
ಕನ್ನಡದ ಖ್ಯಾತ ಬರಹಗಾರ ಮತ್ತು ಸಿನಿಮಾ ನಿರ್ದೇಶಕ ಪುನೀತ್ ಅವರು ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರು ಕಥೆ ಬರೆದು ನಿರ್ದೇಶಿಸುತ್ತಿರುವ 'ಅಚ್ಯುತ ಅವತಾರಂ' ಸಿನಿಮಾದ ಸೆಕೆಂಡ್ ಲುಕ್ ಮೋಷನ್ ಪೋಸ್ಟರ್ ಈಗ ರಿಲೀಸ್ ಆಗಿದೆ. ಈ ಚಿತ್ರವು ಮಲಯಾಳಂ ಮಾತ್ರವಲ್ಲದೆ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲೂ ತೆರೆ ಕಾಣಲಿದೆ. ಚಿತ್ರತಂಡ ಇದನ್ನು ಒಂದು ಪ್ಯಾನ್ ಇಂಡಿಯಾ ಸಿನಿಮಾವಾಗಿ ನಿರ್ಮಿಸಿದೆ.
ಇದೊಂದು ಸೈಬರ್ ಕ್ರೈಂ ಥ್ರಿಲ್ಲರ್ ಜಾನರ್‌ನ ಸಿನಿಮಾ. ಬಿಡುಗಡೆಯಾಗಿರುವ ಹೊಸ ಮೋಷನ್ ಪೋಸ್ಟರ್‌ನಲ್ಲಿ ನಾಯಕಿ ಮಾಳವಿಕಾ ನಂದನ್ ಕಾಣಿಸಿಕೊಂಡಿದ್ದಾರೆ. ಅವರ ಸುತ್ತಲೂ ಸೈಬರ್ ಕ್ರೈಂ ಸುದ್ದಿಗಳನ್ನು ತೋರಿಸುವ ಮೊಬೈಲ್‌ಗಳಿವೆ. ಸೈಬರ್ ಲೋಕದ ಚಟಕ್ಕೆ ಬಿದ್ದಾಗ ಎದುರಾಗುವ ಭಯಾನಕ ಪರಿಣಾಮಗಳ ಬಗ್ಗೆ ಈ ಸಿನಿಮಾ ಪ್ರೇಕ್ಷಕರಿಗೆ ವಿವರಿಸಲಿದೆ. ರೇರಾ ವೆಂಚರ್ಸ್ ಬ್ಯಾನರ್ ಅಡಿಯಲ್ಲಿ ರಮೇಶ ಸಿ, ರುದ್ರಮೂರ್ತಿ ಮತ್ತು ರಾಜೇಶ್ ಆರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಈ ಚಿತ್ರದಲ್ಲಿ ಖ್ಯಾತ ನೃತ್ಯಗಾರ್ತಿ ಮತ್ತು ನಟಿ ಮಾಳವಿಕಾ ನಂದನ್, 'ಕಾಂತಾರ' ಖ್ಯಾತಿಯ ಅವಿನಾಶ್, ಸೀಮಾ ಜಿ. ನಾಯರ್ ಜೊತೆಗೆ ಬೇರೆ ಭಾಷೆಗಳ ಹಲವು ಕಲಾವಿದರು ಕೂಡ ನಟಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಆನಂದ್ ಮೀನಾಕ್ಷಿ ಅವರು ಈ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಮಂಗಳಾಪುರಂ ಮತ್ತು ಕಾಸರಗೋಡಿನಲ್ಲಿ ಶೂಟಿಂಗ್ ಮುಗಿಸಿರುವ ಈ ಸಿನಿಮಾ, ಮೇ ತಿಂಗಳಲ್ಲಿ ಥಿಯೇಟರ್‌ಗಳಿಗೆ ಬರುವ ನಿರೀಕ್ಷೆಯಿದೆ.
ಹರೀಶ್ ಮೋಹನನ್ ಅವರ ಸಾಹಿತ್ಯಕ್ಕೆ ಪ್ರಸನ್ನ ಕುಮಾರ್ ಎಂ.ಎಸ್. ಸಂಗೀತ ಸಂಯೋಜಿಸಿದ್ದಾರೆ. ಪವನ್ ಪೂವಯ್ಯ ಮತ್ತು ಮಹೇಶ್ ತೋಟ (ಎಡಿಟಿಂಗ್), ನಾಗರಾಜು ಮತ್ತು ನವೀನ್ (ಕಲೆ), ಐಡೆಂಟ್ ಲ್ಯಾಬ್ಸ್ (ವಿಎಫ್‌ಎಕ್ಸ್ ಮತ್ತು ಡಿಸೈನ್ಸ್), ಲೋಹಿತ್ ಶೆಟ್ಟಿ ಪಾಲ್ಗೆ ಮತ್ತು ಅಖಿಲ್ ಉಚಿಲ್ (ಲೈನ್ ಪ್ರೊಡ್ಯೂಸರ್), ವಿಕಾಸ್ ಮತ್ತು ಶಿಜಿನಿ (ಮೇಕಪ್), ಮಂಜುನಾಥ್ ವಿ (ವಸ್ತ್ರ ವಿನ್ಯಾಸ), ವಿಶ್ವನಾಥ್ ಬಿ.ಎಚ್. ಕುಮಾರ್ ಮತ್ತು ಜಗದೀಶ್ ಮಳವಳ್ಳಿ (ಪ್ರೊಡಕ್ಷನ್ ಕಂಟ್ರೋಲರ್), ವೈಟ್ ಪೇಪರ್ (ಡಿಜಿಟಲ್ ಮಾರ್ಕೆಟಿಂಗ್) ಮತ್ತು ಪಿ. ಶಿವಪ್ರಸಾದ್ (ಪಿಆರ್‌ಒ) ಚಿತ್ರದ ಇತರ ತಾಂತ್ರಿಕ ಬಳಗದಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.