'ಅಮ್ಮನ ತೋಟ'ದಲ್ಲಿ ಪಿತೃಪಕ್ಷ ಆಚರಿಸಿದ ಜೋಗಿ ಪ್ರೇಮ್, ರಕ್ಷಿತಾ ಕುಟುಂಬ

Published : Oct 11, 2026, 05:20 PM IST
Jogi Prem and Rakshita

ಸಾರಾಂಶ

ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಟಿ ರಕ್ಷಿತಾ ದಂಪತಿ ತಮ್ಮ 'ಅಮ್ಮನ ತೋಟ'ದಲ್ಲಿ ಪಿತೃಪಕ್ಷದ ಅಂಗವಾಗಿ ಹಿರಿಯರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಗಲಿದ ಹಿರಿಯರನ್ನು ಸ್ಮರಿಸಿ, ಸಾಂಪ್ರದಾಯಿಕ ಅಡುಗೆ ಹಾಗೂ ನೈವೇದ್ಯಗಳನ್ನು ಅರ್ಪಿಸಿರುವ ವಿಡಿಯೋ ವೈರಲ್ ಆಗಿದೆ.

ಬೆಂಗಳೂರು (ಅಕ್ಟೋಬರ್ 11): ಕನ್ನಡದ ಜನಪ್ರಿಯ ನಿರ್ದೇಶಕ ಜೋಗಿ ಪ್ರೇಮ್ ಹಾಗೂ ನಟಿ ರಕ್ಷಿತಾ (Jogi Prem and Rakshita) ದಂಪತಿ ಪಿತೃಪಕ್ಷವನ್ನು (Pitru Paksha) ಆಚರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅಭಿಮಾನಿಗಳಿಂದ ಈ ಸಾಂಪ್ರದಾಯಿಕ ಆಚರಣೆಗೆ ಮೆಚ್ಚುಗೆಗೆ ಪಾತ್ರವಾಗಿದೆ.

ಅಮ್ಮನ ತೋಟದಲ್ಲಿ ಹಿರಿಯ ಸ್ಮರಿಸಿದ ಜೋಗಿ ಪ್ರೇಮ್

ಸ್ಟಾರ್ ಜೋಡಿ 'ಅಮ್ಮನ ತೋಟ'ದಲ್ಲಿ ತಮ್ಮನ್ನು ಅಗಲಿರುವ ಕುಟುಂಬದ ಹಿರಿಯರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜೋಗಿ ಪ್ರೇಮ್ ಒಡೆತದನ ಅಮ್ಮನ ತೋಟದಲ್ಲಿ ಈ ಪೂಜಾ ಕಾರ್ಯಕ್ರಮಗಳನ್ನ ನಡೆದಿವೆ. ಇನ್ನು, ರಕ್ಷಿತಾ ಹಾಗೂ ಪ್ರೇಮ್ ದಂಪತಿ ತಮ್ಮ ಕುಟುಂಬ ಸಮೇತ ತೋಟಕ್ಕೆ ಆಗಮಿಸಿತ್ತು.

ಅಲ್ಲಿ ಅಗಲಿದ ಹಿರಿಯರ ಭಾವಚಿತ್ರಗಳಿಗೆ ಹೂವಿನ ಹಾರ ಹಾಕಿ, ದೀಪ ಹಚ್ಚಿ ನಮನ ಸಲ್ಲಿಸಿದ್ದಾರೆ. ಜೊತೆಗೆ ಪಿತೃಗಳಿಗೆ ಪ್ರಿಯವಾದ ಸಾಂಪ್ರದಾಯಿಕ ಅಡುಗೆ ಹಾಗೂ ನೈವೇದ್ಯಗಳನ್ನು ಅರ್ಪಿಸಿ ಪ್ರಾರ್ಥಿಸಿದ್ದಾರೆ. ಇನ್ನು, ಪೂಜೆ ಬಳಿಕ ರಕ್ಷಿತಾ ಅವರು ಇನ್‌ಸ್ಟಾ ಸ್ಟೋರಿಸ್‌ನಲ್ಲಿ ಫೋಟೋ ಜೊತೆಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಭಕ್ತಿಪೂರ್ವಕ ಪೂಜೆಯ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಸಾಂಪ್ರದಾಯಿಕ ಆಚರಣೆಗೆ ಅಭಿಮಾನಿಗಳು ಮೆಚ್ಚುಗೆಗೆ ವ್ಯಕ್ತಪಡಿಸ್ತಿದ್ದಾರೆ.

ಪಿತೃಪಕ್ಷದ ವಿಶೇಷತೆ

ಅಗಲಿದ ಕುಟುಂಬಸ್ಥರನ್ನು ನೆನೆದು ವಿಧಿ ವಿಧಾನಗಳನ್ನ ಪಿತೃಪಕ್ಷದಲ್ಲಿ ನಡೆಸಲಾಗುತ್ತದೆ. ಈ ಬಾರಿ ಪಿತೃ ಪಕ್ಷವು ಸೆಪ್ಟೆಂಬರ್ 27 ರಿಂದ ಪ್ರಾರಂಭ ಆಗಿತ್ತು. ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಾಡ್ಯದಿಂದ ಆರಂಭವಾದ ಪಿತೃ ಪಕ್ಷವು 15 ದಿನಗಳ ಕಲ ನಡೆದಿದೆ. ಅಕ್ಟೋಬರ್ 10 ರಂದು ಅಂದರೆ ನಿನ್ನೆಗೆ ಪಿತೃ ಪಕ್ಷವು ಮುಗಿದಿದೆ.

