಅವರಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. 
- ಅಮೃತಾ ರಾವ್‌, ನಟಿ

ಸಿನಿಮಾ ಪೋಸ್ಟರ್‌'ಗಳಲ್ಲಿ ಯಾರ ಫೋಟೋ ಹಾಕಬೇಕು ಎಂಬುದು ಚಿತ್ರದ ನಿರ್ದೇಶಕರಿಗೆ ಸಂಬಂಧಿಸಿದ ವಿಚಾರ. ಆದರೆ, ಆ ಬಗ್ಗೆ ಮಾತನಾಡುವ ಬದಲು ನನ್ನ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಒಂದೆರಡು ಹಾಟ್‌ ದೃಶ್ಯಗಳಲ್ಲಿ ಕಾಣಿಸಿಕೊಂಡ ನನಗೆ ವೇಶ್ಯೆ ಪಟ್ಟ ಕಟ್ಟಿದ್ದಾರೆ.
- ಸಂಜನಾ, ನಟಿ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಮಿತಾಭ್ 14 ಚಿತ್ರಗಳ ರೀಮೇಕ್ ಮಾಡಿ, 33 ವರ್ಷಗಳ ಬಳಿಕ ಅಮಿತಾಭ್ ಜೊತೆ ನಟಿಸಿದ ನಟ ರಜನಿಕಾಂತ್!
ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!