
ತೆಲುಗಿನಲ್ಲಿ ಚಾರ್ಮಿ ಕೌರ್ ನಟನೆಯಲ್ಲಿ ‘ಮಂತ್ರಂ’ ಎಂಬ ಹೆಸರಿನಲ್ಲಿ ಎರಡು ಭಾಗ ಬಂದಿದೆ. ಹಾಗೆ ಕನ್ನಡದ ‘ಮಂತ್ರಂ’ ನೋಡುವ ಭಾಗ್ಯ. ಹಾಗಂತ ಇದು ತೆಲುಗಿನ ‘ಮಂತ್ರಂ’ ಚಿತ್ರದ ರೀಮೇಕ್ ಅಲ್ಲ. ಪಕ್ಕಾ ಸ್ವಮೇಕ್ ಸಿನಿಮಾ. ಅಮರ್ ಚೌಧರಿ ನಿರ್ಮಾಣದ ಈ ಚಿತ್ರವನ್ನು ಎಸ್‌ಎಸ್ ಸಜ್ಜನ್ ನಿರ್ದೇಶಿಸಿದ್ದಾರೆ.
ಇತ್ತೀಚೆಗೆ ಚಿತ್ರದ ಟ್ರೇಲರ್ ಹಾಗೂ ಆಡಿಯೋ ಸೀಡಿ ಮಾರುಕಟ್ಟೆಗೆ ಬಂದಿದೆ. ಐದು ಮಂದಿ ಹುಡುಗರು, ಒಬ್ಬ ಹುಡುಗಿಯ ಸುತ್ತ ಸಾಗುವ ಸಿನಿಮಾ ಇದು. ಈ ಪೈಕಿ ಮಣಿ ಶೆಟ್ಟಿ ಹಾಗೂ ಪಲ್ಲವಿ ರಾಜು ಚಿತ್ರದ ಮುಖ್ಯಪಾತ್ರಧಾರಿಗಳು. ಇದೇ ತಿಂಗಳು 24ರಂದು ಚಿತ್ರ ತೆರೆಗೆ ಬರುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಹಾರರ್ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿರುವ ಬಂಗಲೆಯದ್ದೇ ಒಂದು ಕತೆ.
ಅದು ರಾಯಚೂರಿನಲ್ಲಿರುವ ಖಾಜಾಗೌಡರ ಬಂಗಲೆ. ಆದರೆ, ಇದನ್ನು ಎಲ್ಲರೂ ಕರೆಯುವುದು ಭೂತ ಬಂಗಲೆ ಅಂತಲೇ. ಈ ಬಂಗಲೆಯಲ್ಲಿ ಶೂಟಿಂಗ್ ಮಾಡಿರುವ ಚಿತ್ರ ತಂಡಕ್ಕೆ ಕಾಣದ ಶಕ್ತಿಗಳು ಕಾಟ ಕೊಟ್ಟಿವೆಯಂತೆ. ಕಾರು ಆ್ಯಕ್ಸಿಡೆಂಟ್ ಆಗಿ ಆಸ್ಪತ್ರೆ ಸೇರುವ ಮಟ್ಟಿಗೆ ಭೂತ ಬಂಗಲೆಯಲ್ಲಿ ಹತ್ತಾರು ಮಾಯೆಗಳು ನಡೆದಿವೆಯಂತೆ. ಅಂದಹಾಗೆ 250 ವರ್ಷಗಳ ಹಳೆಯದಾದ ಈ ಬಂಗಲೆಗೆ ಬರೋಬ್ಬರಿ 100 ಕಿಟಿಕಿಗಳಿವೆ. 50 ಬಾಗಿಲುಗಳು, 20 ಹೆಚ್ಚು ವಿಶಾಲವಾದ ಕೋಣೆಗಳಿವೆ.
‘ನಾವು ಹಾರರ್ ಸಿನಿಮಾ ಮಾಡಬೇಕು ಎಂದು ಕೊಂಡಾಗ ಚಿತ್ರೀಕರಣ ಮಾಡುವ ಜಾಗ ಕೂಡ ಜನರಲ್ಲಿ ಭಯ ಬೀಳಿಸುವಂಥದ್ದಿರಬೇಕು ಎಂದು ಅಂಥ ಜಾಗಕ್ಕಾಗಿ ಹುಡುಕು ತ್ತಿದ್ದಾಗ ಪರಿಚಯಸ್ಥರ ಮೂಲಕ ರಾಯಚೂರಿನಲ್ಲಿರುವ ಭೂತ ಬಂಗಲೆ ವಿಷಯ ಗೊತ್ತಾಗಿ ಅಲ್ಲಿಗೆ ಹೋದ್ವಿ. ಬಹಳಷ್ಟು ಜನ ಚಿತ್ರೀಕರಣ ಮಾಡಬೇಡಿ. ಅಲ್ಲಿ ದೆವ್ವಗಳಿವೆ ಎಂದರು. ಆದರೆ, ನಾವು ಅದನ್ನು ನಂಬದೆ ಶೂಟಿಂಗ್ ಮಾಡಿದ್ವಿ. ಚಿತ್ರೀಕರಣ ಮಾಡುವಾಗ ಸಾಕಷ್ಟು ತೊಂದರೆ ಆಗಿದ್ದು ನಿಜ. ಆದರೆ, ಎಲ್ಲ ತೊಂದರೆಗಳನ್ನು ಎದುರಿಸಿ ಐತಿಹಾಸಿಕ ಬಂಗಲೆಯಲ್ಲಿ ಚಿತ್ರೀಕರಣ ನಡೆಸಿ ದ್ದೇವೆಂಬ ಹೆಮ್ಮೆ ಇದೆ’ ಎನ್ನುತ್ತಾರೆ ನಿರ್ದೇಶಕ ಸಜ್ಜನ್. ಚಿತ್ರದಲ್ಲಿರುವ ಆರು ಹಾಡುಗಳು ರಶೀದ್ ಖಾನ್ ಸಂಗೀತ ಸಂಯೋಜನೆ ಯಲ್ಲಿ ಮೂಡಿಬಂದಿವೆ. ‘ನನಗೆ ಇದು ಮೊದಲ ನಿರ್ಮಾಣದ ಚಿತ್ರ. ಮೊದಲ ಚಿತ್ರವೇ ಸಿಕ್ಕಾಪಟ್ಟೆ ಹಾರರ್‌ನಿಂದ ಕೂಡಿರಬೇಕು ಎನ್ನುವ ಕಾರಣಕ್ಕೆ ರಾಯಚೂರಿನಲ್ಲಿರುವ ಭೂತ ಬಂಗಲೆಯಲ್ಲಿ ಚಿತ್ರೀಕರಣ ಮಾಡಿದ್ದು. ಈಗ ಟ್ರೇಲರ್ ನೋಡಿದವರು ಮೆಚ್ಚಿದ್ದಾರೆ’ ಎನ್ನುತ್ತಾರೆ ಅಮರ್ ಚೌಧರಿ.
--
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.