ಈ ಪಿತೃಪಕ್ಷದಲ್ಲಿ ಮನೆಯ ಹಿರಿಯ ಸದಸ್ಯರನ್ನು ನೆನೆಯುವುದು ಶ್ರೇಷ್ಠ ಮತ್ತು ಶ್ರೇಯಸ್ಸು ಆಗಲಿದೆ ಅನ್ನೋದು ಹಿಂದೂ ಸಂಪ್ರದಾಯದ ನಂಬಿಕೆ ಆಗಿದೆ. ಈ ದಿನದಲ್ಲಿ ಮನೆಯಲ್ಲಿ ಯಾವುದೇ ಶುಭ ಕಾರ್ಯಗಳನ್ನ ಮಾಡುವುದಿಲ್ಲ. ಪಿತೃಗಳಿಗಾಗಿ ಇರುವ ಮೀಸಲು ದಿನ ಎಂದೇ ನಂಬಲಾಗಿದೆ.

ಪಿತೃ ಪಕ್ಷ ಪಾಲನೆ ಮಾಡೋದು ಮನೆಯನ್ನ ಶುಚಿಗೊಳಿಸಿ ಧಾರ್ಮಿಕ ಶಾಸ್ತ್ರೋಕ್ತವಾಗಿ ವಿಧಿ ವಿಧಾನಗಳನ್ನು ನಡೆಸಿದ ಅಗಲಿದ ಹಿರಿಯರನ್ನು ಸ್ಮರಿಸಲಾಗುತ್ತದೆ. ಪ್ರಾರ್ಥನೆ ಮೂಲಕ ಪಿಂಡ ಪ್ರದಾನ ಮಾಡಲಾಗುತ್ತದೆ. ಹೆಚ್ಚಾಗಿ ಹಿರಿಯರಿಗೆ ಪಿಂಡ ಪ್ರದಾನ ಮಾಡಿರೋದನ್ನ ನೀರನಲ್ಲಿ ತೇಲಿ ಬಿಡಲಾಗುತ್ತದೆ. ಇನ್ನೂ ಕೆಲವರು ಪಿಂಡವನ್ನು ಗೋವುಗಳಿಗೆ ತಿನ್ನಿಸುತ್ತಾರೆ. ಕಾಗೆಗಳಿಗೆ ನೀಡುತ್ತಾರೆ. ಅದೂ ಸಾಧ್ಯವಾಗದೇ ಇದ್ದಲ್ಲಿ ಹೊಲದಲ್ಲಿರುವ ಜಾಗದಲ್ಲಿ ಗುಂಡಿಯನ್ನು ತೋಡಿ ಅದರೊಳಗೆ ಮುಚ್ಚುತ್ತಾರೆ. ಅದಾದ ನಂತರ ಬಂಧು ಮಿತ್ರರು ಸೇರಿ ಭೋಜನ ಸ್ವೀಕಾರ ಮಾಡುತ್ತಾರೆ.

ಹಿಂದೂ ಧರ್ಮ ಶಾಸ್ತ್ರದ ಪ್ರಕಾರ.. ಪಿತೃಪಕ್ಷದ ಕೊನೆಯ ದಿನ ಮಹಾಲಯ ಅಮಸ್ಯೆ ಬರಲಿದೆ. ಈ ದಿನ ಪಿಂಡ ಪ್ರದಾನಕ್ಕೆ ಹೆಚ್ಚು ಶ್ರೇಷ್ಠ ಎಂದು ನಂಬಲಾಗಿದೆ. ಮಹಾಲಯ ಅಮಾವಾಸ್ಯೆ ದಿನ ನಮ್ಮನ್ನ ಅಗಲಿದ ಹಿರಿಯರ ಸ್ಮರಣಾರ್ಥ ತರ್ಪಣ ಅರ್ಪಿಸಿದರೆ ಮನೆಗೆ ಹಿರಿಯರ ಆಶೀರ್ವಾದ ಸಿಗಲಿದೆ. ಮನೆಯ ಅಭಿವೃದ್ಧಿ ಆಗಲಿದೆ. ಅಗಲಿದ ಹಿರಿಯರು ಸಂತುಷ್ಟರಾಗಿ ವಂಶಸ್ಥರಿಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನು ಯಾವುದಕ್ಕೂ ಹೆದರದ ಮಹಿಳೆ, ಯಾರೇ ಅಡ್ಡ ಬಂದ್ರೂ ಲೆಕ್ಕಿಸುವುದಿಲ್ಲ: ವಿದ್ಯಾ ಬಾಲನ್
ಅಗ್ನಿ ಪರೀಕ್ಷೆಯಲ್ಲಿ ಜನರ ಆಯ್ಕೆ ಸರಿಯಾಗಿತ್ತು, ಜಡ್ಜಸ್ ಆಯ್ಕೆಯೇ ಫೇಲಾಯ್ತು! Bigg Boss ಮನೆಯಿಂದ ಮಂಜು ಔಟ್!